ನಮ್ಮ ಸಮಾಜದ ಹೆಮ್ಮೆಯ ನಟ ಸುಮನ್ ತಲ್ವಾರ್, ಮೂಲತಹ ಮಂಗಳೂರಿನವರು, ಸಿನಿಮಾದಲ್ಲಿ ಖಳ ನಾಯಕನಾಗಿ ಹಲವಾರು ನಟನೆ ಮಾಡಿದರು, ನಿಜ ಜೀವನದಲ್ಲಿ ಹೀರೊ ಎನಿಸಿಕೊಂಡಿದ್ದಾರೆ.ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕನ್ನಡ ಸಿನಿಮಾವೊಂದರ ಸುದ್ದಿ ಗೋಷ್ಠಿಯಲ್ಲಿ ಕೂಡಾ ಇದನ್ನು ಹೇಳಿದ್ದಾರೆ. ಈ ಬಗ್ಗೆ ಗಂಭೀರವಾಗಿ ಯೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಇದಕ್ಕೆ ನಿಜವಾದ ಸ್ಫೂರ್ತಿ ನನ್ನ ಮಡದಿ. ಆಕೆಯೇ ಇನಿಸಿಯೇಟಿವ್ ತೆಗೆದುಕೊಂಡು ನಮ್ಮ ಸ್ವಂತದ್ದಾದ 170 ಎಕರೆ ಜಮೀನನ್ನು ದೇಶ ಕಾಯುವ ಸೈನಿಕರ ಸೇವೆಗಾಗಿ ಮೀಸಲಿಡಲು ಹೊರಟಿದ್ದಾಳೆ. ಆದರೆ ಒಂದು ಸಣ್ಣ ತಕರಾರು. ಹೈದರಾಬಾದಿನ ಎಲ್ಲಾ ಜಮೀನುಗಳಂತೆಯೇ ಈ ಜಮೀನಿನ ವ್ಯಾಜ್ಯ ಕೋರ್ಟ್’ನಲ್ಲಿದೆ.
ಇನ್ನೇನು ಕೊನೇ ಹಂತಕ್ಕೆ ಬಂದಿದೆ, ಆದ ತಕ್ಷಣವೇ ಕಾನೂನು ರೀತಿಯಲ್ಲಿ 170 ಎಕರೆ ಜಮೀನನ್ನು ಸೈನಿಕರ ಉಪಯೋಗಕ್ಕಾಗಿ ಒಪ್ಪಿಸಿ ಬಿಡುತ್ತೇವೆ ಎಂದು ತಿಳಿಸಿದ್ದಾರೆ.