ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘ (ರಿ)ಕರ್ನಾಟಕ*BSNDP ಇವರ ವತಿಯಿಂದ ದಿನಾಂಕ 09 ಜನವರಿ 2022 ರಂದು ರವಿವಾರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಈಡಿಗರ ಭವನದಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ಶ್ರೀನಾರಾಯಣಗುರು ಧಾರ್ಮಿಕ ಸಮಾವೇಶ ಹಾಗೂ ವಿಶ್ವಶಾಂತಿ ಯಾಗದ ಕುರಿತು ಪತ್ರಿಕಾಗೋಷ್ಠಿಯನ್ನು ಶಿವಮೊಗ್ಗ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ BSNDP ಶಿವಮೊಗ್ಗ ಜಿಲ್ಲಾಧ್ಯಕ್ಷ ನಾಗರಾಜ್ ಕೈಸೋಡಿ ಮಾತನಾಡಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಈಡಿಗ ಭವನದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ನಡೆಯುವ ಶ್ರೀ ನಾರಾಯಣ ಗುರು ಧಾರ್ಮಿಕ ಸಮಾವೇಶ ಹಾಗೂ 501 ಜನ ಸಮಾಜದ ಅರ್ಚಕರು-ಶಾಂತಿಗಳಿಂದ ವಿಶ್ವಶಾಂತಿ ಯಾಗ ಹಮ್ಮಿಕೊಂಡಿದ್ದೇವೆ.
ಈ ಕಾರ್ಯಕ್ರಮಕ್ಕೆ ರಾಜ್ಯದ BSNDP ಎಲ್ಲಾ ಪದಾಧಿಕಾರಿಗಳು ಹಾಗೂ ಈಡಿಗ, ಬಿಲ್ಲವ, ನಾಮಧಾರಿ, ದೀವರು, ತೀಯಾ ಸೇರಿದಂತೆ 26 ಒಳಪಂಗಡಗಳ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ BSNDP ರಾಜ್ಯಾಧ್ಯಕ್ಷರಾದ ಸೈದಪ್ಪ.ಕೆ.ಗುತ್ತೇದಾರ್, BSNDP ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂತರಾಜ್ ಎಲ್ ಆರ್ಯ,ಶಿವಮೊಗ್ಗ ಜಿಲ್ಲಾ BSNDP ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಚೊಡನಾಳ,ಶಿವಮೊಗ್ಗ ಗ್ರಾಮಾಂತರ BSNDP ಅಧ್ಯಕ್ಷರಾದ ಮಂಜುನಾಥ್.ಕೆ.ಕೂಡಿ,ಶಿಕಾರಿಪುರ ತಾಲೂಕು BSNDP ಅಧ್ಯಕ್ಷರಾದ ಬಸವರಾಜ ಬನ್ನೂರು,ಶಿವಮೊಗ್ಗ ಜಿಲ್ಲಾ BSNDP ಮಾಧ್ಯಮ ಸಲಹೆಗಾರರಾದ ದಿನೇಶ್ ಇತರರು ಉಪಸ್ಥಿತರಿದ್ದರು.