ಮರಕಡ ಬೈಲುಗುತ್ತು ಗರಡಿಮನೆ ಧರ್ಮಚಾವಡಿ ಅಮೀನ್ ಕುಟುಂಬಸ್ಥರ ದೈವದೇವರ ಆರಾಧನ ಸಮಿತಿ ರಿಜಿಸ್ಟರ್ಡ್ ಇದರ ನವೀಕೃತ ಶ್ರೀ ನಾಗಸಾನ್ನಿಧ್ಯ ಗರಡಿಮನೆ, ಧರ್ಮಚಾವಡಿ, ಜಲದುರ್ಗೆ ,ಭದ್ರಕಾಳಿ ಗುಡಿ, ಪಂಚದೈವ ,ಭೈರವ ಶಕ್ತಿ ,ಕಲ್ಲುರ್ಟಿ ಪಂಜುರ್ಲಿ ಹಾಗೂ ಸಂಘ ಪರಿವಾರ ದೈವಗಳ ಸಾನ್ನಿಧ್ಯ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ರವಿವಾರ ಯಶಸ್ವಿಯಾಗಿ ಜರಗಿತು .
ಭಾರತ ಸರಕಾರದ ಮಾಜಿ ಸಚಿವ ಗೌರವಾನ್ವಿತ ಶ್ರೀ ಬಿ. ಜನಾರ್ದನ ಪೂಜಾರಿಯವರು ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು. ಬಂಟ್ವಾಳ ತಾಲ್ಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಕೆ ಸೇಸಪ್ಪ ಕೋಟ್ಯಾನ್ ರವರ ಗೌರವ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಆರಾಧನಾ ಸಮಿತಿಯ ಅಧ್ಯಕ್ಷರಾದ ಮರಕಡಬೈಲು ಗುತ್ತು ಶ್ರೀ ರಾಘವ ಅಮೀನ್ ರವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬದ ಬಂಧುಗಳು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿದರು .
ನಂತರ ಜನಾರ್ದನ ಪೂಜಾರಿ ಅವರು ಮಾತನಾಡಿ ನೂತನವಾಗಿ ವಾಗಿ ನಿರ್ಮಾಣ ಗೊಳ್ಳಲಿರುವ ಈ ಧರ್ಮ ಚಾವಡಿ ಅತಿ ಶೀಘ್ರವಾಗಿ ನಿರ್ಮಾಣವಾಗಲಿ ತನ್ನ ಪೂರ್ಣ ಸಹಕಾರವನ್ನು ಈ ಪುಣ್ಯಕಾರ್ಯಕ್ಕೆ ನೀಡುವುದಾಗಿ ತಿಳಿಸಿ ದರು.
ಕುಟುಂಬದ ಎಲ್ಲಾ ಬಂಧುಗಳು ಈ ಪುಣ್ಯಕಾರ್ಯದಲ್ಲಿ ಕೈಜೋಡಿಸಬೇಕೆಂದರು. ಜನಾರ್ದನ ಪೂಜಾರಿಯವರ ಜತೆಗೆ ಧರ್ಮಪತ್ನಿ ಶ್ರೀಮತಿ ಮಾಲತಿ ಜನಾರ್ದನ ಪೂಜಾರಿ ಮತ್ತು ಮಗ ಸಂತೋಷ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ನಂತರ ಕುಟುಂಬಿಕರ ಸಭೆಯು ಯಶಸ್ವಿಯಾಗಿ ನಡೆಯಿತು . ಕುಟುಂಬಿಕರ ಸಭೆಯ ಅಧ್ಯಕ್ಷತೆ ವಹಿಸಿದ್ದ ಮರಕಡಬೈಲು ಗುತ್ತು ರಾಘವ ಅಮೀನ್ ಕುಟುಂಬದ ಬಂಧುಗಳಿಗೆ ಈ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು . ವೈದಿಕ ಕಾರ್ಯ ಗಳನ್ನು ನಡೆಸಿರುವ ಲೋಕೇಶ್ ಶಾಂತಿ ಅವರು ಆಶೀರ್ವಚನ ನೀಡಿದರು . ಸಮಿತಿಯ ಕಾರ್ಯದರ್ಶಿ ಶ್ರೀಧರ್ ಅಮೀನ್ ವರದಿ ವಾಚಿಸಿದರು . ಕೋಶಾಧಿಕಾರಿ ಸುರೇಂದ್ರ ಅಮೀನ್ ಲೆಕ್ಕಪತ್ರ ಮಂಡಿಸಿದರು . ಉಪಾಧ್ಯಕ್ಷರಾದ ದಿನೇಶ್ ಅಮೀನ್ ನೂತನ ಧರ್ಮ ಚಾವಡಿ ಯ ಬಗ್ಗೆ ವಿವರಗಳನ್ನು ನೀಡಿದರು . ಜತೆ ಕಾರ್ಯದರ್ಶಿ ಸಂದೀಪ್ ಸ್ವಾಗತಿಸಿ ಲೆಕ್ಕ ಪರಿಶೋಧಕರಾದ ಶ್ರೀಮತಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು . ಶಿಲಾನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ಜರುಗಲು ಕಾರಣ ಕರ್ತರಾದ ಕುಟುಂಬದ ಎಲ್ಲ ಬಂಧುಗಳಿಗೆ ಸಮಿತಿಯ ವತಿಯಿಂದ ವಂದನೆಗಳನ್ನು ಸಲ್ಲಿಸುತ್ತಿದ್ದೇವೆ ಮುಂದೆಯೂ ಸಹಕಾರವನ್ನು ಪ್ರತಿ ಸಂದರ್ಭದಲ್ಲಿ ಯಾಚಿಸುತ್ತಿದ್ದೇವೆ ತಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಕೈಜೋಡಿಸಿ ನಮ್ಮ ಕಾರ್ಯಕ್ರಮ ಯಶಸ್ವಿಯಾಗಲು ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.