Credits: Billavaswarriors.com – Special article
ಕೇರಳದ ಚೆಂಬಝತ್ತಿ ಎಂಬಲ್ಲಿ ಜನಿಸಿದ ಬ್ರಹ್ಮಶ್ರಿ ಶ್ರೀ ನಾರಾಯಣ ಗುರುಗಳು ತಮ್ಮ ಸಮಾನ ಸಮಾಜದ ತತ್ವಕ್ಕಾಗಿ ಇಂದು ಇಡೀ ವಿಶ್ವಕ್ಕೆ ಗುರುವಾಗಿ ನಿಂತಿದ್ದಾರೆ. ಓರ್ವ ಈಳವ(ಬಿರುವ) ಸಮುದಾಯದ ಸದಸ್ಯನಾಗಿದ್ದು, ಪಕ್ವತೆ ಪಡೆದಾಗ ಸಮಾಜಿಕ ಅನ್ಯಾಯದ ವಿರುದ್ಧ ಹೋರಾಡಿ ಸಮಾಜಿಕ ನವೋತ್ಥಾನಕ್ಕೆ ಕಾರಣೀಕರ್ತರಾದ ಶ್ರೀ ನಾರಾಯಣ ಗುರುಗಳು ಜಾತಿ-ಧರ್ಮಗಳ ಬೇಧವಿಲ್ಲದೆ ಎಲ್ಲರಿಂದಲೂ ಅರಾಧಿಸಲ್ಪಟ್ಟವರಾಗಿದ್ದಾರೆ. ಮಂಗಳೂರಿನ ಲೇಡಿಹಿಲ್ ವೃತ್ತಕ್ಕೆ ಇಂತಹ ಅವತಾರ ಪುರುಷನ ಹೆಸರು ನಾಮಕರಣ ಮಾಡಿದರೆ ಅದು ವಿದ್ಯಾವಂತರ ನಗರವಾದ ಮಂಗಳೂರಿಗೆ ಹೊಸ ಶೋಭೆ ನೀಡಲಿದೆ ಎಂದರೆ ತಪ್ಪಾಗಲಾರದು.ಲೇಡಿಹಿಲ್ ವೃತ್ತದಿಂದ ಶ್ರೀ ನಾರಾಯಣ ಗುರುಗಳ ಪ್ರತಿಶ್ಠಾಪನೆಯಿರುವ. ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುವ, ಬಿಲ್ಲವರ ಪ್ರಮುಖ ಆರಾಧನ ಕೇಂದ್ರವಾದ ಕುದ್ರೋಳಿ ದೇವಸ್ಥಾನಕ್ಕೆ ತೆರಳುವ ಪ್ರಮುಖ ರಸ್ತೆ ಆರಂಭವಾಗುತ್ತೆ. ಸಾವಿರಾರು ಭಕ್ತರು ದಿನಂಪ್ರತಿ ಇದೇ ರಸ್ತೆಯನ್ನು ಬಳಸಿಕೊಂಡು ದೇವಸ್ಥಾನಕ್ಕೆ ಬರುತ್ತಾರೆ. ಲೇಡಿಹಿಲ್ ಹೆಸರು ಮಂಗಳೂರಿನ ನಿವಾಸಿಗಳಿಗೆ ಪರಿಚಿತವಾಗಿರಬಹುದು ಆದರೆ ಹೊರಜಿಲ್ಲೆಗಳಿಂದ , ನೆರೆಯ ರಾಜ್ಯಗಳಿಂದ ಬರುವ ಭಕ್ತರಿಗೆ ಈ ವೃತ್ತ ಕುದ್ರೋಳಿ ದೇವಸ್ಥಾನಕ್ಕೆ ಹೋಗುವ ವೃತ್ತ ಎಂದೇ ಪರಿಚಿತವಾಗಿದೆ. ನಗರದ ಮಧ್ಯದಿಂದ ದೇವಸ್ಥಾನಕ್ಕೆ ಧ್ವಾರ ಹಾಗೂ ರಸ್ತೆಯಿದ್ದರೂ ಟ್ರಾಫಿಕ್ ಸಮಸ್ಯೆಯ ಬಹುದೊಡ್ಡ ಭಕ್ತಗಣ ಲೇಡಿಹಿಲ್ ವೃತ್ತದ ಮುಂದಿನ ರಸ್ತೆಯಿಂದಲೇ ಕುದ್ರೋಳಿಗೆ ತೆರೆಳುವ ವಾಡಿಕೆಯನ್ನು ಬೆಳೆಸಿಕೊಂಡಿದ್ದಾರೆ. ಅದಲ್ಲದೆ ಪಾಲಿಕೆ,ಜಿಲ್ಲೆ, ರಾಜ್ಯ ಆಡಳಿತಗಳು ಕುದ್ರೋಳಿ ದೇವಸ್ಥಾನದ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವುದು ಇದೇ ರಸ್ತೆಯನ್ನು ಗಮನದಲ್ಲಿಟ್ಟುಕೊಂಡಾಗಿದೆ. ಇಲ್ಲಿಯ ವರೆಗೂ ಯಾವೊಬ್ಬನೂ ಇದರ ಬಗ್ಗೆ ಆಕ್ಶೇಪವೆತ್ತಲಿಲ್ಲ. ಹೀಗಿರುವಾಗ ಇಷ್ಟೆಲ್ಲಾ ಮಹತ್ವವಿರುವ ರಸ್ತೆಯ ಆರಂಭದಲ್ಲಿರುವ ವೃತ್ತಕ್ಕೆ ಶ್ರೀ ನಾರಾಯಣ ಗುರುಗಳ ಹೆಸರು ಕೊಡುವಲ್ಲಿ ಯಾಕೆ ಹಿಂದೇಟು ಎಂಬ ಪ್ರಶ್ನೆ ಉದ್ಭವಿಸುತ್ತದೆ.
(Billavaswarriors.com – Special article)
ಕುದ್ರೋಳಿ ದೇವಸ್ಥಾನದ ಉದ್ಧಾರಕರಾದ ಹಾಗೂ ಜಿಲ್ಲೆಯ ಬಿಲ್ಲವರ ಹೆಮ್ಮೆಯಾದ ಶ್ರೀ ಜನಾರ್ಧನ ಪೂಜಾರಿಯವರು ಶ್ರೀ ನಾರಾಯಣ ಗುರುಗಳ ಅತೀ ದೊಡ್ಡ ಭಕ್ತರು. ಗುರುಗಳ ಹಾದಿಯಲ್ಲಿ ನಡೆದು ಜಿಲ್ಲೆಯನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದವರು. ಲೇಡಿಹಿಲ್ ವೃತ್ತಕ್ಕೆ ಗುರುಗಳ ಹೆಸರನ್ನಿಡಬೇಕೆಂಬ ಅವರ ಬಹಳ ಕಾಲದ ಕನಸಾಗಿತ್ತು. ಅಧಿಕಾರದಲ್ಲಿರುವಾಗ ಜನಾರ್ಧನ ಪೂಜಾರಿಯವರು ಧರ್ಮ-ಜಾತಿ ನೋಡದೆ ಎಲ್ಲರನ್ನೂ ಸಮಾನವಾಗಿ ನೋಡಿದವರು. ಇಂದು ನಾರಾಯಣ ಗುರು ವೃತ್ತ ಎಂಬ ನಾಮಕರಣ ಬೇಡ ಎಂದು ಸರಕಾರಿ ಕಛೇರಿಗಳಿಗೆ ಅಲೆಯುವವರು ಒಂದು ಕಾಲದಲ್ಲಿ ಜನಾರ್ಧನ ಪೂಜಾರಿಗಳ ಹಿಂದೆ ಜೈ ಹಾಕಿದವರು, ಬೇಕಾದ ಅನುದಾನ, ಸವಲತ್ತುಗಳನ್ನು ಪಡೆದುಕೊಂಡವರು. ಇಂದು ಮಾತ್ರ ಅವರಿಗೆ ಪೂಜಾರಿಯವರ ಕನಸು ನನಸು ಮಾಡಲು ಅಂಜಿಕೆ. ಇದು ಅನ್ನ ಕೊಟ್ಟ ಕೈಗಳಿಗೆ ದ್ರೋಹ ಬಗೆದಂತೆ.
ಮಂಗಳೂರಿನ ಲೇಡಿಹಿಲ್ ಪ್ರದೇಶದಲ್ಲಿ ಶ್ರೀ ನಾರಾಯಣ ಗುರು ವೃತ್ತವಿದ್ದರೆ ಯಾರಿಗೂ ಏನೂ ನಶ್ಟವಿಲ್ಲ. ವೃತ್ತದ ಸುತಮುತ್ತಲು ನಾಲ್ಕು ಶಾಳೆಗಳಿವೆ. ನಾರಾಯಣ ಗುರುಗಳ ನಾಮ ಜಪಿಸಿ ಅವರ ಹಾದಿಯಲ್ಲಿ ನಡೆಯುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಗುರು ವೃತ್ತ ಉತ್ತಮ ಹಾದಿಯಾಗಲಿದೆ. ಪಾಲಿಕೆ ಹಾಗೂ ಸರಕಾರ ಈ ಬಗ್ಗೆ ತುರ್ತು ಗಮನ ಹರಿಸಿ ಜನಾರ್ಧನ ಪೂಜಾರಿಯವರ ಕಸನು, ಲಕ್ಷಾಂತರ ಬಿಲ್ಲವರ ಮನದಾಸೆ ಹಾಗೂ ಕೋಟಿಗಟ್ಟಲೆ ಶ್ರೀ ನಾರಾಯಣ ಗುರುಗಳ ಅಭಿಮಾನಿಗಳ ಬಯಕೆ ಈಡೇರಿಸಬೇಕಾದು ಈಗಿನ ಮೊದಲ ಆಧ್ಯತೆ.
Credits: Billavaswarriors.com – Special article