ಸಮಾಜ ಸೇವಕರು, ಕೊಡುಗೈ ಧಾನಿಗಳು, ಬಿಲ್ಲವ ಸಂಘ ಕುವೈಟ್ ನ ಮಾಜಿ ಅಧ್ಯಕ್ಷರು ಶ್ರೀ ರಘು ಸಿ ಪೂಜಾರಿಮಾರ್ನಾಡ್(ಕುವೈಟ್) ಅವರು ಕ್ಷೇತ್ರದಲ್ಲಿ ನವೆಂಬರ್ 27ರಂದು ಜರುಗುವ ಸೇವೆಯಾಟದ ಅನ್ನಸಂತರ್ಪಣೆಗೆ 25,000/- ರೂಪಾಯಿ ಮೊತ್ತವನ್ನು ಇಂದು ಸೇವಾ ರೂಪದಲ್ಲಿ ನೀಡಿರುತ್ತಾರೆ
ಕ್ಷೇತ್ರದ ಪುನರುತ್ಥಾನಕ್ಕೆ ಹಾಗೂ ಬ್ರಹ್ಮಕಲಶೋತ್ಸವ, ವಾರ್ಷಿಕ ಜಾತ್ರೋತ್ಸವ, ಯಕ್ಷಗಾನ ಸೇವೆಯ ಅನ್ನಸಂತರ್ಪಣೆಗೆ ನಿರಂತರಸೇವಾ ರೂಪದಲ್ಲಿ ನೀಡುತ್ತಾ ಬಂದಿದ್ದಾರೆ. ಒಟ್ಟು ಇದುವರೆಗೆ(8ಲಕ್ಷ) ಎಂಟು ಲಕ್ಷಕ್ಕೂ ಅಧಿಕ ಮೊತ್ತವನ್ನು ಕ್ಷೇತ್ರಕ್ಕೆ ಸಮರ್ಪಿಸಿದ್ದಾರೆ..
ಶ್ರೀಯುತರಿಗೆ ಹಾಗೂ ಅವರ ಕುಟುಂಬಕ್ಕೆ ಶ್ರೀ ಕ್ಷೇತ್ರದ ಸರ್ವ ಶಕ್ತಿಗಳು, ಮಹಾ ಮಾತೆ ದೇಯಿ ಬೈದೆತಿ, ಅವಳಿ ವೀರರೂ ಕೋಟಿಚೆನ್ನಯರು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇವೆ..
ದೇಯಿ ಬೈದ್ಯೆತಿ–ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ(ರಿ) ಮತ್ತು ಶ್ರೀ ಗೆಜ್ಜೆಗಿರಿ ಯಕ್ಷಗಾನ ಮಂಡಳಿಯ ಪರವಾಗಿಧನ್ಯವಾದಗಳು.