TOP STORIES:

ಹಿಂದೂ ದೇವಾಲಯಗಳ ಹಣ ಅನ್ಯ ಧಾರ್ಮಿಕ ಕೇಂದ್ರಗಳಿಗೆ ಬಳಕೆ. ತಡೆಹಿಡಿಯಲು ಸಚಿವ ಕೋಟ ಶ್ರೀ ನಿವಾಸ್ ಪೂಜಾರಿ ಆದೇಶ.


ಪ್ರಕಟಣೆ ಮತ್ತು ಪ್ರಸಾರದ ಕೃಪೆಗಾಗಿ.

ಹಿಂದೂ ದೇವಾಲಯಗಳ ಹಣ ಅನ್ಯ ಧಾರ್ಮಿಕ ಕೇಂದ್ರಗಳಿಗೆ ಬಳಕೆ. ತಡೆಹಿಡಿಯಲು ಸಚಿವ ಕೋಟ ಆದೇಶ.

ಇತ್ತೀಚೆಗೆ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವಂತೆ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತುಧರ್ಮಾದಾಯ ದತ್ತಿ ಇಲಾಖೆಯಲ್ಲಿನ ಅನುದಾನ ಇತರ ಧರ್ಮದ ಪ್ರಾರ್ಥನಾ ಮಂದಿರಗಳಿಗೆ ತಸ್ತೀಕ್ ರೂಪದಲ್ಲಿ ತಲುಪಿದ್ದು, ಬಗ್ಗೆ ಹಿಂದೂ ಧಾರ್ಮಿಕ ಮುಖಂಡರಿಂದ ಬಂದ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ, ರಾಜ್ಯ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯದತ್ತಿ ಇಲಾಖೆ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಮಾಧ್ಯಮದ ಮೂಲಕ ಹೇಳಿಕೆಯೊಂದನ್ನು ನೀಡಿದ್ದು, ರಾಜ್ಯದಲ್ಲಿನಮ್ಮ ಸರಕಾರ ಬರುವ ಮುಂಚೆ ಇಲಾಖೆಯ ಮೂಲಕ ಮಂಜೂರಾಗುತ್ತಿರುವ ತಸ್ತೀಕ್ ಹಣ ಅನ್ಯ ಧರ್ಮೀಯ ಪ್ರಾರ್ಥನಾಮಂದಿರಗಳಿಗೆ ಕೂಡ  ಬಿಡುಗಡೆ ಮಾಡುತ್ತಿರುವ ಬಗ್ಗೆ ಮಾಹಿತಿ ಒದಗಿದ್ದು, ತಕ್ಷಣ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತುಧರ್ಮದಾಯ ದತ್ತಿ ಇಲಾಖೆಯ ಮೂಲಕ ಹಿಂದೂ ಧರ್ಮವನ್ನು ಹೊರತುಪಡಿಸಿ ಅನ್ಯ ಉದ್ದೇಶಗಳಿಗೆ ಬಳಸುತ್ತಿರುವುದನ್ನುತಡೆಹಿಡಿಯಲು ಸೂಚಿಸಿದ್ದಾರೆ. ಇತರೆ ಯಾವುದೇ ಧರ್ಮದ ಧಾರ್ಮಿಕ ಕೇಂದ್ರಗಳಿಗೆ ಹಣದ ಅವಶ್ಯಕತೆಯಿದ್ದಲ್ಲಿ, ಆಯಾಯಇಲಾಖೆಯ ಜವಾಬ್ದಾರಿ ಹಾಗೂ ಆಯಾ ಇಲಾಖೆಯ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದವರುತಿಳಿಸಿದ್ದಾರೆ.

ರಾಜ್ಯದಲ್ಲಿ 27ಸಾವಿರಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳಿಗೆ ತಸ್ತೀಕ್ ನೀಡಲಾಗುತ್ತಿದ್ದು, ಸುಮಾರು 133 ಕೋಟಿ ರೂಪಾಯಿಸರಕಾರ ವಾರ್ಷಿಕ ಅನುದಾನ  ಹಂಚುತ್ತಿದೆ. ಪೈಕಿ ಸುಮಾರು 764 ಅನ್ಯ ಧರ್ಮೀಯ ಪ್ರಾರ್ಥನಾ ಮಂದಿರಗಳು ಇಲಾಖೆಯಿಂದತಸ್ತೀಕ್ ಪಡೆಯುತ್ತಿದ್ದು, ಮಂತ್ರಿಗಳ ಸೂಚನೆ ಮೇರೆಗೆ ಅನ್ಯ ಧರ್ಮೀಯ ಪ್ರಾರ್ಥನಾ ಮಂದಿರಗಳಿಗೆ ಹಣ ಬಿಡುಗಡೆಮಾಡುವುದನ್ನು ನಿಲ್ಲಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯಆಯುಕ್ತರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಕಟಣೆ:

ಸಚಿವರ ಕಚೇರಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,

ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿ ಇಲಾಖೆ.


Related Posts

ಬಿಲ್ಲವಾಸ್ ಕತಾರ್ ನ ಸ್ವರ ಲಹರಿಗೆ ಸ್ವರ ಸೇರಿಸಿ ಕುಣಿದು ಕುಪ್ಪಳಿಸಿದ ಜನಸ್ತೋಮ


Share        ಬಿಲ್ಲವಾಸ್ ಕತಾರ್  ಆಯೋಜಿಸಿದ  ಸ್ವರ ಲಹರಿ, ಸಂಗೀತ ಸಂಜೆ ಕಾರ್ಯಕ್ರಮ  ದಿನಾಂಕ  ಮೇ 30, 2025 ರಂದು ಡಿ.ಪಿ.ಎಸ್. ಎಂ.ಐ.ಎಸ್ ಅಲ್ ವಕ್ರ   ಸಭಾಂಗಣದಲ್ಲಿ ನವ ಇತಿಹಾಸವನ್ನು ಸೃಷ್ಟಿಸಿತು.  ಅದ್ಭುತ ಸಂಗೀತ


Read More »

ಬಿಕ್ಕಳಿಕೆ ಬಂದಾಗ ಈ ಸರಳ ಟೆಕ್ನಿಕ್ ಟ್ರೈ ಮಾಡಿ ನೋಡಿ, ತಕ್ಷಣ ಕಡಿಮೆಯಾಗುತ್ತೆ


Share        ಬಿಕ್ಕಳಿಕೆ ಯಾರಿಗೆ ಬರಲ್ಲ ಹೇಳಿ? ಅದರಲ್ಲಿಯೂ ಈ ಬಿಕ್ಕಳಿಕೆ ಯಾರನ್ನೂ ಹೇಳಿ, ಕೇಳಿ ಬರುವಂತದ್ದಲ್ಲ. ಆದರೆ ಅವು ಬಂದಾಗ ಎಲ್ಲರ ಮುಂದೆ ಮುಜುಗರ ಆಗುವುದು ಮಾತ್ರ ತಪ್ಪುವುದಿಲ್ಲ. ಏಕೆಂದರೆ ಇದು ಯಾವಾಗ ಬೇಕಾದರೂ


Read More »

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಗೆಜೆಟೆಡ್ ಅಧಿಕಾರಿಯಾಗಿ ಆಯ್ಕೆಯಾದ ಸುದೀಪ್ ರಾಜ್ ಮನೆಗೆ ಸೌದಿ ಬಿಲ್ಲಾವಾಸ್ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಭೇಟಿ


Share        ಮಂಗಳೂರು: ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಲಾದ ಪರೀಕ್ಷೆಯಲ್ಲಿ ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಆಯ್ಕೆಯಾದ ಮಂಗಳೂರಿನ ಚಿಲಿಂಬಿ ಆದರ್ಶನಗರದ ಸುದೀಪ್ ರಾಜ್ ಅವರ ಮನೆಗೆ ತೆರಳಿ ಸೌದಿ ಬಿಲ್ಲಾವಾಸ್


Read More »

UPSC ನಡೆಸಲಾದ ಪರೀಕ್ಷೆಯಲ್ಲಿ. ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಸುದೀಪ್ ರಾಜ್ ಆಯ್ಕೆ


Share        ಕೇಂದ್ರ ಲೋಕಸೇವಾ ಆಯೋಗ (UPSC), ಮೇ 23, 2025 ರಂದು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (II), 2024 ರ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ನಮ್ಮ ಬಿಲ್ಲವ


Read More »

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share        ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share        ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »