ಕನ್ನಡ ಭಾಷೆ ಅಳಿಯುವ ಭೀತಿ ಇದೆ ಎನ್ನುವ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಅಂತಹ ಆತಂಕದಆವಶ್ಯಕತೆಯಿಲ್ಲ. ಎರಡೂವರೆ ಸಾವಿರ ಇತಿಹಾಸವಿರುವ ಕನ್ನಡ ಭಾಷೆಯ ಬೇರುಗಳು ಗಟ್ಟಿಯಾಗಿವೆ. ಅದು ಎಂತಹಬಿರುಗಾಳಿಯನ್ನು ತಡೆದುಕೊಳ್ಳಬಲ್ಲದು, ಕಾಲಕಾಲಕ್ಕೆ ಒಂದಷ್ಟು ಬದಲಾವಣೆ ಯನ್ನು ಕಾಣಬಹುದಷ್ಟೆ ಭಾಷೆ ಗಟ್ಟಿಯಾಗಲು ಅದರಅವಶ್ಯಕತೆ ಇರುತ್ತದೆ. ಸಾಹಿತ್ಯ ರಚನೆ ಆ ಭಾಷೆಗೆ ಪುನಶ್ವೇತನ ನೀಡುವ ಮಾಧ್ಯಮ. ಕನ್ನಡದಲ್ಲಿ ಸಾಹಿತ್ಯ ರಚನೆ ಆಗಾದಪ್ರಮಾಣದಲ್ಲಿ ನಿರಂತರವಾಗಿ ನಡೆಯುತ್ತಿದೆ. ಇದು ಕನ್ನಡದ ಅಸ್ತಿತ್ವವನ್ನು ಮತ್ತಷ್ಟು ಬಲಿಷ್ಠ ವಾಗಿ ಸಾಗುತ್ತಿದೆ ಎಂದು ದ.ಕ. ಜಿಲ್ಲಾಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ. ಅಭಿಪ್ರಾಯ ಪಟ್ಟರು.
ಮಂಗಳೂರಿನ ಕುದ್ಮಲ್ ರಂಗರಾವ್ ಸಭಾಂಗಣ ದಲ್ಲಿ ನಡೆದ ಹೃದಯವಾಹಿನಿ ಮಂಗಳೂರು ಮತ್ತು ಲಯನ್ಸ್ ಕ್ಲಬ್, ಸ್ಮಾರ್ಟ್ ಸಿಟಿಮಂಗಳೂರು:ಜಂಟಿ ಆಶ್ರಯದಲ್ಲಿ
ಮಂಗಳೂರು ಪುರಭವನದಲ್ಲಿ
ಜರುಗಿದ 16ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ನಾಲ್ಕು ಕೃತಿಗಳನ್ನುಲೋಕಾರ್ಪಣೆಗೊಳಿಸಿ ಕೃಷ್ಣಮೂರ್ತಿ ಅಭಿಜಾಯಪಟ್ಟರು.
ಸಮ್ಮೇಳನಾಧ್ಯಕ್ಷ ಡಾ. ಸತೀಶ್ ಕುಮಾರ್ ಹೊಸಮನಿ ಮಾತನಾಡಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಆಧುನಿಕರಣಗೊಂಡಿದೆ. ಡಿಜಿಟಲ್ ಗ್ರಂಥಾಲಯದ ಮಾದರಿ ಯನ್ನು ಇತರ ರಾಜ್ಯಗಳು ಅನುಸರಿಸಬೇಕು ಎಂದು ಕೇಂದ್ರ ಸರ್ಕಾರದಮಾರ್ಗಸೂಚಿ ಇದೆ. ಇದು ನಮಗೆ ರಾಷ್ಟ್ರಮಟ್ಟದಲ್ಲಿ ದೊರೆತ ಶ್ರೇಷ್ಠ ಗೌರವವಾಗಿದೆ ಎಂದರು.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣಪುನರೂರು ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಚಿತ್ತರಂಜನ್ ಬೋಳೂರು ಮುಂತಾದ ಗಣ್ಯರು ಭಾಗವಹಿಸಿದ್ದಾರೆ.
ಸಾರ್ವಜನಿಕ ಕ್ಷೇತ್ರದಲ್ಲಿ, ಅಪರಾಧ ಮುಕ್ತ ಸಮಾಜದ ನಿರ್ಮಾಣ ಪರಿಕಲ್ಪನೆಯ ಬಗ್ಗೆ ಪಾಠ ಮಾಡುತ್ತಿರುವ
ಶ್ರೀಯುತ ಗೋಪಾಲಕೃಷ್ಣ ಕುಂದರ್ ಬಜಪೆ ಇವರಿಗೆ ನವಕರ್ನಾಟಕ ರತ್ನ– 2022 ಗೌರವ ಪಶಸ್ತಿ ಪ್ರದಾನ ಮಾಡಲಾಯಿತು.
ಸಮ್ಮೇಳನ ಸಮಿತಿ ಸ್ಥಾಪಕ ಅಧ್ಯಕ್ಷ ಕೆ.ಪಿ.ಮಂಜುನಾಥ್ ಸಾಗರ್ ಸ್ವಾಗತಿಸಿದರು. ಪ್ರಿಯಾ ಮೊಂತೇರೊ ಕಾರ್ಯಕ್ರಮನಿರೂಪಿಸಿದರು. ಜಿ.ಕೆ. ಹರಿಪ್ರಸಾದ್ ಧನ್ಯವಾದ ಅರ್ಪಿಸಿದರು