ಕರಾಟೆಯ ಸವ್ಯಸಾಚಿ ಶೋಧನ್ ಕುಮಾರ್
ಮೂಡುಬೆಟ್ಟು ಶ್ರೀ ಶ್ರೀಧರ ಪೂಜಾರಿ ಹಾಗೂ ಶ್ರೀಮತಿ ಇಂದಿರಾ ದಂಪತಿಯ ಮಗನಾಗಿ ಜನಿಸಿದ ಶೋಧನ್ ಕುಮಾರ್ಬಾಲ್ಯದಿಂದಲೇ ಕರಾಟೆ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಪ್ರತಿಭೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ವಳಕಾಡು ಶಾಲೆ, ಶ್ಯಾಮಿಲಿ ಪದವಿಪೂರ್ವ ಕಾಲೇಜು ಮತ್ತು ಪೂರ್ಣ ಪ್ರಜ್ಞಾ ಕಾಲೇಜು ಪದವಿ ಶಿಕ್ಷಣ ಪೂರೈಸಿ ಶೈಕ್ಷಣಿಕವಾಗಿಯೂಕ್ರೀಯಾಶೀಲವಾಗಿದ್ದ ಶೋಧನ್, ಅಂತಾರಾಷ್ಟ್ರೀಯ ಕರಾಟೆ ಪಟು ಪರ್ಕಳ ಪ್ರವೀಣಾ ಸುವರ್ಣರವರ ಕರಾಟೆ ಗರಡಿಯಲ್ಲಿ ಪಳಗಿಸಾರ್ವಜನಿಕ ಶಿಕ್ಷಣ ಇಲಾಖೆ ಕರಾಟೆ ಸ್ಪರ್ಧೆಯಲ್ಲಿ ಅನೇಕ ಪ್ರಶಿಸ್ತಿಗಳಿಸಿದ್ದಾರೆ. ತಮಿಳುನಾಡು ಚೆನೈನಲ್ಲಿ ಅಖಿಲ ಭಾರತವಿಶ್ವವಿದ್ಯಾನಿಲಯದ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಅಮೋಘ ಸಾಧನೆಗೈದಿದ್ದಾರೆ.
ಇವರು ಇನ್ಸ್ಟಿಟ್ಯೂಟ್ ಆಫ್ ಕರಾಟೆ ಎಂಡ್ ಎಲೈಡ್ ಆರ್ಟ್ಸ್ ಸಂಸ್ಥೆಯಿಂದ ಅತ್ಯುತ್ತಮ ಶ್ರೇಣಿಯಲ್ಲಿ ಬ್ಲ್ಯಾಕ್ ಬೆಲ್ಟ್ ಪದವಿಪಡೆದಿದ್ದಾರೆ. ಇದುವರೆಗೆ ಉಡುಪಿ, ಮಂಗಳೂರು, ಮೈಸೂರು, ಬೆಳಗಾವಿ, ಗದಗ, ಶಿವಮೊಗ್ಗ, ಧಾರವಾಡ, ಬೆಂಗಳೂರು, ಕೇರಳ, ಹೈದರಾಬಾದ್, ತಮಿಳು ನಾಡು, ರಾಜ್ಯ, ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ನೂರಕ್ಕೂ ಮಿಕ್ಕಿ ಪದಕಗಳನ್ನು ಜಯಿಸಿರುತ್ತಾರೆ. ಅತೀ ಕಿರಿಯ ವಯಸ್ಸಿನಲ್ಲಿ ಪುರುಷರ ವಿಭಾಗದ 9 ಗ್ರ್ಯಾಂಡ್ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ವಿಜೇತರಾಗಿದ್ದಾರೆ. 2 ಬಾರಿಒಂದೇ ಸ್ಪರ್ಧೆಯಲ್ಲಿ ಕಟಾ ಹಾಗೂ ಕುಮಿಟೆ ವಿಭಾಗದ ಎರಡೂ ಗ್ರ್ಯಾಂಡ್ ಚಾಂಪಿಯನ್ ಶಿಪ್ ಜಯಿಸಿ ಕರಾಟೆ ಐತಿಹಾಸಿಕ ದಾಖಲೆಮಾಡಿದ್ದಾರೆ. ಕರ್ನಾಟಕ ಕರಾಟೆ ಲೀಗ್ 2019 ಮೈಸೂರು ಟೈಗರ್ಸ್ ಪ್ರತಿನಿಧಿಯಾಗಿ ಸ್ಪರ್ಧೆಯಲ್ಲಿ ಕ್ರೀಡೆಯ ಅತ್ಯುತ್ತಮ ಆಟಗಾರಪ್ರಶಸ್ತಿ ಜಯಿಸಿರುತ್ತಾರೆ. ಕರಾಟೆ ಇಂಡಿಯಾ ಆರ್ಗನೈಜೇಷನ್ ರಾಜ್ಯ, ದಕ್ಷಿಣ ಭಾರತ ಪ್ರಾಂತ್ಯ ಪ್ರಶಸ್ತಿ ಜಯಿಸಿ ಇದೀಗ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರ ವಿಜಯಯಾತ್ರೆ ಹೀಗೆ ನಿರಂತರವಾಗಿ ಸಾಗಲಿ. ಶುಭವಾಗಲಿ..