ಇತ್ತೀಚೆಗೆ ಕೆಲವು ದಿನಗಳಿಂದ ಅಡ್ಯಾರ್ ಕಟ್ಟೆಯಿಂದ ಕಣ್ಣೂರು ಮಸೀದಿ ವರೆಗಿನ ಹೆದ್ದಾರಿ ಬದಿಯಲ್ಲಿ ಕೊಳೆತು ನಾರುವ ಕಸದರಾಶಿಯನ್ನು ನೋಡಿ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಕಾರಿನಲ್ಲಿ ಮತ್ತು ರಿಕ್ಷಾದಲ್ಲಿ ಬರುವ ಹಲವರುಬೆಳಿಗ್ಗೆ ಕಸದ ಚೀಲಗಳನ್ನು ಇಲ್ಲಿ ಎಸೆದು ಹೋಗುತ್ತಿದ್ದರು. ಈ ಬಗ್ಗೆ ಸರ್ಕಾರದವರಾಗಲೀ ಸಂಬಂಧಿಸಿದ ಪಂಚಾಯತ್ ನವರಾಗಲೀಸ್ವಲ್ಪವೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಆದರೆ ಇತ್ತೀಚೆಗೆ ಕೆಲವು ದಿನಗಳಿಂದ ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಬಜಾಲ್ ನ ನಾಗರಾಜ್ ಎಂಬವರು ತಾನುಏನಾದರೂ ಮಾಡಬೇಕೆಂಬ ಛಲದಿಂದ ಪ್ರತಿದಿನ ಬೆಳಿಗ್ಗೆ ಕೈಯಲ್ಲಿ ಒಂದು ಬೋರ್ಡ್ ಹಿಡಿದು ಕೊಂಡು, ‘ *ರಸ್ತೆ ಬದಿ ಕಸಎಸೆಯಬೇಡಿ ‘* , ಹತ್ತಿರದಲ್ಲೇ ನೇತ್ರಾವತಿ ನದಿ ಇದೆ. ಈ ಕಸ ನೀರಿನೊಂದಿಗೆ ನದಿ ಸೇರಿ ನೀರು ಕಲುಷಿತಗೊಳ್ಳುತ್ತಿದೆ.. ಎಂಬಫಲಕವನ್ನು ಹಿಡಿದು , ಕಸ ಎಸೆಯುವ ಅನಾಗರಿಕರಿಗೆ ಪಾಠ ಬೋಧನೆ ಮಾಡುತ್ತಿದ್ದಾರೆ. ಇದರಿಂದ ಕೆಲವು ದಿನಗಳಿಂದ ಕಸಬೀಳುವುದು ಕಡಿಮೆ ಆಗಿದೆ. ಪರಿಸರದ ಬಗೆಗಿನ ಇವರ ಕಾಳಜಿ, ಸಮಾಜ ಸೇವೆಯ ಕುರಿತು ಕಳಕಳಿ ನಿಜಕ್ಕೂ ಅಭಿನಂದನೀಯ. ಅಡ್ಯಾರ್ ಮಾಧವ ನಾಯ್ಕ್ ಹಾಗೂ ಶೇಖರ್ ಶೆಟ್ಟಿಯವರು ಈ ಸಂದರ್ಭದಲ್ಲಿ ಅವರನ್ನು ಮಾತನಾಡಿಸಿ ಅಭಿನಂದಿಸಿದ್ದಾರೆ.
ಶ್ರೀಯುತ ನಾಗರಾಜ್ ಬಜಾಲ್ ಇವರ ಸೇವಾ ಕಾರ್ಯಕ್ಕೆ ನಾವೂ ಭೇಷ್ ಎನ್ನೋಣವೇ ..?