ತುಂಬೆಯ ಸಂತೋಷ್ ಕುಮಾರ್ (43 ವರ್ಷ) ಕೊಟ್ಟಿಂಜರವರು ಮಹಾಮಾತೆ ದೇಯಿ ಬೈದೆತಿ ಹಾಗೂ ಕೋಟಿ ಚೆನ್ನಯರ ಬಗ್ಗೆ ಆಳವಾದ ಅಧ್ಯಯನ ನಡೆಸುವುದರ ಜತೆ ಮಹಾನ್ ಶಕ್ತಿಯ ಪರಮ ಭಕ್ತರಾಗಿದ್ದರು.
ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀಕ್ಷೇತ್ರ ಗೆಜ್ಜೆಗಿರಿಯ ಆರ್ಕಿಟೆಕ್ಟ್ ಆಗಿ, ಕ್ಷೇತ್ರಾಡ ಳಿತ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥವಾಗಿ ಕೆಲಸ ಮಾಡುವ ಪ್ರಾಮಾಣಿಕ ವ್ಯಕ್ತಿತ್ವದ ಇವರು, ಶ್ರೀ ಕ್ಷೇತ್ರ ಗೆಜ್ಜೆಗಿರಿ ಮಾತ್ರವಲ್ಲದೆ ಬಂಟ್ವಾಳ ಸಜಿಪ ಶ್ರೀ ನಾರಾಯಣಗುರು ಜ್ಞಾನ ಮಂದಿರ, ಸುಂಕದಕಟ್ಟೆ ನಿರಂಜನ ಸ್ವಾಮಿಜಿ ಸಮಾಧಿ ನಿರ್ಮಾಣ ಮುಂತಾದ ಅನೇಕ ಸರ್ವ ಜಾತಿ ಜನಾಂಗದ ಮಂದಿರ ಸಭಾ ಭವನ ನಿರ್ಮಾಣದಲ್ಲಿ ಕೆಲಸ ಮಾಡಿದವರು. ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶ ಪಾಲನೆ ಮಾಡುವ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ಇವರು ಶ್ರೀ ನಾರಾಯಣ ಗುರು ಚಾರಿಟೆಬಲ್ ಟ್ರಸ್ಟ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವಿವಿಧ ಚಟುವಟಿಕೆ ಗಳಲ್ಲಿ ಗುರುತಿಸಿಕೊಂಡವರು.
ಎಸ್. ಕೆ. ಬಿಲ್ಡರ್ಸ್‌ನ ಮಾಲೀಕರು ಹೆಸರಾಂತ ಆರ್ಕಿಟೆಕ್ಟ್ ಆಗಿರುವ ಇವರು ತಾಯಿ, ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ. ಅಂತ್ಯಕ್ರಿಯೆ ಶನಿವಾರ ಬೆಳಗ್ಗೆ 10.30ಕ್ಕೆ ತುಂಬೆ ಕೊಟ್ಟಿಂಜದ ಅವರ ಮನೆಯಲ್ಲಿ ನೆರವೇರಲಿದೆ.
ಅಂತ್ಯ ಕ್ರಿಯೆ ನಾಳೆ ಬೆಳಿಗ್ಗೆ 10.30 ಕ್ಕೆ*