ತಾ: 20/03/2022 ರ ಬೆಳಿಗ್ಗೆ ಗಂಟೆ 10.30ಕ್ಕೆ ಸರಿಯಾಗಿ
ಉರ್ವ ಬಿಲ್ಲವ ಸಂಘದ ಆತಿಥ್ಯ ದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅರ್ಧ ವಾರ್ಷಿಕ ಪ್ರಾದೇಶಿಕ ಮಹಾ ಸಭೆಯು ಮಹಾಮಂಡಲದ ಅಧ್ಯಕ್ಷರಾದ ಡಾl ರಾಜಶೇಖರ ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ಬಿಲ್ಲವರ ಸಂಘ ಉರ್ವ ಇದರಸಭಾಭವನದಲ್ಲಿ ಜರಗಿತು. ಉರ್ವ ಬಿಲ್ಲವ ಸಂಘದವರು ಬಹಳ ಅರ್ಥಪೂರ್ಣವಾಗಿ ಸಭೆಯ ಆತಿಥ್ಯ ಕಾರ್ಯಕ್ರಮನೆರವೇರಿಸಿದರು. ಲೇಡಿಹಿಲ್ ನಿಂದ ಉರ್ವ ತನಕ ಬ್ರಹ್ಮ ಶ್ರೀ ನಾರಾಯಣ ಗುರು ಗಳ ಹಳದಿ ಬಣ್ಣದ ಧ್ವಜ ಮತ್ತು ಹಳದಿ ಪತಾಕೆಗಳ ಮೂಲಕ ರಸ್ತೆಗಳನ್ನು ಸಿಂಗರಿಸಿ ಮಹಾಮಂಡಲದ ಪ್ರತಿನಿಧಿಗಳನ್ನು ಸ್ವಾಗತಿಸಿದರು. ಇದು ಉರ್ವ ಬಿಲ್ಲವ ಸಂಘಟನೆ ಗೆ ನಮ್ಮಸಮಾಜದ ಮಹಾಮಂಡಲದ ಮೇಲೆ ಇರುವ ಪ್ರೀತಿ ಮತ್ತು ಬಿಲ್ಲವ ಸಮಾಜದ ಬಗ್ಗೆ ಇರುವ ಕಾಳಜಿಗೆ ಸಾಕ್ಷಿಯಾಗಿದೆ ಹಾಗೂ ಎಲ್ಲಾಬಿಲ್ಲವ ಸಂಘಗಳಿಗೆ ಪ್ರೇರಣೆಯಾಗಿದೆ. ಬಿಲ್ಲವ ಸಮಾಜ ಎಲ್ಲಾ ರೀತಿಯ ಅವಕಾಶ ಗಳಿಂದ ವಂಚಿತರಾಗಿ ರಾಜಕೀಯ ವಾಗಿ ಕೂಡಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ಸಿಗದೆ ಅವಕಾಶ ಗಳು ನಿರಾಕರಣೆ ಯಾಗುತ್ತಿರುವ ಈ ಸಮಯದಲ್ಲಿ ಬಿಲ್ಲವ ಸಮಾಜ ಸಂಘಟಾನಾತ್ಮಕವಾಗಿ ಬಲ ಗೊಳ್ಳ ಬೇಕು ಎಂಬುದರಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಮೇಲೆ ಹೆಚ್ಚಿನನಿರೀಕ್ಷೆ ಕೂಡ ಬಿಲ್ಲವ ಸಂಘಗಳಿಗೆ ಇದೆ… ಇದಕ್ಕೆ ಬಿಲ್ಲವ ಸಂಘಗಳ ಸಹಕಾರ ಕೂಡ ಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.