ಸಾಧನೆ ಎಂಬ ಯುದ್ಧದ ಯುಕ್ತಿಯಲ್ಲಿ, ಸಾಧಿಸಿ ಮುಕ್ತಿ ಪಡೆದ ನಮ್ಮ ಬಿಲ್ಲವ ಕುವರಿ ನೇಹಾ ಪಿ. ಕೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೋಂದೆಲ್ ನಿವಾಸಿಯಾದ ಶ್ರೀ ದಿ! ಪ್ರವೀಣ್ ಕುಮಾರ್ ಹಾಗೂ. ಶ್ರೀಮತಿ ಸುಜಾತ ಬಿಉಳ್ಳಾಲ್ ರವರ ಪುತ್ರಿ ಕುಮಾರಿ ನೇಹಾ ಪಿ. ಕೆ. ಅವರು ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಹುದ್ದೆಯ ನೇರ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿಆಯ್ಕೆಯಾಗಿದ್ದಾರೆ ಇವರು ಶಿರಸಿಯ ಅರಣ್ಯ ಮಹಾವಿದ್ಯಾಲಯದಿಂದ ಬಿಎಸ್ಸಿ(ಫಾರೆಸ್ಟ್ರಿ) ಪದವಿ ಪಡೆದಿರುತ್ತಾರೆ. ನಿಮ್ಮ ಈಸಾಧನೆಯಿಂದ ನಮ್ಮ ಬಿಲ್ಲವ ಸಮಾಜದ ಕೀರ್ತಿ ಪತಾಕೆಯು ಬಾನೆತ್ತರಕ್ಕೆ ಏರಲಿ.
ಕಳೆದ 2 ವರ್ಷಗಳಿಂದ ಮಂಗಳೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿ, ಸಾಮಾಜಿಕ ಅರಣ್ಯ ವಿಭಾಗ, ದಕ್ಷಿಣ ಕನ್ನಡಜಿಲ್ಲಾ ಪಂಚಾಯತ್ ಇಲ್ಲಿ ನರೇಗಾ ತಾಂತ್ರಿಕ ಸಹಾಯಕರು(ಅರಣ್ಯ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿಮ್ಮ ನಿಸ್ಕಲ್ಮಷ ಸೇವೆಯೂಅರಣ್ಯ ಇಲಾಖೆಯಲ್ಲಿ ಶಾಶ್ವತವಾಗಿ ನಡೆಯಲಿ, ನಿಮ್ಮ ಈ ನಾಮವು ಅರಣ್ಯ ಇಲಾಖೆಯಲ್ಲಿ ಉತುಂಗ ಶಿಖರ ಎರಲಿ ಎಂದು ನಾವುಆಶಿಸುತ, ಮನದಾಳದ ಅಭಿನಂದನೆಗಳನ್ನು ನಿಮಗೆ ಸಲ್ಲಿಸುತಿದ್ದೇವೆ.
Proud To be Billava
Mangalore billava
Billava warriors