ಬಂಟ್ವಾಳ : ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಮತ್ತು ಯುವವಾಹಿನಿ
ಸಂಚಾಲನ ಸಮಿತಿ ಕುಪ್ಪಿಲ– ಪಲ್ಲಮಜಲು ಹಾಗೂ ಸಮಾಜದ ಕೊಡುಗೈ ದಾನಿಗಳ ನೆರವಿನಿಂದ ನಿರ್ಮಾಣಗೊಂಡ ನೂತನಮನೆಯನ್ನು ವಾರಿಜಾಕ್ಷಿ ರುಕ್ಮಯ ಪೂಜಾರಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಕೇಶವ ಶಾಂತಿ ನಾಟಿ ಮುಂದಾಳತ್ವದಲ್ಲಿ ವೈದಿಕ ವಿಧಿ ವಿಧಾನಗಳ ಮೂಲಕ ನೂತನ ಮನೆಯ ಗೃಹಪ್ರವೇಶ ನೆರವೇರಿಸಲಾಯಿತು.
ಬಂಟ್ವಾಳ ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾದ ಕೆ.ಸೇಸಪ್ಪ ಕೋಟ್ಯಾನ್ ಪಚ್ವಿನಡ್ಕ ಅವರು ನೂತನ ಬ್ರಹ್ಮಶ್ರಿ ನಿಲಯದನಾಮ ಫಲಕವನ್ನು ಅನವಾರಣಗೊಳಿಸಿ, ದೀಪ ಬೆಳಗುವುದರ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಸುಂದರ ಪೂಜಾರಿ ಬೋಳಂಗಡಿ ಸಭಾಧ್ಯಕ್ಷತೆಯನ್ನು ವಹಿಸಿದ್ದರು.
ಯುವವಾಹಿನಿ (ರಿ) ಕೇಂದ್ರ ಸಮಿಯ ಅಧ್ಯಕ್ಷರಾದ ಡಾ.ರಾಜಾರಾಮ್ ಕೆ.ಬಿ.ನೂತನ ನಿವಾಸದ ಕೀ ಹಸ್ತಾಂತರಿದರು.
ಬಂಟ್ವಾಳ ಯುವವಾಹಿನಿಯ ಕಾರ್ಯ ಶ್ಲಾಘನೀಯ: ಪದ್ಮಾರಾಜ್
ಮನೆ ನಿರ್ಮಾಣದ ಮೂಲಕ ಬಂಟ್ವಾಳ ಯುವವಾಹಿನಿ ಅತ್ಯಂತ ಶ್ರೇಷ್ಠ ಕಾರ್ಯ ಮಾಡಿದೆ, ಬಡಜನತೆಗೆ ಆಸರೆಯಾಗುವ ಇಂತಹಅನೇಕ ಕಾರ್ಯಗಳನ್ನು ಮಾಡವ ಮೂಲಕ ಸರ್ವರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿಮಾತನಾಡಿದ ಕುದ್ರೋಳಿ ಗುರುಬೆಳದಿಂಗಳು ಅಧ್ಯಕ್ಷ ಹಾಗೂ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ಯುವವಾಹಿನಿಸಲಹೆಗಾರ ಪದ್ಮರಾಜ್ ಆರ್ ತಿಳಿಸಿದರು
ಬಂಟ್ವಾಳ ತಾಲೂಕು ಪಂಚಾಯಾತ್ ಮಾಜಿ ಅಧ್ಯಕ್ಷರಾದ ಯಶವಂತ ಪೂಜಾರಿ ದೇರಾಜೆಗುತ್ತು. ಬಂಟ್ವಾಳ ಪುರಸಭೆಯ ಮಾಜಿಅಧ್ಯಕ್ಷರಾದ ರಾಮಕೃಷ್ಣ ಆಳ್ವ. ಯುವವಾಹಿನಿ ಸಂಚಾಲನ ಸಮಿತಿ ಕುಪ್ಪಿಲ ಇದರ ಅಧ್ಯಕ್ಷರಾದ ಪ್ರವೀಣ್ ಕುಮಾರ್ ವೇದಿಕೆಯಲ್ಲಿಉಪಸ್ಥಿತಿತರಿದ್ದರು.
ಸಂಚಾಲನ ಸಮಿತಿಯ ಕಾರ್ಯದರ್ಶಿ ದಿನೇಶ್ ಪಲ್ಲಮಜಲು ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.