ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ನವರಾತ್ರಿಯ 6 ನೇ ದಿನ ಕೂಡ ವಿವಿಧ ಪ್ರದೇಶಗಳಿಂದಭಕ್ತಾಭಿಮಾನಿಗಳು ನವರಾತ್ರಿ ಮಹೋತ್ಸವಕ್ಕೆ ಆಗಮಿಸುತ್ತಿದ್ದು ಉತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳುಜರಗುತ್ತಿದೆ.
ಇಂದು ಬೆಳಿಗ್ಗೆ ಶ್ರೀ ಮಹಾವಿಷ್ಣು ಭಜನಾ ಮಂಡಳಿ ಮಂಡೆ ಕೋಲು ಸುಳ್ಯ ತಾಲೂಕು ಇವರಿಂದ ಗೆಜ್ಜೆಗಿರಿಯ ಸತ್ಯ ಧರ್ಮಚಾವಡಿಯಲ್ಲಿ ಭಜನ ಸಂಕೀರ್ತನೆ ಮಧ್ಯಾಹ್ನ 12 ಕ್ಕೆ ಮಹಾ ಪೂಜೆ ಅನ್ನಸಂತರ್ಪಣೆ ನಡೆಯಿತು. ಸಂಜೆ ಕೂಡ ವಿವಿಧಕಾರ್ಯಕ್ರಮಗಳು ಜರಗಲಿದೆ. ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯಿಂದ ಕೊರೊನ ಸಂಕಷ್ಟದಿಂದ ಜನರನ್ನು ಪಾರು ಮಾಡುವಂತೆಮಹಾಮಾತೆ ರಾಜರಾಜೇಶ್ವರಿ ಸ್ವರೂಪಿಣಿ ಬೈದ್ಯ ಶಕ್ತಿಯಾಗಿರುವ ಮಹಾಮಾತೆ ದೇಯಿ ಬೈದೆತಿಯಲ್ಲಿ ನಿರಂತರ ವಿಶೇಷ ಪ್ರಾರ್ಥನೆಸಲ್ಲಿಸಲಾಗುತ್ತಿದೆ.