ಬ್ರಹ್ಮಾವರ : ಉಡುಪಿ ಜಿಲ್ಲೆಯ ಕುಂದಾಪುರ ಸಾಯಿಬ್ರಕಟ್ಟೆಯ ಕಾಜ್ರಳ್ಳಿ ನಿವಾಸಿ ಅನಿಶಾ ಪೂಜಾರಿ ಆತ್ಮಹತ್ಯೆ ಪ್ರಕರಣದಲ್ಲಿ, ಅಸಹಜ ಸಾವಿನ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಆರೋಪಿ ಚೇತನ ಶೆಟ್ಟಿಯ ವಿರುದ್ಧ ಪ್ರಕರಣ ದಾಖಲಾಗಿ ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ.ಅನಿಶಾ ಪೂಜಾರಿಯ ತಾಯಿ ಅನಿಶಾ ಸಾವಿಗೆ ಸಂಬಂಧಿಸಿ ದೊರಕಿರುವ ಸಾಕ್ಷ ಮತ್ತು ದೃಶ್ಯ ಚಿತ್ರದಿಂದ ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಅಂತಿದ್ದರು, ಅವಳ ಸಾವಿನಲ್ಲಿ ಬಹಳಷ್ಟು ಸಂಶಯ ಮೂಡಿ ಬಂದಿರುವುದರಿಂದ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ, ಮೃತಳ ತಾಯಿ ಪ್ರೇಮರವರು ಪ್ರಕರಣವನ್ನು ಭೇದಿಸುವ ಬಗ್ಗೆ ಸಿಓಡಿ ತನಿಖೆ ಮಾಡುವಂತೆ ಮಾನ್ಯ ಉಚ್ಚನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿರುತ್ತಾರೆ.