ದೇಶಮಟ್ಟದಲ್ಲಿ ಸುದ್ದಿಯಾದ ಯುವವಾಹಿನಿ ಮಾಣಿ ಘಟಕದ ಮಂಗಳೂರಿನ ತಂಡ. ಭಾರತ ಸರಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆ ಹಾಗೂ NFDC ಆಯೋಜಿಸಿದ ಕಿರುಚಿತ್ರ ಸ್ಪರ್ಧೆಯಲ್ಲಿ ತೀರ್ಪುಗಾರರು ನೀಡುವ ‘ಸ್ಪೇಷಲ್ ಮೆನ್ಷನ್ ಸರ್ಟಿಪಿಕೇಟ್’ ಗೆ ಆತ್ಮವಂದನಾ ದೇಶಕ್ಕಾಗಿ (Athma Vandan for Nation) ಆಯ್ಕೆ.ದೇಶಾದ್ಯಂತ 30 ರಾಜ್ಯಗಳಿಂದ ಹಲವು ತಂಡಗಳು ಈ ಸ್ಪರ್ಧೆಯಲ್ಲಿ ನೋಂದಾಯಿಸಿದ್ದು ನಮ್ಮ ಜಿಲ್ಲೆಯಿಂದ ಅಂತಿಮ ಹಂತಕ್ಕೆ ಆಯ್ಕೆಯಾದ ಏಕೈಕ ತಂಡ ಆತ್ಮವಂದನಾ ದೇಶಕ್ಕಾಗಿ.
ದೇಶಪ್ರೇಮ ಇದು ಪ್ರತಿಯೊಬ್ಬ ಭಾರತೀಯನ ಎದೆಯ ಬಡಿತದಲ್ಲೂ ಇದೆ.ಅತೀ ಚಿಕ್ಕ ವಯಸ್ಸಿನಲ್ಲೇ ನೇಣಿಗೆ ಕೊರಳೊಡ್ಡಿದ ಭಗತ್ ಸಿಂಗ್ ರವರ ದೇಶಪ್ರೇಮ ಅಪಾರವಾದದ್ದು.ತನ್ನ ಪ್ರಾಣವನ್ನೆ ದೇಶಕ್ಕಾಗಿ ಮುಡಿಪಾಗಿಟ್ಟ ಯೋಧರ ದೇಶಪ್ರೇಮ.ಹಗಲು-ರಾತ್ರಿ ಎನ್ನದೆ,ಬೆವರು ಸುರಿಸಿ ದುಡಿದು ದೇಶಕ್ಕೆ ಅನ್ನವನ್ನು ನೀಡುವ ರೈತನ ದೇಶಪ್ರೇಮಗಡಿಯಲ್ಲಿ ವೀರ ಯೋಧ ನಾಡಿನಲ್ಲಿ ಖಾಕಿ ಯೋಧ ಎನ್ನುವ ಹಾಗೆ ಪೋಲಿಸ್ ರ ದೇಶಪ್ರೇಮ ಹೀಗೆಯೇ ಪ್ರತಿಯೊಬ್ಬ ಭಾರತೀಯನಲ್ಲೂ ದೇಶಪ್ರೇಮವು ಅಚಲವಾಗಿದೆ. ಓಟ್ಟೊಟ್ಟಿಗೆ ದೇಶವು ಇನ್ನಷ್ಟು ಬಲಿಷ್ಠವಾಗಬೇಕಿದೆ. ಹೀಗೆ ದೇಶವು ಬಲಿಷ್ಠ ಆಗಬೇಕಾದರೆ ನಾವು ಸ್ವತಂತ್ರರಾಗಬೇಕು,ಸ್ವವಲಂಭಿಯಾಗಬೇಕು. ನಾವು ಸ್ವತಃ ಸ್ವವಲಂಬಿಯಾದರೆ ದೇಶವನ್ನು ಬಲಿಷ್ಠಗೊಳಿಸಬಹುದು ಮತ್ತು ಆಗ ಮಾತ್ರ ಆತ್ಮರ್ನಿಭರತೆಯ ಕನಸು ನನಸಾಗಲು ಸಾಧ್ಯ.
ಇದೆ ಪರಿಕಲ್ಪನೆಯನ್ನು ಇಟ್ಟುಕೊಂಡು ಯುವವಾಹಿನಿ ಮಾಣಿ ಘಟಕದ ನಿರ್ಮಾಣದಲ್ಲಿ ತಯಾರಾದ ಕಿರುಚಿತ್ರ “ಆತ್ಮವಂದನಾ ದೇಶಕ್ಕಾಗಿ”.
ರಾಜೇಶ್ ಎಸ್ ಬಲ್ಯ ರವರ ಕಥೆ-ಚಿತ್ರಕಥೆ-ನಿರ್ದೇಶನದ ಈ ಕಿರುಚಿತ್ರಕ್ಕೆ ಶಿವರಾಜ್ ಪಿ.ಆರ್ ರವರು ಕೂಡ ಚಿತ್ರ ಕಥೆ ಜೊಡಿಸಿದ್ದಾರೆ.ಕಿರುಚಿತ್ರಕ್ಕೆ ಸಂಭಾಷಣೆಯನ್ನು ಪ್ರಶಾಂತ್ ಅನಂತಾಡಿ ಬರೆದಿದ್ದಾರೆ. ಪ್ರವೀಣ್ ಸಾಲ್ಯಾನ್ ಮತ್ತು ವಿಕ್ರಮ್ ಬಿಳಿಯೂರು ಅವರು ಇಡೀ ಕಿರುಚಿತ್ರದ ಕಣ್ಣುಗಳಂತೆ ಶೂಟಿಂಗ್ ಮಾಡಿದ್ದಾರೆ. ಸಂಕಲನವನ್ನು ದೀಕ್ಷಿತ್ ಮತ್ತು ಪೋಸ್ಟರ್ ಡಿಸೈನ್ ನ್ನು ಚರಣ್ ಅನಂತಾಡಿ ಮಾಡಿದ್ದು,ಮಿತುನ್ ರಾಜ್ ವಿದ್ಯಾಪುರ ಮತ್ತು ರಾಹುಲ್ ದೇವಾಡಿಗ ಕಿರುಚಿತ್ರಕ್ಕೆ ಅಧ್ಬುತ ಸಂಗೀತ ಸಂಯೋಜಿಸಿದ್ದಾರೆ. ಮತ್ತು ಈ ಕಿರುಚಿತ್ರಕ್ಕೆ ರಮೇಶ್ ಪೂಜಾರಿ ಮುಜಲ,ಹರೀಶ್ ಪೂಜಾರಿ ಬಾಕಿಲ ಮತ್ತು ಶಿವರಾಜ್ ಪಿ.ಆರ್ ರವರು ನಿರ್ಮಾಪಕರಾಗಿದ್ದಾರೆ.
ದೇಶಪ್ರೇಮ ಮತ್ತು ಆತ್ಮನಿರ್ಭರತೆಯ ಕುರಿತಾದ ಈ ಕಿರುಚಿತ್ರವು ಭಾರತ ಸರಕಾರದ ಮಾಹಿತಿ ಮತ್ತು ಪ್ರಸಾರ(Information and Broadcasting) ಇಲಾಖೆ NFDC ಜೊತೆಗೂಡಿ 2020ರ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದೇಶವ್ಯಾಪ್ತಿಯಲ್ಲಿ ಆಯೋಜಿಸಿದ ದೇಶಪ್ರೇಮ ಹಾಗೂ ಆತ್ಮನಿರ್ಭರತೆಯ ಕುರಿತಾದ 3 ನಿಮಿಷಗಳ online ಕಿರುಚಿತ್ರ ಸ್ಪರ್ಧೆಯಲ್ಲಿ ಹೆಸರು ನೋಂದಾಯಿಸಿದ ಈ ಕಿರುಚಿತ್ರ ಆಯ್ಕೆಗಾರರ ಆಯ್ಕೆಯ ಅಂತಿಮ 11 ಕಿರುಚಿತ್ರಗಳ ಪಟ್ಟಿಗೆ ಆಯ್ಕೆಯಾಗಿ ತೀರ್ಪುಗಾರರು ನೀಡುವ “Special Mention Certificate” ಗೆ ಪುರಸ್ಕೃತವಾಗಿರುತ್ತದೆ.