ಮಿಯ್ಯಾರು ಕುಂಟಿಬೈಲಿನ ಮೃದ್ಧಿನಿ ಕೋಟ್ಯಾನ್(2.4)ಗೆ ಇಂಡಿಯನ್ ಬುಕ್ ಅಪ್ ರೆಕಾರ್ಡ್ಸ್ ಪದವಿ ಲಭಿಸಿದೆ.
ಧೀರಾಜ್ ಸಲ್ಯಾನ್ ಹಾಗೂ ನಿರೀಕ್ಷ ಧೀರಾಜ್ ಸಲ್ಯಾನ್ ಅವರ ಮಗಳು ಮೃದ್ಧಿನಿ ಕೋಟ್ಯಾನ್ ಅವರಿಗೆ ಸ್ಮರಣಾ ಶಕ್ತಿ ಇತರಗಿಂತ ಹೆಚ್ಚು.
ವಿಶ್ವದ ಏಳು ರಾಷ್ಟ್ರಗಳ ಲಾಛಂನ, ಮಾನವನ ದೇಹದ 41 ಅಂಗಾಂಗಗಳು, ಭಜನಾ ಗೀತೆ, ಆರು ಬಣ್ಣಗಳು, 1ರಿಂದ 10 ನಡುವಿನ ಸಂಖ್ಯೆಗಳು, 3 ಶಿಶುಗೀತೆಗಳು, ಎ ಯಿಂದ ಯೂ ವರೆಗಿನ ಪದಗಳು ಹೇಳಿರುವ ಮೂಲಕ ಇವರು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ಗೆ ತನ್ನ ಹೆಸರನ್ನು ದಾಖಲಿಸಿದ್ದಾರೆ.