TOP STORIES:

FOLLOW US

ಹಲವಾರು ಕ್ಷೇತ್ರದಲ್ಲಿ ತನ್ನ ಚಾಪನ್ನು ಮೂಡಿಸಿದ ಬಾಲ ಪ್ರತಿಭೆ ಸೋಹನ ಶಂಕರ್ ಉಡುಪಿ


ಸೋಹನ ಇವರು ಶಂಕರ್ ಎಸ್ ಪೂಜಾರಿ ಮತ್ತು ನಾಗರತ್ನ ಶಂಕರ ಪೂಜಾರಿ ಯವರ ದ್ವಿತೀಯ ಪುತ್ರಿ. ಪ್ರಸ್ತುತ ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ ಅಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ .

ಕಲಿಕೆಯಲ್ಲಿ ಮಾತ್ರವಲ್ಲದೆ ಕ್ರಾಫ್ಟ್ , ಡ್ರಾಯಿಂಗ್, ಭಕ್ತಿಗೀತೆ , ಮತ್ತು ನೃತ್ಯದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ತನ್ನ ಬಾಲ್ಯದಲ್ಲಿ ಯೇ ನೃತ್ಯದಲ್ಲಿ ಆಸಕ್ತಿ ಹೊಂದಿದ್ದ ಇವರು ದೂರದಶ೯ನದಲ್ಲಿ ಬರುವಂತಹ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು಼.

ತನ್ನ 4ನೇ ವಯಸ್ಸಿನಲ್ಲಿ ನೃತ್ಯಭ್ಯಾಸವನ್ನು ಪ್ರಾರಂಭಿಸಿದ ಇವರು ಹೆಸರಂತ ನೃತ್ಯ ಸಂಸ್ಥೆಯಾದ ಎಕ್ಸ್ಟ್ರೀಮ್ ಡಾನ್ಸ್ ಅಕಾಡೆಮಿಯಲ್ಲಿ ಗುರುಗಳಾದ ಮಂಜಿತ್ ಶೆಟ್ಟಿ ಇವರಲ್ಲಿ ನೃತ್ಯ ವನ್ನು ಕಲಿಯುತ್ತಿದ್ದಾರೆ. ಭರತ ನಾಟ್ಯದಲ್ಲಿ ಆಸಕ್ತಿ ಹೊಂದಿರುವ ಇವರು ಭರತ ನಾಟ್ಯವನ್ನು ಶ್ರೀರಕ್ಷ ಮತ್ತು ಅನನ್ಯ ಇವರಲ್ಲಿ ಕಲಿಯುತ್ತಿದ್ದಾರೆ. ಮಾತ್ರವಲ್ಲದೆ ಯಕ್ಷಗಾನದಲ್ಲು ಮಿಂಚುತ್ತಿರುವ ಈ ಪ್ರತಿಭೆ ಯಕ್ಷಗಾನವನ್ನು ಗುರುಗಳಾದ ನರಸಿಂಹ ತುಂಗ ಸಾಲಿಗ್ರಾಮ ಇವರಲ್ಲಿ ಕಳೆಯುತ್ತಿದ್ದಾರೆ.

ಬಾಲ್ಯದಲ್ಲಿ ಶ್ರೀ ಕೃಷ್ಣ ವೇಷ ಸ್ಪಧೆ೯ಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಗರಿಮೆ ಇವರದ್ದು. ತನ್ನ ನೃತ್ಯ ತಂಡದೊಂದಿಗೆ ಹಲವಾರು ಕಡೆಗಳಲ್ಲಿ ನೃತ್ಯ ಪ್ರದಶ೯ನವನ್ನು ನೀಡಿ ಜನರ ಮನಸ್ಸನ್ನು ಗೆದ್ದು ತನ್ನದೆ ಅಭಿಮಾನಿ ಬಳಗವನ್ನು ಹೊಂದಿರುವ ಇವರು ಜಿಲ್ಲಾ ಮಟ್ಟ ಮಾತ್ರವಲ್ಲದೆ ರಾಜ್ಯ ಮಟ್ಟದಲ್ಲು ಬಹುಮಾನವನ್ನು ಗಳಿಸಿದ ಕೀತಿ೯ ಇವರದು.

2018 -19 ರಲ್ಲಿ ಡೖೆಜಿ ವಲ್ಡ್ ಚಾನೇಲ್ ನಲ್ಲಿ ನಡೆದ ಜೂನಿಯರ್ ಮಸ್ತೀ ಸೀಜನ್ ೨ ನಲ್ಲಿ ಸೆಮಿ ಪೆೃನಲ್ ವರೆಗೆ ತಲುಪಿ. ಉತ್ತಮ ನೃತ್ಯ ಎಕ್ಸ್ ಪ್ರೇಶನ್ ನೀಡಿ ತೀಪು೯ಗಾರರ ಮೆಚ್ಚುಗೆ ಗಳಿಸಿದ್ದಾರೆ. ದೈಜಿ ವಲ್ಡ್೯ ಚಾನೆಲ್ ಗ್ರಾಂಡ್ ಫಿನಾಲೆಯಲ್ಲಿ “QUEEN OF DANCE JUNIOR MASTI SESON 2 “ಎಂಬ ಬಿರುದು ನೀಡಿ ಗೌರವಿಸಿದ್ದಾರೆ.

ಸ್ಪಂದನ ಟಿವಿಯಲ್ಲಿ ನಡೆಯುತ್ತಿದ್ದ ‘Coffee time with sony’ ಯಲ್ಲಿ ಭಾಗವಹಿಸಿದ್ದಾರೆ ಬೇರೆ ರಾಜ್ಯಗಳಲ್ಲಿ ತನ್ನ ತಂಡದೊಂದಿಗೆ ನೃತ್ಯ ಪ್ರದಶ೯ವನ್ನು ನೀಡಿರುತ್ತಾರೆ.

ಇತೀಚಿಗೆ ಬಿಡುಗಡೆಯಾದ ನಿವಿುಷ ಕಲಾವಿದರು ಕಟಪಾಡಿ ಇವರ ಪ್ರಸ್ತುತ ಪಡಿಸಿದ ಮೊದಲ ‘ Me and She’ musical ಆಲ್ಬಂನಲ್ಲಿ ನಟಿಸಿ ಸಮ್ಮಾನಕ್ಕೆ ಪಾತ್ರರಾಗಿದ್ದಾರೆ.

ಈ ಬಾಲ ಪ್ರತಿಭೆ ಇನ್ನಷ್ಟು ಉತ್ತುಂಗಕ್ಕೆರಲು ಕಲಾ ಮಾತೆಯ ಕೃಪೆ , ತಂದೆ ತಾಯಿಯ ಆಶಿರ್ವಾದ ಸದಾ ಇರಲಿ .

Credits: ಲಾವಣ್ಯ ಪೂಜಾರಿ ಸುಂಕದಕಟ್ಟೆ


Share:

More Posts

Category

Send Us A Message

Related Posts

ಗೆಜ್ಜೆಗಿರಿ ನೂತನ ಪಧಾಧಿಕಾರಿಗಳ ಪದಗ್ರಹಣ


Share       ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿಯ ನೂತನ ಅಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ ಇವರ ನೇತೃತ್ವದ ಪಧಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಜರಗಿತು. ನೂತನ ಪಧಾಧಿಕಾರಿಗಳನ್ನು


Read More »

ನಾರಾಯಣ ಗುರುಗಳ ಗುಣಗಾನ ಮಾಡಿದ ಪೋಪ್! ವ್ಯಾಟಿಕನ್ ಸಿಟಿಯಲ್ಲಿ ಕ್ರೈಸ್ತ ಪರಮೋಚ್ಛ ಗುರುವಿನಿಂದಲೇ ‘ಬ್ರಹ್ಮಶ್ರೀ’ಗೆ’ನಮನ!


Share       బ్ర ಹ್ಮ ಶ್ರೀ ನಾರಾಯಣ ಗುರುಗಳ (Brahma Shree Narayana Guru) ಪ್ರಸ್ತುತ ಜಗತ್ತಿನಲ್ಲಿ ಬಹಳ ಪ್ರಸ್ತುತವಾಗಿವೆ ಎಂದು ಪೋಪ್‌ ಫ್ರಾನ್ಸಿಸ್ (Pope Francis) ಹೇಳಿದರು. ಪ್ರತಿಯೊಬ್ಬ ಮಾನವರೂ ಒಂದೇ ಕುಟುಂಬ ಎಂದು


Read More »

ನಗರ ಪಾಲಿಕೆ ಪ್ರತಿಪಕ್ಷದ ನಾಯಕರಾಗಿ ಅನಿಲ್ ಕುಮಾರ್ ಆಯ್ಕೆ


Share       ಮಂಗಳೂರು ಮಹಾನಗರ ಪಾಲಿಕೆಯ ಪ್ರತಿಪಕ್ಷದ ನಾಯಕರಾಗಿ ನೂತನವಾಗಿ ಆಯ್ಕೆಯಾದ ಜನಪರ ನಿಲುವಿನ ರಾಜಕೀಯ ನಾಯಕ, ಬ್ರಹ್ಮ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನೆಯ ಪ್ರತಿಪಾದಕ, ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ


Read More »

ವಿಟ್ಲ :ಯುವವಾಹಿನಿ (ರಿ.)ವಿಟ್ಲ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ :ಅಧ್ಯಕ್ಷರಾಗಿ ಹರೀಶ್ ಪೂಜಾರಿ ಮರುವಾಳ


Share       ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯುವವಾಹಿನಿ (ರಿ.) ವಿಟ್ಲ ಘಟಕದ 2024 /25 ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆಯು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ವಿಟ್ಲದಲ್ಲಿ ನಡೆಯಿತು. ಅಧ್ಯಕ್ಷರಾಗಿ ಹರೀಶ್ ಪೂಜಾರಿ


Read More »

ಕೇರಳದ ಕಾಸರಗೋಡಿನ ಬಿರುವೆರ್ ಕುಡ್ಲ (ರಿ)ಮಂಜೇಶ್ವರ ತಾಲೂಕು ತಂಡದ ವತಿಯಿಂದ 6 ನೆಯ ಸೇವಾಯೋಜನೆ


Share       ತುಳುನಾಡಿನ ಹಲವಾರು ಬಡಕುಟುಂಬಗಳ ಕಣ್ಣೀರೊರಸಿ ಅವರ ನೇರವಿಗೆ ಕಾರಣವಾದ ಬಲಿಷ್ಠ ಹಾಗೂ ಪ್ರಸಿದ್ದಿ ಪಡೆದ ಸಂಘಟನೆ ಫ್ರೆಂಡ್ಸ್ ಬಲ್ಲಾಳ್ಬಾಗ್  ಬಿರುವೆರ್ ಕುಡ್ಲ ಇದರ ಸ್ಥಾಪಕಾಧ್ಯಕ್ಷರಾದ  ಶ್ರೀಯುತ ಉದಯ ಪೂಜಾರಿಯವರ ವ್ಯಕ್ತಿತ್ವ, ಮನುಷ್ಯತ್ವ ಹಾಗೂ


Read More »

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾಗಿ ರವಿ ಪೂಜಾರಿ ಚಿಲಿಂಬಿ ಸರ್ವಾನುಮತದಿಂದ ಆಯ್ಕೆ


Share       ತುಳುನಾಡಿನ ಧಾರ್ಮಿಕ ಪರಂಪರೆಯಲ್ಲೇ ಹೊಸ ಇತಿಹಾಸವನ್ನು ಸೃಷ್ಟಿಸಿದ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾಗಿ ರವಿ ಪೂಜಾರಿ ಚಿಲಿಂಬಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.   ನಾಡಿನ


Read More »