“ಅನುಭವಕ್ಕಿಂತ ಮಿಗಿಲಾದುದು ಏನು ಇಲ್ಲ ” ಎಂಬ ಮಾತಿದೆ ಅಂತೆಯೇ ತಾನು ಅನುಭವಿಸಿದ ನೋವು , ಸೋಲನ್ನು ಪಾಠವನ್ನಾಗಿ, ಗೆಲುವು, ಸಹಕಾರವನ್ನು ಮಾರ್ಗದರ್ಶನವನ್ನಾಗಿ ಇಟ್ಟುಕೊಂಡು ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಬಿಲ್ಲವ ಪ್ರತಿಭೆ ಅಂಚನ್ ಗೀತಾ.ಇವರು ಅಣ್ಣಿ ಅಂಚನ್ ಹಾಗೂ ಶ್ರೀಮತಿ ಭವಾನಿ ಪೂಜಾರ್ತಿಯವರ ಪುತ್ರಿ. ಹುಟ್ಟಿದ್ದು ಮಾಯಾನಗರಿ ಮುಂಬಯಿಯಲ್ಲಿ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಂಬಯಿಯಲ್ಲಿ , ಪ್ರೌಢ ಶಿಕ್ಷಣವನ್ನು ನೀರುಡೆಯಲ್ಲಿ, ಪಿಯುಸಿ ಯನ್ನು ಕಟೀಲು ಕಾಲೇಜಿನಲ್ಲಿ ಪೂರೈಸಿ ನಂತರ ಆಳ್ವಾಸ್ ನಲ್ಲಿ ಪತ್ರಿಕೋದ್ಯಮ ಪದವಿ ಶಿಕ್ಷಣವನ್ನು ಪಡೆದಿದ್ದಾರೆ. ನಂತರ ಮೈಸೂರಿನಲ್ಲಿ ಎಂ.ಎ ಜರ್ನಲಿಸಂ , ಬೆಂಗಳೂರಿನಲ್ಲಿ ಎಂ.ಎ ಇಂಗ್ಲಿಷ್ ಲಿಟರೇಚರ್ ಮುಗಿಸಿ ಇವರು ಸತತ ಮೂರು ಪದವಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
“ಯಾವುದೇ ಯಶಸ್ವಿನ ದಾರಿಯ ಪ್ರಾರಂಭ ಮೊದಲು ಶೂನ್ಯದಿಂದಲೇ ಆರಂಭವಾಗುವುದು.” ಅಂತೆಯೇ 2010 ರಲ್ಲಿ ಏಕಾಂಗಿಯಾಗಿ ಬೆಂಗಳೂರಿನತ್ತ ಪಯಣಿಸಿದ ಗೀತಾರವರಿಗೆ ಆಗ ಬೆಂಗಳೂರು ನಗರ ಜೀವನದ ಅರಿವೇ ಇರಲಿಲ್ಲ ಆ ಸಂದರ್ಭದಲ್ಲಿ ಸಹಕರಿಸಿದ ಅವರ ಜರ್ನಲಿಸಂ ಶಿಕ್ಷಕಿ ಮೌಲ್ಯ ಜೀವನ್ ರವನ್ನು ಪ್ರತಿ ಬಾರಿ ಸ್ಮರಿಸುತ್ತಾರೆ. ಮುಂದೆ ಬೆಂಗಳೂರಿನ ಭಾರತೀಯ ವಿದ್ಯಾಭವನದಲಿ ಒಂದು ಕೋರ್ಸ್ ಶಿಕ್ಷಣ ಪಡೆಯುತ್ತಿರುವಾಗ ಬೆಳಗ್ಗೆ ಕ್ಲಾಸ್ ಪಡೆದು ಮಧ್ಯಾಹ್ನದ ನಂತರ ಏರ್ ಟೇಲ್ ಕಂಪನಿಯ ಲ್ಲಿ ಕೆಲಸ ಮಾಡುವ ಮೂಲಕ ಬೆಂಗಳೂರಿನಲ್ಲಿ ಜೀವನ ನಡೆಸಿದರು.
ಅಂಚನ್ ಗೀತಾರವರು ತಮ್ಮ ಜೀವನದ ಪ್ರತಿ ಕಷ್ಟ , ನೋವನ್ನು ಮರೆಸುತ್ತಿದ್ದದ್ದು ಅದು ನನ್ನ ತಂದೆ ತಾಯಿ ಹಾಗೂ ಸಹೋದರಿಯರ ಪ್ರೀತಿ, ಮತ್ತು ಸದಾ ಧೈರ್ಯ ತುಂಬೋ ಸ್ನೇಹಿತೆಯರು ಎಂದು ಹೇಳುತ್ತಾರೆ. ಅಲ್ಲದೆ ನನ್ನ ತಂದೆ ತಾಯಿ ಅನುಭವಿಸಿದ ನೋವು ನನಗೆ ಆತ್ಮವಿಶ್ವಾಸವನ್ನು ಕಲಿಸಿಕೊಟ್ಟಿದೆ ಎನ್ನುತ್ತಾರೆ. ಮುಂದೆ 2010 ರಿಂದ ಮಾಧ್ಯಮದಲ್ಲಿ ತಮ್ಮ ಪಯಣ ಆರಂಭಿಸಿದ ಇವರು ಸುಮಾರು 9 ವರ್ಷಗಳ ಕಾಲ ಸುವರ್ಣ ನ್ಯೂಸ್, ಕಸ್ತೂರಿ ನ್ಯೂಸ್, ಪ್ರಜಾ ಟಿವಿ ಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇವರು ಮಾಡೆಲಿಂಗ್ ಕ್ಷೇತ್ರದಲ್ಲೂ ಮಿಂಚಿದ್ದು ಹೆಮ್ಮೆಯ ಸಂಗತಿಯಾಗಿದೆ.ಅಷ್ಟೇ ಅಲ್ಲದೆ ತುಳು ,ಕನ್ನಡ ಸಿನಿಮಾದಲ್ಲಿ ಅಭಿನಯಿಸಿರುವ ಇವರು ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಶ್ ರಿಯಾಲಿಟಿ ಶೋ ನಲ್ಲೂ ಭಾಗವಹಿಸಿದ್ದಾರೆ. ಬಾಲಿವುಡ್ ತಾರೆಯರಾದ ಅನಿಲ್ ಕಪೂರ್, ಸುನಿಲ್ ಶೆಟ್ಟಿ ಯವರ ಜೊತೆ ಇಂಟರ್ ವ್ಯೂ ಮಾಡಿದ ಹೆಗ್ಗಳಿಕೆ ಇವರದ್ದಾಗಿದೆ. ಅಷ್ಟೆಅಲ್ಲ ಇವರ ಹಲವಾರು ಕವನ ಸಂಕಲನಗಳು ಬಿಡುಗಡೆಯಾಗಿದೆ.
ಪ್ರಸ್ತುತ ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಪತಿ ರವಿ ಶಿವರಾಮ್ ಪ್ರತಿ ಹೆಜ್ಜೆಯಲ್ಲೂ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ ಎನ್ನುತ್ತಾರೆ. ಅಲ್ಲದೆ ತಮ್ಮ ಸಂಬಳದಲ್ಲಿ ಒಂದಷ್ಟು ಪಾಲನ್ನು ವೃಧ್ದಾಶ್ರಮಕ್ಕೆ ನೀಡುತ್ತಿದ್ದು ಇದು ಇವರ ಸಮಾಜಪರ ಕಾಳಜಿಯನ್ನು ಪ್ರತಿನಿಧಿಸುತ್ತದೆ.
ಹೀಗೆ ಸಾಧನೆಯ ಹಾದಿಯಲಿ ಸಾಗುತ್ತಿರುವ ಅಂಚನ್ ಗೀತಾರವರ ಬದುಕು ಉಜ್ವಲವಾಗಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂಬುದೇ ನಮ್ಮೆಲ್ಲರ ಆಶಯ.
Email us: billavaswarriors@gmail.com