TOP STORIES:

FOLLOW US

ಯುವವಾಹಿನಿ ರಿ ಕೊಲ್ಯ ಘಟಕದ ವತಿಯಿಂದ ಮನೆಮನ ಬೆಳಗಿಸಿದ ಗುರುಭಜನೆ , ಗುರುಸ್ಮರಣೆ


ಯುವವಾಹಿನಿ ರಿ ಕೊಲ್ಯ ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶಗಳನ್ನು ಪರಿಪಾಲನೆ ಮಾಡುವ ಕಾರ್ಯಗಳಿಗೆ ಪೂರಕವಾಗಿ ನಮ್ಮ ಘಟಕದ ನಾರಾಯಣ ಗುರು ತತ್ವಾದರ್ಶಗಳ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕಿ ಶ್ರೀಮತಿ ರಶ್ಮಿ ಸನಿಲ್ ರವರ ತರವಾಡು ಮನೆ ಕಣೀರುತೋಟದಲ್ಲಿ ದಿನಾಂಕ 05-10-2023 ನೇ ಗುರುವಾರದಂದು ಸಂಜೆ ಗುರುಭಜನೆ ಮತ್ತು ಗುರುಸ್ಮರಣೆ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ಜರುಗಿತು.

ಭಗವಂತನೊಂದಿಗೆ ನೇರವಾಗಿ ಸಂವಾದಿಸುವ ಸಾಧನವೆಂದರೆ ಅದು ಭಜನೆ. ಭಜನೆ ಇದ್ದಲ್ಲಿ ಎಂದಿಗೂ ವಿಭಜನೆ ಇರುವುದಿಲ್ಲ. ದೇವರ ನಾಮವನ್ನು, ಮಹಿಮೆಯನ್ನು ಹಾಡಿ ಭಜಿಸುವ ಮೂಲಕ ಭಗವಂತನೊಂದಿಗೆ ಲೀನವಾಗುವಂತಹ ಆ ಒಂದು ಅನುಭವವನ್ನು ವರ್ಣಿಸಲು ಅಸಾಧ್ಯ. ಹಿರಿಯರ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಸಂಪ್ರದಾಯವನ್ನು ಮರೀಚಿಕೆ ಆಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿರುತ್ತದೆ ಎಂದು ಮನವಿ ಮಾಡಿ, ಈ ಸಂದರ್ಭದಲ್ಲಿ ಬಿಲ್ಲವ ಸೇವಾ ಸಮಾಜ ರಿ ಕೊಲ್ಯ ಇದರ ಹಿರಿಯ ಭಜನಾ ಸಂಚಾಲಕರು, ಯುವವಾಹಿನಿ ರಿ ಕೊಲ್ಯ ಘಟಕದ ಆರೋಗ್ಯ ನಿರ್ದೇಶಕರೂ ಆಗಿರುವ ಶಶಿಕಾಂತ್ ಪರ್ಯತ್ತೂರು ಭಜನೆಯ ಮಹತ್ವದ ಕುರಿತು ವ್ಯಾಖ್ಯಾನ ನೀಡಿದರು.

ಯುವವಾಹಿನಿ ರಿ ಕೊಲ್ಯ ಘಟಕದ ನಾರಾಯಣ ಗುರು ತತ್ವಾದರ್ಶಗಳ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕಿ ಶ್ರೀಮತಿ ರಶ್ಮಿ ಸನಿಲ್ ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಜೀವನ ಚರಿತ್ರೆಯನ್ನು ಆಧರಿಸಿದ ಚಿತ್ರಣವನ್ನು ಕಥನಕವನದ ಮೂಲಕ ಪ್ರಸ್ತುತ ಪಡಿಸಿದರು. ಬ್ರಹ್ಮಶ್ರೀ ನಾರಾಯಣಗುರುಗಳು ನಡೆದು ಬಂದ ದಾರಿ, ಅವರ ಬದುಕು, ತತ್ವಾದರ್ಶಗಳು, ಸಮಾಜದ ಅಭ್ಯುದಯಕ್ಕೆ ನೀಡಿರುವ ಸಂದೇಶಗಳ ಕುರಿತು ಅರ್ಥಪೂರ್ಣವಾಗಿ ಮಂಡಿಸಿ ಕಿರು ಉಪನ್ಯಾಸ ನೀಡಿದರು.

ಯುವವಾಹಿನಿ ರಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ರಾಜೇಶ್ ಬಿ. ಈ ಸಂದರ್ಭದಲ್ಲಿ ಹಾಜರಿದ್ದು ಸರ್ವರಿಗೂ ಮಾದರಿಯಾಗಿರುವ ಅರ್ಥಪೂರ್ಣ ಕಾರ್ಯಕ್ರಮದ ಆಯೋಜನೆಗೆ ಅಭಿನಂದನೆ ಸಲ್ಲಿಸಿದರು.‌ ಯುವವಾಹಿನಿ ರಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅದೇ ರೀತಿ ಯುವವಾಹಿನಿ ರಿ ಕೊಲ್ಯ ಘಟಕದ ಮಾಜಿ ಅಧ್ಯಕ್ಷರೂ ಆಗಿರುವ ಶ್ರೀ ಕುಸುಮಾಕರ ಕುಂಪಲರವರು ಸರ್ವರನ್ನು ಒಟ್ಟುಗೂಡಿಸುವ ಭಜನಾ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಮಣ್ಣಿನ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಇಂದಿನ ಕಾಲಘಟ್ಟದಲ್ಲಿ ಈ ರೀತಿಯ ಭಜನಾ ಸಂಕೀರ್ತನೆಗಳು ಬಹಳ ಅರ್ಥಪೂರ್ಣ, ಪ್ರತಿಯೊಬ್ಬರ ಮನೆಮನದಿಂದಲೇ ಈ ಕುರಿತು ಜಾಗೃತಿ ಮೂಡಬೇಕು ಎಂದು ಯುವವಾಹಿನಿ ರಿ ಕೊಲ್ಯ ಘಟಕದ ಅಧ್ಯಕ್ಷರಾದ ಶ್ರೀ ಲತೀಶ್ ಎಂ ಸಂಕೋಳಿಗೆಯವರು ಅಭಿಪ್ರಾಯ ವ್ಯಕ್ತಪಡಿಸಿದರು.

 

ಬಿಲ್ಲವ ಸೇವಾ ಸಮಾಜ ಟ್ರಸ್ಟ್ ರಿ ಇದರ ಅಧ್ಯಕ್ಷರಾದ ಶ್ರೀ ವೇಣುಗೋಪಾಲ ಕೊಲ್ಯ ಉಪಸ್ಥಿತರಿದ್ದರು. ಯುವವಾಹಿನಿ ರಿ ಕೊಲ್ಯ ಘಟಕದ ಸ್ಥಾಪಕಾಧ್ಯಕ್ಷರಾದ ಶ್ರೀ ಸುರೇಶ್ ಬಿಲ್ಲವ, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಸುಂದರ್ ಸುವರ್ಣ, ಪ್ರಥಮ ಉಪಾಧ್ಯಕ್ಷರು ಶ್ರೀಮತಿ ಸುಧಾ ಸುರೇಶ್, ದ್ವಿತೀಯ ಉಪಾಧ್ಯಕ್ಷರು ಶ್ರೀ ನಿತಿನ್ ಕರ್ಕೇರ ಹಾಗೂ ಮಾಜಿ ಅಧ್ಯಕ್ಷರುಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಯುವವಾಹಿನಿ ರಿ ಕೊಲ್ಯ ಘಟಕದ ಪದಾಧಿಕಾರಿಗಳು, ಸದಸ್ಯರು ಮತ್ತು ಬಂಧುಗಳು, ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಮಂಡಳಿಯ ಸದಸ್ಯರು ಹಾಗೂ ಬಿಲ್ಲವ ಸೇವಾ ಸಮಾಜ ರಿ ಕೊಲ್ಯದ ಸದಸ್ಯರು, ರಶ್ಮಿ ಸನಿಲ್ ಕುಟುಂಬಸ್ಥರು ಭಜನಾ ಸಂಕೀರ್ತನೆಯಲ್ಲಿ ಭಾಗವಹಿಸಿದ್ದರು. ಭಜನೆಯ ನಂತರ ಗುರುಪೂಜೆ ಮತ್ತು ಪ್ರಸಾದ ವಿತರಣೆ ಹಾಗೂ ಸರ್ವರಿಗೂ ಅನ್ನ ಸಂತರ್ಪಣೆಯನ್ನು ನೀಡಲಾಯಿತು.

ಯುವವಾಹಿನಿ ರಿ ಕೊಲ್ಯ ಘಟಕದ ಕಾರ್ಯದರ್ಶಿ ಶ್ರೀ ಜೀವನ್ ಕೊಲ್ಯ ಕಾರ್ಯಕ್ರಮವನ್ನು ನಿರೂಪಿಸಿದರು.‌


Share:

More Posts

Category

Send Us A Message

Related Posts

ಗೆಜ್ಜೆಗಿರಿಯ ಮೂಲಕ ಬಿಲ್ಲವ ಸಮಾಜಕ್ಕೆ ಸಂಘಟಾನಾತ್ಮಕ ಬಲ ತುಂಬಲು ಹೊರಟ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಗೆ ಅಭಿನಂದನೆ


Share       ಬಿಲ್ಲವ ಸಮಾಜ ಸೇವಾ ಸಂಘ(ರಿ) ಕುಂದಾಪುರ ಇದರ ಅಧ್ಯಕ್ಷರಾದ ಅಶೋಕ್ ಪೂಜಾರಿ ಬಿಜಾಡಿ ಹಾಗೂ ಸಂಘದ ಪಧಾಧಿಕಾರಿಗಳು  ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ  ಬಲಯುತರಾಗಿ ಎಂಬ ತತ್ವದಂತೆ  ಬಿಲ್ಲವ


Read More »

ರಕ್ತಹೀನತೆಯಿಂದ ಬಳಲುತ್ತಿರುವವರು ಹುರುಳಿ ಸೇವನೆ ಮಾಡಿ


Share       ಹುರುಳಿ ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಏಕೆಂದರೆ ಇದು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದ್ದು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಭಂಡಾರವಾಗಿದೆ. ಇದು ದೇಹಕ್ಕೆ ಅಗತ್ಯ ಪ್ರಯೋಜನಗಳನ್ನು ನೀಡುವ ಧಾನ್ಯವಾಗಿದೆ.


Read More »

ಬಂಟ್ವಾಳ ತಾಲೂಕು ಬಿಲ್ಲವ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ


Share       ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯ ಪದಾಧಿಕಾರಿಗಳು ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸಕ್ಕೆ ಆಮಂತ್ರಿಸಿದರು. ಗೆಜ್ಜೆಗಿರಿ ಕ್ಷೇತ್ರಾಡಳಿತ


Read More »

ಫುಡ್ ಫೆಸ್ಟ್ ನಿಂದ ಬಂದ ಹಣ ಬಡವರ್ಗಕ್ಜೆ ಮೀಸಲಿಡುತ್ತಿರುವ ಬಿರುವೆರ್ ಕುಡ್ಲ; 3 ಲಕ್ಷ ಮೌಲ್ಯದ ಕೃತಕ ಅಂಗಾಂಗ ಸಲಕರಣೆ ವಿತರಣೆ


Share       ಮಂಗಳೂರು: ಅವರೆಲ್ಲಾ ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರು. ಆದ್ರೆ ದುಡಿದ ಹಣದಲ್ಲಿ ಸಮಾಜ ಸೇವೆಗಾಗಿ ಮೀಸಲಿಟ್ಟು ಸೇವಾ ಕಾರ್ಯ ನಡೆಸುತ್ತಿರುವ ಆ ತಂಡ ಮನೆಯಿಲ್ಲದವರಿಗೆ ಮನೆ,ಅನಾರೋಗ್ಯಕ್ಕೀಡಾದವರಿಗೆ ಚಿಕಿತ್ಸೆಗೆ ಹಣಕಾಸಿನ ನೆರವು,ದಿನಸಿ ಕಿಟ್ ,ಆಂಬುಲೆನ್ಸ್


Read More »

ಮಹಾ ಕುಂಭಮೇಳ: ಮಹಾಮಂಡಲೇಶ್ವರರಾಗಿ ಪಟ್ಟಾಭಿಶಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ ಕರ್ನಾಟಕಕ್ಕೆ ಸಂದ ಮೊದಲ ಗೌರವ


Share       ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಜ.31 ರಂದು ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಬಮೇಳದಲ್ಲಿ ಉತ್ತರ


Read More »

ರಾಷ್ಟ್ರಮಟ್ಟದ ನ್ಯಾಷನಲ್ ಗೇಮ್ಸ್ -2025 ಗೆ ಕರ್ನಾಟಕ ತಂಡಕ್ಕೆ ಆಯ್ಕೆಯಾದ ಕಾಣಿಯೂರಿನ ಸೌಮ್ಯ ಪೂಜಾರಿ


Share       ಪುತ್ತೂರು: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಲಿರುವ 38ನೇ ನ್ಯಾಷನಲ್ ಗೇಮ್ಸ್ -2025 ರಲ್ಲಿ ರಾಷ್ಟ್ರೀಯ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಕಾಣಿಯೂರಿನ ಸೌಮ್ಯ ಪೂಜಾರಿ ರವರು ಆಯ್ಕೆ ಆಗಿರುತ್ತಾರೆ. ಇವರು


Read More »