ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಅವರ ವಿಜಯೋತ್ಸವದ ವೇಳೆ ಬಿಜೆಪಿಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಗಾಯಗೊಂಡಿರುವ ಕಾಂಗ್ರೆಸ್ಕಾರ್ಯಕರ್ತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಬೆಳ್ತಂಗಡಿ ತಾಲೂಕಿನ ಪೆರಾಡಿಯಲ್ಲಿ ನಡೆದಿದ್ದು, ಹರೀಶ್ ಪೂಂಜಾ ಅವರು ತಮ್ಮ ಪ್ರತಿಸ್ಪರ್ಧಿ ರಕ್ಷಿತ್ ಶಿವರಾಮ್ಅವರನ್ನು ಸೋಲಿಸಿದ್ದು, ಭಾನುವಾರ ವಿಜಯೋತ್ಸವ ಆಚರಿಸಲಾಗಿತ್ತು.
ಪೆರಾಡಿ ಮಾರ್ಗವಾಗಿ ಸಾಗುತ್ತಿದ್ದ ವಿಜಯೋತ್ಸವ ಮೆರವಣಿಗೆಯಲ್ಲಿದ್ದ 150 ಮಂದಿ ಬಿಜೆಪಿ ಕಾರ್ಯಕರ್ತರು ವಿಜಯ ವೈನ್ ಶಾಪ್ಬಳಿ ತಲುಪಿದಾಗ ಸಂಭ್ರಮ ಪಟ್ಟಿದ್ದು, ಪಕ್ಕದಲ್ಲಿಯೇ ನಿಂತಿದ್ದ ದಯಾನಂದ ಪೂಜಾರಿ ಅವರನ್ನು ಎಳೆದೊಯ್ದು ತಮ್ಮೊಂದಿಗೆಸಂಭ್ರಮಿಸುವಂತೆ ಒತ್ತಾಯಿಸಿದ್ದಾರೆ. ಆಗ ಅವರು ಭಾಗವಹಿಸಲು ನಿರಾಕರಿಸಿದಾಗ ಬಿಜೆಪಿ ಕಾರ್ಯಕರ್ತರ ದೊಡ್ಡ ಗುಂಪುಅವರನ್ನು ಎಳೆದೊಯ್ದಿದೆ ಎನ್ನಲಾಗಿದೆ.
ಇನ್ನು ದಯಾನಂದ ಪೂಜಾರಿ ಅವರನ್ನು ಮೆರವಣಿಗೆಯೊಳಗೆ ಎಳೆದೊಯ್ದ ನಂತರ ಬಿಜೆಪಿ ಕಾರ್ಯಕರ್ತರು ಥಳಿಸಿದ್ದು, ದಯಾನಂದ ಪೂಜಾರಿ ಅವರನ್ನು ಬೆಳ್ತಂಗಡಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್, ಮಾಜಿ ಶಾಸಕ ವಸಂತ ಬಂಗೇರ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದು, 50ಕ್ಕೂಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಆಸ್ಪತ್ರೆಯ ಹೊರಗೆ ಜಮಾಯಿಸಿದ್ದರು.