ಒಡ್ಡಿದಕಲ ಗೋಪಾಲ ಎನ್ನುವವರು ಅಸೌಖ್ಯದಿಂದ ಬಳಲುತ್ತಿದ್ದು, ಇವರು ಬಜ್ಪೆಯ ಪ್ಲಾಮಾ ಬೀಲ್ಡಿಂಗ್ ನ ಎದುರುಗಡೆಯ ಸಣ್ಣ ಅಂಗಡಿಯ ಜಗಲಿಯಲ್ಲಿ ಅಸೌಖ್ಯದಿಂದ ಕಳೆದ ಒಂದು ವಾರದಿಂದ ಮಲಗಿದ್ದರು. ವಾರಸುದಾರರು ಯಾರೂ ಅವರ ಬಳಿ ಬರುತ್ತಿರಲಿಲ್ಲ.
ಇಂದು ಈ ವಿಷಯವನ್ನು ತಿಳಿದ ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಕೆಂಜಾರು ಕಾನ ರವರು ಘಟಕದ ಸದಸ್ಯರಾದ ಸಂದೇಶ್ ಶೆಟ್ಟಿ ಜೋಕಟ್ಟೆ ಅವರೊಂದಿಗೆ ಅಂಬುಲೆನ್ಸ್ ಕರೆಯಿಸಿ, ಸ್ಥಳೀಯ ಅಂಗಡಿ ಮಾಲಕರಾದ ಹಬೀಬ್ ರವರ ಸಹಾಯದೊಂದಿಗೆ ಅಂಬುಲೆನ್ಸ್ ನಲ್ಲಿ ಮಲಗಿಸಿ ನಂತರ ನಗರದ ವೆನ್ಲಾಕ್ ಆಸ್ಪತ್ರೆಗೆ ಹೋಗಿ ಅವರನ್ನು ದಾಖಲಿಸಿದರು.
ವಾರಸುದಾರರು ಹಾಗೂ ಯಾರೂ ಹತ್ತಿರ ಬರದೇ ಇರುವ ಸಂದರ್ಭದಲ್ಲಿ ಅವರ ಚಿಂತಾಜನಕ ಪರಿಸ್ಥಿತಿಯನ್ನು ಮನಗಂಡು ತಕ್ಷಣ ಸ್ಪಂದಿಸಿರುವ ನಿಮ್ಮ ಕಾರ್ಯ ನಿಜಕ್ಕೂ ಶ್ಲಾಘನೀಯ.