ಸಂದರ್ಭೇಚಿತ ಅನುಕರಣೆ ರಂಗದ ಸೊಬಗಿಗೆ ಹೊಸ ಚೈತನ್ಯ ಹೊಂದಿಸಿದಂತೆ
ಯಕ್ಷರಂಗದ ಹಿರಿಯ ಚೇತನ ಪುಂಡರಿಕಾಕ್ಷ ಉಪಾಧ್ಯಾಯರನ್ನು ಮಗದೊಮ್ಮೆ ಯಕ್ಷರಂಗದಲ್ಲಿ ನೆನಪಿಸುವಂತೆ ಅಭಿನಯಿಸಿದಯಕ್ಷದೇವಿ ಖ್ಯಾತಿಯ ಅಕ್ಷಯ್ ಕುಮಾರ್ ಮಾರ್ನಾಡ್.IMG_5742
ಮೆರೆಯುತ್ತಿರುವ ಯಕ್ಷರಂಗದ ಪ್ರತಿಭಾವಂತ ಯುವ ಸ್ತ್ರೀಪಾತ್ರದಾರಿಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡ ಯಕ್ಷ ಪ್ರತಿಭೆಅಕ್ಷಯ್ ಕುಮಾರ್ ಮಾರ್ನಾಡ್
ಪಾತ್ರಾನುಸಾರ ಯಕ್ಷಗಾನದ ಪಾತ್ರಾಭಿನಯ, ವಾಕ್, ನಾಟ್ಯ, ವೇಷಭೂಷಣಾದಿಗಳಲ್ಲಿನ ಪಕ್ವತೆಯೊಂದಿಗೆ, ಸಂದರ್ಭೋಚಿತಪಾತ್ರಪೋಷಣೆಯಿಂದ ಸಮರ್ಥ ಕಲಾವಿದನಾಗಿ ಬೆಳೆದ ಪರಿ ಪ್ರಶಂಸನೀಯ
ಶ್ರೀ ಕಟೀಲು ಮೇಳದಲ್ಲಿ ಸರಿಸುಮಾರು ದಶಕದ ತಿರುಗಾಟದ ಅನುಭವ, ಪ್ರಸ್ತುತ ಯಕ್ಷದ್ರುವ
ಪಟ್ಲ ಸತೀಶ್ ಶೆಟ್ಟಿಯವರ ಸಂಚಾಲಕತ್ವದ ಶ್ರೀ ಪಾವಂಜೆ ಮೇಳದ ಪ್ರಧಾನ ಸ್ತ್ರೀ ಪಾತ್ರಧಾರಿಯಾಗಿ ಮಿಂಚುತ್ತಿರುವ ಅಕ್ಷಯ್ಕುಮಾರ್ ಮಾರ್ನಾಡ್ರವರ ಮುಂದಿರುವ ಯಕ್ಷ ಪಯಣ ಸುಖ ಪ್ರದವಾಗಿರಲೆಂದು ಆಶಿಸೋಣ..