TOP STORIES:

FOLLOW US

ಹದಿಹರೆಯದವರಲ್ಲಿ ಹೆಚ್ಚುತ್ತಿದೆ ಹೃದಯಾಘಾತ.! ಈ ಕುರಿತು ವೈದ್ಯರಿಂದ ಮಹತ್ವದ ಮಾಹಿತಿ


ಬಹಳ ದಿನಗಳಿಂದ ಇದ್ದ ಭಯವೊಂದು ನಿಧಾನವಾಗಿ ವಾಸ್ತವದ ರೂಪ ತಾಳುತ್ತಿದ್ದು, 40 ವರ್ಷ ವಯಸ್ಸಿನ ಒಳಗಿನ ಮಂದಿಯಲ್ಲೂ ಹೃದಯಾಘಾತವಾಗುವ ಸಾಧ್ಯತೆಗಳು ದಿನೇ ದಿನೇ ಹೆಚ್ಚುತ್ತಲೇ ಇದೆ.

ಪುರುಷರಲ್ಲಿ ಸಾಮಾನ್ಯವಾಗಿ 50ರ ಹರೆಯದಲ್ಲಿ ಹಾಗೂ ಮಹಿಳೆಯರಲ್ಲಿ 60ರ ಹರೆಯದಲ್ಲಿ ಹೃದಯಾಘಾತವಾಗುವ ಸಾಧ್ಯತೆ ಇದೆ ಎಂದು ಆಧುನಿಕ ವೈದ್ಯಕೀಯ ಲೋಕ ಲೆಕ್ಕಾಚಾರ ಮಾಡುತ್ತಿದ್ದ ನಡುವೆಯೇ ಈ ರೀತಿಯ ಹೊಸದೊಂದು ಆತಂಕ ಬೇರು ಬಿಡುತ್ತಿದೆ.

“40ಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ನಿಧನರಾಗುವುದನ್ನು ನೋಡುವುದು ಬಹಳ ಅಪರೂಪವಾಗಿತ್ತು. ಈಗ ಆಗುತ್ತಿರುವುದನ್ನು ನೋಡಿದರೆ ನಾವೆಲ್ಲೊ ತಪ್ಪು ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎನಿಸುತ್ತಿದೆ,” ಎಂದು ಬೋಸ್ಟನ್‌ನಲ್ಲಿರುವ ಹಾರ್ವಡ್‌ ವೈದ್ಯಕೀಯ ಶಾಲೆಯ ಪ್ರೊಫೆಸರ್‌ ರಾನ್ ಬ್ಲಾಂಕ್‌ಸ್ಟೀನ್ ತಿಳಿಸಿದ್ದಾರೆ.

ಈ ಸಮಸ್ಯೆ ಕೇವಲ ಪಾಶ್ಚಾತ್ಯ ಜಗತ್ತಿಗೆ ಮಾತ್ರವೇ ಸೀಮಿತವಾಗಿಲ್ಲ. ಭಾರತದಲ್ಲೂ ಸಹ ಈ ರೀತಿ ದಿಢೀರ್‌ ಹೃದಯಾಘಾತಗಳಿಂದ ಸಾವು ಸಂಭವಿಸುವುದು ಬಲು ಸಾಮಾನ್ಯವಾಗುತ್ತಿದೆ. ಬಿಗ್ ಬಾಸ್ ಖ್ಯಾತಿಯ ಸಿದ್ಧಾರ್ಥ್‌ ಶುಕ್ಲಾ ಈ ಪಟ್ಟಿಗೆ ಸೇರಿದ ಹೊಸ ಹೆಸರಾಗಿದೆ ಅಷ್ಟೇ.

ಈ ಬಗ್ಗೆ ವಿವರಣೆ ಕೊಡುವ ಮುಂಬೈ ಗ್ಲೋಬಲ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ಚರಣ್ ಲಂಜೇವಾರ್‌, “ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತವಾಗಲು ಹಲವಾರು ಕಾರಣಗಳಿವೆ. ನಿಷ್ಕ್ರಿಯ ಜೀವನಶೈಲಿ, ದೈಹಿಕ ವ್ಯಾಯಾಮದ ಕೊರತೆಗಳು ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತವಾಗಲು ಮುಖ್ಯ ಕಾರಣಗಳಾಗುತ್ತವೆ” ಎಂದಿದ್ದಾರೆ.

“ತಮ್ಮ 20ರ ವಯೋಮಾನದಲ್ಲೇ ಹೃದಯಾಘಾತಕ್ಕೆ ತುತ್ತಾಗುವ ಮಂದಿ, ಮಹಿಳೆಯರನ್ನೂ ಒಳಗೊಂಡು, ಹೆಚ್ಚಾಗುತ್ತಿದ್ದಾರೆ. ದಶಕದ ಹಿಂದೆ ಹೀಗೆಲ್ಲಾ ಆಗುತ್ತಿರಲಿಲ್ಲ. ಜೊತೆಗೆ ಈ ಕೋವಿಡ್ ಸಾಂಕ್ರಮಿಕದ ಕಾಲಘಟ್ಟದಲ್ಲಿ ಹೃದಯಾಘಾತಗಳ ಕೇಸ್‌ಗಳು ಇನ್ನಷ್ಟು ಹೆಚ್ಚಾಗಿರುವುದನ್ನು ಕಂಡಿದ್ದೇವೆ,” ಎನ್ನುತ್ತಾರೆ ಚರಣ್.

“ಶಿಸ್ತಿನ ಪಥ್ಯ, ವಾಸ್ತವಿಕ ಹಾಗೂ ಸುದೀರ್ಘವಾಧಿಗೆ ಮಾಡಬಹುದಾದ ವ್ಯಾಯಾಮದ ಅಭ್ಯಾಸ, ಒತ್ತಡ ರಹಿತ ಜೀವನಗಳು ಕಡಿಮೆ ವಯಸ್ಸಿನಲ್ಲಿ ಹೃದಯಾಘಾತದ ಸಾಧ್ಯತೆ ಕಡಿಮೆ ಮಾಡುವ ಉತ್ತಮ ಕ್ರಮಗಳು. ಪ್ರತಿಯೊಬ್ಬ ವಯಸ್ಕನೂ ಸಹ ದೈಹಿಕ ತಜ್ಞರ ಬಳಿ ತಪಾಸಣೆಗೆ ಒಳಪಟ್ಟು, 30ರ ವಯಸ್ಸಿಗೆ ಕಾಲಿಡುವ ಮುನ್ನವೇ ನಿರ್ದಿಷ್ಟ ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ. ರಕ್ತ ಪರೀಕ್ಷೆಯಲ್ಲಿ ಲಿಪಿಡ್ ಹಾಗೂ ಸಕ್ಕರೆ ಅಂಶವನ್ನು ಪರಿಶೀಲನೆ ಮಾಡಬೇಕು,” ಎಂದು ವಿವರಿಸಿದ್ದಾರೆ ಚರಣ್.

ನಡಿಗೆ ಹಾಗೂ ಸೈಕ್ಲಿಂಗ್‌ಗಳಿಂದಾಗಿ ಹೃದಯಾಘಾತದ ಸಾಧ್ಯತೆಯು ಬ್ರಿಟನ್‌ನ 4.3 ಕೋಟಿ ಮಂದಿಯಲ್ಲಿ ಕಡಿಮೆಯಾಗಿದೆ ಎಂದು ಬ್ರಿಟನ್‌ನ ಲೀಡ್ಸ್‌ ವಿವಿಯ ಅಧ್ಯಯನವೊಂದು ತಿಳಿಸಿದೆ.

“ನಿಮ್ಮ ಕೆಲಸದ ಸ್ಥಳಕ್ಕೆ ತಲುಪಬೇಕಾದಲ್ಲಿ ನಡಿಗೆ ಹಾಗೂ ಸೈಕ್ಲಿಂಗ್ ಮಾಡಬೇಕಾದ ಅಗತ್ಯ ಹೆಚ್ಚಾದಲ್ಲಿ ಖುಷಿ ಪಡಿ. ನಮ್ಮ ಬ್ಯುಸಿ ಜೀವನದಲ್ಲಿ ವ್ಯಾಯಾಮ ಮಾಡಲು ಸಮಯ ಸಿಗದೇ ಇರಬಹುದು. ಆದರೆ ವ್ಯಾಯಾಮ ಮಾಡಲು ನೀವು ಜಿಮ್‌ಗೆ ಹೋಗಿ ಗಂಟೆಗಟ್ಟಲೇ ಟ್ರೆಡ್‌ಮಿಲ್ ಮೇಲೆ ಕಳೆಯಬೇಕೆಂದೇನಿಲ್ಲ,” ಎನ್ನುವ ಬ್ರಿಟಿಷ್ ಹಾರ್ಟ್ ಫೌಂಡೇಶನ್‌ನ ನಿರ್ದೇಶಕ ಮೆಟಿನ್ ಅವ್ಕಿರನ್, “ನಿಮ್ಮ ಸಂಚಾರಕ್ಕೆ ಬೈಸಿಕಲ್ ಅವಲಂಬಿಸಿದಲ್ಲಿ, ನಿಮ್ಮ ಹೃದಯ ಬಡಿತಕ್ಕೆ ಉತ್ತಮ. ಇದು ಆಯ್ಕೆಯಲ್ಲ, ಕೆಲ ಬೀದಿಗಳ ಹಿಂದೆಯೇ ನಿಮ್ಮ ವಾಹನ ಪಾರ್ಕ್ ಮಾಡುವುದು ಅಥವಾ ಕೆಲ ಸ್ಟಾಪ್‌ಗಳ ಹಿಂದೆಯೇ ಬಸ್‌ನಿಂದ ಇಳಿಯುವುದು ಇನ್ನಷ್ಟು ಆರೋಗ್ಯಕರ ಜೀವನಕ್ಕೆ ನೆರವಾಗಬಲ್ಲವು,” ಎಂದಿದ್ದಾರೆ.


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »