ಹೆಣ್ಣುಮಕ್ಕಳನ್ನು ಭಾರತದಲ್ಲಿ ಪೂಜನೀಯ ಭಾವನೆಯಲ್ಲಿ ನೋಡುತ್ತೇವೆ. ಆದರೆ ಇತ್ತೀಚೆಗೆ ಸಾಮಾಜಿಕ ಕಾರ್ಯಕರ್ತೆ ಪ್ರತಿಭಾಕುಳಾಯಿ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಮಾನಹಾನಿಕಾರವಾಗಿ ಬರೆದಿರುವ ಆರೋಪಿಗಳನ್ನು ಇನ್ನೂಬಂಧಿಸಿಲ್ಲ. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡಸುವಂತೆ ಮಂಗಳೂರು ಪೊಲೀಸ್ ಕಮೀಷನರ್‌ಗೆ ಖುದ್ದಾಗಿ ದೂರನ್ನೂನೀಡಲಾಗಿದೆ. ಹಲವಾರು ಸಂಘಟನೆಗಳಿಂದ ಆಗ್ರಹಗಳೂ ಕೇಳಿ ಬಂದಿವೆ. ಇಷ್ಟಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ಇಲಾಖೆ ದುರ್ಬಲ ಆಗಿದೆಯೇ? ಆರೋಪಿಯನ್ನು ಬಂಧಿಸಲು ಯಾಕೆ ಮೀನಮೇಷ ಎನಿಸುತ್ತಾರೆ? ಈ ಪ್ರಕರಣವನ್ನು ಇಡೀ ಸಮಾಜಗಮನಿಸುತ್ತಿದೆ. ಈ ಪ್ರಕರಣ ಹೆಣ್ಣು ಕುಲಕ್ಕೆ ಅವಮಾನ ಮಾಡಿದಂತಿದೆ. ಪ್ರತಿಭಾ ಕುಳಾಯಿ ಮಾತ್ರವಲ್ಲ ಯಾವುದೇ ಹೆಣ್ಣುಮಕ್ಕಳಿಗೆಈ ರೀತಿಯ ದೌರ್ಜನ್ಯವಾದರೆ, ಸೂಕ್ತ ಕ್ರಮಕೈಗೊಳ್ಳುವುದು ಸರ್ಕಾರದ ಕರ್ತವ್ಯ. ಈ ಬಗ್ಗೆ ಯಾಕೆ ಸರ್ಕಾರ ಮೌನ ವಹಿಸಿದೆ?. ಸಣ್ಣಪುಟ್ಟ ಘಟನೆಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಪೊಲೀಸ್ ಇಲಾಖೆ ಈ ಪ್ರಕರಣದ ಬಗ್ಗೆ ಯಾಕೆ ಮೌನವಹಿಸಿದೆ?
–ಪದ್ಮರಾಜ್ ಆರ್.
ವಕೀಲರು ಮತ್ತು ಸಾಮಾಜಿಕ ಚಿಂತಕರು ಮಂಗಳೂರು