ಕರಾವಳಿಯ ಸಿನಿ ಲೋಕದಲ್ಲಿ ಬೆಳಕು ಪಸರಿಸುವ ಮತ್ತು ಸದ್ದು ಮಾಡುತ್ತಿರುವ ತುಳು ಚಿತ್ರ ‘ರಾಜ್ ಸೌಂಡ್ಸ್ & ಲೈಟ್ಸ್’ ಎಲ್ಲಾ ಗಡಿಗಳನ್ನು ದಾಟಿ 19 ದೇಶಗಳಲ್ಲಿ ಖ್ಯಾತಿ ಗಳಿಸಿ.
ಸೌದಿ ಅರೇಬಿಯಾ ದಲ್ಲಿ ಪ್ರಥಮ ಭಾರಿಗೆ ತುಳು ಚಿತ್ರ ಮಂಗಳೂರು ಅಸೋಸಿಯೇಷನ್ ಆಫ್ ಸೌದಿ ಅರೇಬಿಯಾ ದ ಅಧ್ಯಕ್ಷರು ಸತೀಶ್ ಕುಮಾರ್ ಬಜಾಲ್ ಹಾಗು ತಂಡದ ಪರವಾಗಿ ಪ್ರದರ್ಶನಗೊಂಡಿತು.
ಸೌದಿ ಅರೇಬಿಯಾ ಮೊದಲ ತುಳು ಚಲನಚಿತ್ರ ಇದಾಗಿದ್ದು, ಮೊದಲ ಪ್ರೀಮಿಯರ್ ಶೋನ ಎಲ್ಲಾ ಟಿಕೆಟ್‌ಗಳು ಸಂಪೂರ್ಣವಾಗಿ ಬುಕ್ ಆಗಿದ್ದು, ಪ್ರೀಮಿಯರ್ ಶೋಗಳಿಗೆ ಯಾವುದೇ ಟಿಕೆಟ್‌ಗಳು ಲಭ್ಯವಿಲ್ಲದಿದ್ದರೂ ತುಳುವರು ಅಸಂಖ್ಯಾತ ಕರೆಗಳೊಂದಿಗೆ ಟಿಕೆಟ್‌ಗಳನ್ನು ಪಡೆದುಕೊಳ್ಳಲು ಹಂಬಲಿಸುತ್ತಿದ್ದಾರೆ. ಆದರೆ ಸಿನಿಮಾದ ಹೆಚ್ಚಿನ ಪ್ರದರ್ಶನಗಳನ್ನು ಏರ್ಪಡಿಸುವ ಮೂಲಕ ಸತೀಶ್ ಕುಮಾರ್ ಬಜಾಲ್ ” ಮುಂದಿನ ದಿನಗಳಲ್ಲಿ ಸೌದಿ ಅರೇಬಿಯಾ ದ ಎಲ್ಲಾ ಸಿನಿಮಾ ಮಂದಿರದಲ್ಲಿ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ, ತುಳು ಚಿತ್ರ ಪ್ರೇಮಿ ಗಳು ನಿರಾಶರಾಗಬಾರದು, ಎಂದು ಪ್ರೀಮಿಯರ್ ಶೋ ನ ಉದ್ಘಾಟನೆಯ ಸಂದರ್ಭದಲ್ಲಿ ತಿಳಿಸಿದ್ದಾರೆ”.
ತುಳು ಚಿತ್ರರಂಗದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ‘ರಾಜ್ ಸೌಂಡ್ಸ್ & ಲೈಟ್ಸ್’ ಸೌದಿ ಅರೇಬಿಯಾ ದಲ್ಲಿ ತೆರೆಕಂಡಿದೆ ಹೆಗ್ಗಳಿಕೆಯ ಪಾತ್ರ ಗಳಿಸಿದೆ.
‘ರಾಜ್ ಸೌಂಡ್ಸ್ & ಲೈಟ್ಸ್’, ಕನ್ನಡ ಚಲನಚಿತ್ರ ‘ಒಂದು ಮೊಟ್ಟೆಯ ಕಥೆ’ ನಿರ್ಮಾಪಕರದ್ದು, ರಾಹುಲ್ ಅಮೀನ್ ಅವರ ನಿರ್ದೇಶನದ ತುಳು ಚಿತ್ರ, ನಿರ್ದೇಶಕ ರಾಹುಲ್ ಅಮೀನ್ ಕಥೆಯನ್ನು ವಿಜೆ ವಿನೀತ್ ಜೊತೆಗೆ ಬರೆದಿದ್ದಾರೆ, ಚಿತ್ರವನ್ನು ವೈಭವ್ ಫ್ಲಿಕ್ಸ್ ಪ್ರಸ್ತುತಪಡಿಸುತ್ತಿದ್ದಾರೆ. ಮಂಗೊ ಪಿಕಲ್ ಎಂಟರ್ಟೈನ್ಮೆಂಟ್ ಸಹಯೋಗದೊಂದಿಗೆ. ಸತೀಶ್ ಕುಮಾರ್ ಬಜಾಲ್ ನೇತೃತ್ವದಲ್ಲಿ ಅರೇಬಿಯಾನ್ ಪಿಕ್ಚರ್ ಮೂಲಕ ಇದನ್ನು ಸೌದಿ ಅರೇಬಿಯಾದಲ್ಲಿ ವಿತರಿಸಲಾಗುತ್ತಿದೆ.
ಪ್ರಮುಖ ಕಲಾವಿದರಾದ ವಿನೀತ್ ಕುಮಾರ್ (ನಾಯಕ), ಯಶ ಶಿವಕುಮಾರ್ (ನಾಯಕಿ), ಅರವಿಂದ ಬೋಳಾರ್, ಕರಿಷ್ಮಾ ಅಮೀನ್, ಭೋಜರಾಜ್ ವಾಮಂಜೂರು, ಮತ್ತು ನವೀನ್ ಡಿ ಪಡೀಲ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ರೂಪ ವರ್ಕಾಡಿ, ಮರ್ವಿನ್ ಶಿರ್ವ, ನಮಿತ್ ಕುಳೂರು, ರವಿ ರಾಮುಜ ಜೊತೆಗೆ. ಇತರ ಪ್ರಸಿದ್ಧ ನಟರೊಂದಿಗೆ ಸೌದಿ ಅರೇಬಿಯಾದಲ್ಲಿ ಪ್ರದರ್ಶಗೊಂಡಿತು.