ಬೆಂಗಳೂರು : ಒಂದು ರಾಜ್ಯದಿಂದ ಇನ್ನೊಂದು ರಾಜಯಕ್ಕೆ ಕೆಲಸಕ್ಕೆಂದು ತೆರಳುವ ಜನರಿಗೆ ವಾಹನ ನೋಂದಣಿಯ ಸಮಸ್ಯೆ ಹೆಚ್ಚಾಗಿದೆ. ಇಂತಹ ಸಮಸ್ಯೆ ಸರಿಮಾಡುವ ನಿಟ್ಟಿನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ನೆರವಾಗಲು ಮುಂದಾಗಿದೆ. ಈ ತೊಂದರೆ ನಿವಾರಿಸಲು ಹೊಸ ನೋಂದಣಿ ಗುರಿತು ಅಂದರೆ ಭಾರತ್ ಸರಣಿ(BH) ಪ್ರಾರಂಭಿಸಿದೆ. ಇದರ ಮೊದಲ ಬುಕಿಂಗ್ ಮಿರ್ಜಾಪುರದಲ್ಲಿ ಆಗಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಇದನ್ನು ಪರಿಚಯಿಸಿದೆ. ವಾಹನ ಮಾಲೀಕರು, ಬೇರೆ ರಾಜ್ಯಕ್ಕೆ ವರ್ಗಾವಣೆಗೊಂಡಾಗ ತಮ್ಮ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನವನ್ನು ಮತ್ತೆ ನೋಂದಾಯಿಸಬೇಕಿಲ್ಲ.
ಬಿಎಚ್ ಸರಣಿ ನಂಬರ್ ಪ್ಲೇಟ್ ಕಪ್ಪು ಮತ್ತು ಬಿಳಿ ಬಣ್ಣದ್ದಾಗಿರುತ್ತದೆ. ವಾಹನ ಸಂಖ್ಯೆ BH ಸರಣಿ ಪಡೆಯಲು ವಾಹನ ಮಾಲೀಕರು 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕಾಲ ರಸ್ತೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಈ ಸಂಪರ್ಣ ಪ್ರಕ್ರಿಯೆ ಆನ್ ಲೈನ್ ನಲ್ಲಿ ನಡೆಯುತ್ತದೆ.
ರಕ್ಷಣಾ ಸಿಬ್ಬಂದಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ಯೋಗಿಗಳು, ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಕಚೇರಿಗಳನ್ನು ಹೊಂದಿರುವ ಖಾಸಗಿ ವಲಯದ ಕಂಪನಿಗಳು ಹಾಗೂ ಸಂಸ್ಥೆಗಳ ಉದ್ಯೋಗಿಗಳಿಗೆ ಇದರಿಂದ ಲಾಭವಾಗಲಿದೆ.
ತಮ್ಮ ವೈಯಕ್ತಿಕ ವಾಹನಗಳನ್ನು ಭಾರತ್ ಸರಣಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಇದು ಎಲ್ಲರಿಗೂ ಕಡ್ಡಾಯವಲ್ಲ. ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಆ ನಂತರ ಭಾರತ್ ಸರಣಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ರಸ್ತೆ ಸಾರಿಗೆ ಸಚಿವಾಲಯ ಮತ್ತು ಹೆದ್ದಾರಿಗಳ ವಾಹನ ಪೋರ್ಟಲ್ ಗೆ ಲಾಗಿನ್ ಮಾಡಬೇಕು. ಹೊಸ ವಾಹನವನ್ನು ಖರೀದಿಸುವಾಗ ಡೀಲರ್ ಮಟ್ಟದಲ್ಲಿಯೂ ಇದನ್ನು ಮಾಡಬಹುದು. ಡೀಲರ್ ವಾಹನ ಮಾಲೀಕರ ಪರವಾಗಿ ವ್ಯಾನ್ ಪೋರ್ಟಲ್ ನಲ್ಲಿ ಲಭ್ಯವಿರುವ ಫಾರ್ಮ್ 20ನ್ನು ಭರ್ತಿ ಮಾಡಬೇಕು. ಕಾರಿನ ವೆಚ್ಚದ ಮೇಲೆ ರಸ್ತೆ ತೆರಿಗೆ ಪಾವತಿಸಬೇಕಾಗುತ್ತದೆ.