ಉಜಿರೆ: “ದಕ್ಷಿಣ ಭಾರತದ ಅಯೋಧ್ಯೆ” ಈ ಪ್ರಸಿದ್ಧಿಯಿರುವ ಪರಮಪೂಜ್ಯ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಸಂಸ್ಥಾಪಿಸಲ್ಪಟ್ಟ ಶ್ರೀ ರಾಮ ಕ್ಷೇತ್ರ ,ಕನ್ಯಾಡಿ,ಉಜಿರೆ ಯಲ್ಲಿರುವ ಸನ್ನಿಧಾನಕ್ಕೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಯ ಸಕ್ರೀಯ ಅಧ್ಯಕ್ಷರೂ ಸಮಾಜಮುಖಿ ಯುವನೇತಾರರಾದ ಸನ್ಮಾನ್ಯ ಪ್ರವೀಣ್ ಪೂಜಾರಿಯವರ ಮುಂದಾಳತ್ವದಲ್ಲಿ, ಸದಸ್ಯಮಿತ್ರರು ಭೇಟಿ.ಚಾತುರ್ಮಾಸ ವೃತಾಚರಿಸುತ್ತಿರುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾಯಿತು. ಇದೇ ಸಂದರ್ಭ ಸಂಸ್ಥೆಯ ಕಾರ್ಯಚಟುವಟಿಕೆಗಳ ವಿಸ್ತ್ರತ ಮಾಹಿತಿ ಪಡೆದು ಶುಭಾಶಂಸಿದ ಸ್ವಾಮೀಜಿಯವರು, ಸಮಾಜದ ಆಶಯಗಳು ಈಡೇರಬೇಕಾದರೆ ಸಂಘಟನೆ ಬಲಗೊಳ್ಳಬೇಕು. ಈ ನಿಟ್ಟಿನಲ್ಲಿ ವಿಶ್ವಾಸನೀಯ ಮತ್ತು ದಕ್ಷ ನಾಯಕತ್ವದ ಅಗತ್ಯತೆ ಬಹಳಷ್ಟಿದೆ. ನೀವೆಲ್ಲ ಯುವಕರು ಜವಾಬ್ದಾರಿಯುತವಾಗಿ ಮುನ್ನೆಡೆದು ಆದರ್ಶಯುತರಾಗುವಲ್ಲಿ ಭಗವಾನ್ ಶ್ರೀ ರಾಮಚಂದ್ರ ಮತ್ತು ವಿಶ್ವವಂದ್ಯ ನಾರಾಯಣ ಗುರುಗಳ ದಯೆಯನ್ನು ಪ್ರಾರ್ಥಿಸಿ ಅನುಗ್ರಹಿಸಿದರು.ಪಾರಮಾರ್ಥಿಕ ಬದುಕನ್ನು ಒಪ್ಪಿಕೊಂಡ ಸ್ವಾಮೀಜಿಗೆ ಸಮಸ್ತ ಲೋಕ ಕಲ್ಯಾಣದ ದಿವ್ಯ ಆಶಯವಿದೆ.ಸರ್ವಸಮನ್ವಯ ಸಮೃದ್ಧಿಯ ಗುಣನಡೆಯಿದೆ.ಇದಕ್ಕನುವಾಗಿ ಕನ್ಯಾಡಿ ಶ್ರೀ ರಾಮ ಕ್ಷೇತ್ರದಿಂದ ಎಲ್ಲರ ಒಳಿತು ಸಾಕಾರವಾಗಲಿ. ಅಂತೆಯೆ ನಮ್ಮ ಸಮಾಜದ ಶಕ್ತಿ ಕೇಂದ್ರವಾದ ಈ ಸಾನಿಧ್ಯಕ್ಕೆ ಬಿಲ್ಲವ ಬಂಧುಗಳೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಿ ಶ್ರದ್ಧೆಯ ಮಹತ್ವ ನೀಡಬೇಕೆಂಬುದು ಬಿಲ್ಲವ ಯುವ ವೇದಿಕೆಯ ಸದಾಶಯವಾಗಿದೆ.
Email us: billavaswarriors@gmail.com