ಶ್ರೀಯುತರು ಕಟೀಲು ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾಗಿ, ಕನ್ಯಾಡಿ ರಾಷ್ಟ್ರೀಯ ಧರ್ಮ ಸಂಸದ್ ಇದರ ಪ್ರಧಾನ ಕಾರ್ಯದರ್ಶಿಯಾಗಿ, ಪೊಳಲಿ ಬ್ರಹ್ಮಕಲಶ ಇದರ ಹೊರೆಕಾಣಿಕೆ ಸಂಚಾಲಕರಾಗಿ, ಕುಡುಪು ಬ್ರಹ್ಮಕಲಶ ಸಮಿತಿಯ ಹೊರೆಕಾಣಿಕೆ ಸಂಚಾಲಕರಾಗಿ, ತುಳುನಾಡಿನ ಯಕ್ಷಗಾನ ಇತಿಹಾಸದಲ್ಲಿ ಅತೀ ಹೆಚ್ಚು ಹತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆ ಸೇರುವ ಪ್ರತಿಷ್ಠಿತ ಸಜಿಪ ಮಾಗಣೆ ದುರ್ಗಾ ಪರಮೇಶ್ವರಿ ಯಕ್ಷಗಾನ ಸಮಿತಿಯಲ್ಲಿ 5ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ.
ಕಿಲ್ಲೂರುಗುತ್ತು ಬ್ರಹ್ಮಕಲಶ ಸಮಿತಿಯ ಅಧ್ಯಕ್ಷರಾಗಿ, ಬಾಲಗಣಪತಿ ದೇವಸ್ಥಾನ ಸಜಿಪ ಬ್ರಹ್ಮಕಲಶ ಸಮಿತಿಯ ಸಂಚಾಲಕರಾಗಿ, ನಾಲ್ಕೃತ್ತಾಯ ಸಜಿಪ ಮಾಗಣೆಯ ಜೀರ್ಣೋದ್ಧಾರದಲ್ಲಿ ತೊಡಗಿಕೊಂಡು, ಪ್ರಸ್ತುತ ನಂದಾವರ ವಿನಾಯಕ ಶಂಕರ ನಾರಾಯಣ ದುರ್ಗಾಂಭ ಕ್ಷೇತ್ರ ಜೀರ್ಣೋದ್ಧಾರ ಸಮಿತಿಯ ಸದಸ್ಯರಾಗಿ, ನಾಗಕನ್ನಿಕ ದೇವಸ್ಥಾನ ಬ್ರಹ್ಮಕಲಶ ಸಂಚಾಲಕ & ಹೊರೆಕಾಣಿಕೆ ಸಂಚಾಲಕರಾಗಿ ಇನ್ನು ಹತ್ತು ಹಲವಾರು ದೈವ ದೇವಸ್ಥಾನಗಳಲ್ಲಿ ಸಾಮಾಜಿಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನನ್ನು ನಾನು ತೊಡಗಿಸಿ ಕೊಂಡು, ಗೆಜ್ಜೆಗಿರಿ ಕ್ಷೇತ್ರದ ಟ್ರಸ್ಟಿಯಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಾ ಇದೀಗ ದೇಯಿಬೈದ್ಯೆತಿ ಕೋಟಿ-ಚೆನ್ನಯ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿಯ ಪ್ರಧಾನ ಸಂಚಾಲಕರಾಗಿ ಆಯ್ಕೆಯಾಗಿರುವ ಶ್ರೀ ನವೀನ್ ಸುವರ್ಣ ಸಜಿಪ ಅವರಿಗೆ ಅಭಿನಂದನೆಗಳು.