TOP STORIES:

FOLLOW US

ಅಕ್ಟೋಬರ್ 7 ರಿಂದ ’ಮಂಗಳೂರು ದಸರಾ’, ಭರದ ಸಿದ್ಧತೆಯಲ್ಲಿ ಕುದ್ರೋಳಿ ಕ್ಷೇತ್ರ


ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವವನ್ನು ಸರಕಾರದ ಮಾರ್ಗಸೂಚಿಯಂತೆ ಸಾಂಪ್ರದಾಯಿಕವಾಗಿ ನಡೆಸಲು ನಿರ್ಧರಿಸಲಾಗಿದ್ದು, ಇದಕ್ಕೆ ಪೂರಕ ಸಿದ್ಧತೆಗಳು ನಡೆಯುತ್ತಿದೆ ಎಂದು ದೇವಸ್ಥಾನದ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ ತಿಳಿಸಿದ್ದಾರೆ.

ದಸರಾ ಮಹೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅ.7 ರಿಂದ ಅ.16ರವರೆಗೆ ಮಂಗಳೂರು ದಸರಾ ಮಹೋತ್ಸವ ನಡೆಯಲಿದೆ. ಈ ಬಾರಿಯ ಮಹೋತ್ಸವವೂ ಯಶಸ್ವಿಯಾಗಿ ನಡೆಯಬೇಕಾದರೆ ಸಂಘಸಂಸ್ಥೆಗಳು, ಭಕ್ತಾದಿಗಳು ಸರ್ವರ ಸಹಕಾರ ಪ್ರಮುಖವಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ನಗರದ ರಾಜಬೀದಿಗಳು ವಿದ್ಯುದ್ದೀಪಗಳಿಂದ ಕಂಗೊಳಿಸಲಿವೆ ಎಂದರು.

ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ ಮಾತನಾಡಿ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಆಶಯದಂತೆ ಮಂಗಳೂರ ದಸರಾ ಮಹೋತ್ಸವ ನಡೆಯಲಿದ್ದು, ಇದು ಯಶಸ್ವಿಯಾಗಿ ನಡೆಯಬೇಕಾದರೆ ಎಲ್ಲ ಸಂಘ-ಸಂಸ್ಥೆಗಳು, ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದರು.

ಕಳೆದ ಬಾರಿಯೂ ‘ನಮ್ಮ ದಸರಾ-ನಮ್ಮ ಸುರಕ್ಷೆ’ ಚಿಂತನೆಯೊಂದಿಗೆ ಯಶಸ್ವಿಯಾಗಿ ನಡೆಸಲಾಗಿದೆ. ದಸರಾ ಮಹೋತ್ಸವದ ದರ್ಬಾರು ಮಂಟಪ, ಮೂರ್ತಿ ರಚನೆ ಕಾರ್ಯ ನಡೆಯುತ್ತಿದೆ. ಕಳೆದ ಬಾರಿಯೂ ಮಂಗಳೂರು ದಸರಾ ಮಹೋತ್ಸವ ಮೂಲಕ ಕರಾವಳಿಯ ಆರ್ಥಿಕ ಚೈತನ್ಯಕ್ಕೆ ಪುನಶ್ಚೇತನ ಸಿಕ್ಕಂತಾಗಿದೆ. ಇದಕ್ಕೆ ಗೋಕರ್ಣನಾಥ, ಶಾರದೆ, ನವದುರ್ಗೆಯರ ಅನುಗ್ರಹ ಕಾರಣ. ಎಲ್ಲರ ಸಹಕಾರದೊಂದಿಗೆ ಈ ಬಾರಿಯೂ ಉತ್ಸವ ಯಶಸ್ವಿಯಾಗಿ ನಡೆಯಲಿದೆ.
– ಪದ್ಮರಾಜ್ ಆರ್., ಕೋಶಾಧಿಕಾರಿ ಕುದ್ರೋಳಿ ಕ್ಷೇತ್ರ ತಿಳಿಸಿದರು.

ಸಭೆಯಲ್ಲಿ ಕುದ್ರೋಳಿ ದೇವಸ್ಥಾನದ ಉಪಾಧ್ಯಕ್ಷರಾದ ಉರ್ಮಿಳಾ ರಮೇಶ್ ಕುಮಾರ್, ಟ್ರಸ್ಟಿಗಳಾದ ರವಿಶಂಕರ್ ಮಿಜಾರು, ಜಗದೀಶ್ ಡಿ. ಸುವರ್ಣ, ಶೇಖರ್ ಪೂಜಾರಿ, ಕುದ್ರೋಳಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷರಾದ ಡಾ. ಅನಸೂಯ, ಡಾ.ಬಿ.ಜಿ. ಸುವರ್ಣ, ಸದಸ್ಯರಾದ ಹರಿಕೃಷ್ಣ ಬಂಟ್ವಾಳ್, ರಾಧಾಕೃಷ್ಣ ಕೆ., ಶೈಲೇಂದ್ರ ಸುವರ್ಣ, ಚಿತ್ತರಂಜನ್ ಗರೋಡಿ, ಸೂರ್ಯ ಜಯ ಸಿ. ಸುವರ್ಣ,  ಜಯರಾಜ್ ಹೆಚ್ ಎಸ್, ಚಂದ್ರಹಾಸ್, ವೇದಕುಮಾರ್ ಬೆಂಗಳೂರು, ಲೀಲಾಕ್ಷ ಕರ್ಕೇರಾ ಉಪಸ್ಥಿತರಿದ್ದರು.

Subscribe our channel: https://www.youtube.com/c/BillavasWarriors


Share:

More Posts

Category

Send Us A Message

Related Posts

ಬಿಲ್ಲವಾಸ್ ಕತಾರ್ ಸಂಘದ ವತಿಯಿಂದ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


Share       ಬಿಲ್ಲವಾಸ್ ಕತಾರ್ ಸಂಘದ ವತಿಯಿಂದ ಸಂಘದ ನೂತನ ಅಧ್ಯಕ್ಷರಾದ ಶ್ರೀಮತಿ ಅಪರ್ಣ ಶರತ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 26.02.2025 ರಂದು ಕತಾರ್ ನ ಐ. ಸಿ. ಸಿ. ಮುಂಬೈ ಹಾಲ್ ನಲ್ಲಿ  ಶ್ರೀ


Read More »

ಸೌದಿ ಬಿಲ್ಲವಾಸ್ ದಮ್ಮಾಮ್ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


Share       ದಮ್ಮಾಮ್: ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾರ್ಚ್ 1ರಿಂದ ಮಾರ್ಚ್ 5 ರವರೆಗೆ ಜರಗುವ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಸೌದಿ ಬಿಲ್ಲವಾಸ್ ದಮ್ಮಾಮ್ ವತಿಯಿಂದ ಸೌದಿಯ


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಮಹೋತ್ಸವಕ್ಕೆ ಚಾಲನೆ


Share       ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಫೆ.21ರಿಂದ 28ರವರೆಗೆ ಜರುಗುವ ವಾರ್ಷಿಕ ಮಹೋತ್ಸವ ಮತ್ತು ಮಹಾ ಶಿವರಾತ್ರಿ ಮಹೋತ್ಸವಕ್ಕೆ ಶುಕ್ರವಾರ ಧ್ವಜಾರೋಹಣ ನೆರವೇರುವ ಮೂಲಕ ಚಾಲನೆ ನೀಡಲಾಯಿತು. ಶುಕ್ರವಾರ ಗುರು ಪ್ರಾರ್ಥನೆ, ಪುಣ್ಯಾಹ ಹೋಮ,


Read More »

ಬಿಲ್ಲವ ಸಮಾಜ ಸೇವಾ ಸಂಘ ಪುಣೆ  ಆಶ್ರಯದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆಯಲಿದೆ “ವಿಶ್ವ ಬಿಲ್ಲವ ಕ್ರಿಕೆಟ್” ಪಂದ್ಯಾಟದ


Share       ಪುಣೆ : ಫೆ.19,ಬಿಲ್ಲವ ಸಮಾಜ ಸೇವಾ ಸಂಘ (ರಿ) ಪುಣೆ ಇದರ  ಆಶ್ರಯದಲ್ಲಿ ಮುಂಬರುವ ಎಪ್ರಿಲ್ ತಿಂಗಳಲ್ಲಿ ನಡೆಯಲಿರುವವಿಶ್ವ ಬಿಲ್ಲವ ಕ್ರಿಕೆಟ್ಪಂದ್ಯಾಟದ  ತಯಾರಿಯ ಬಗ್ಗೆ  ಎರಡನೇ ಪೂರ್ವಭಾವಿ ಸಭೆಯು ಇಂದು ಫೆ. 19ನೇ


Read More »

ಬಿಲ್ಲವಾಸ್ ಕತಾರ್ ನ ಅಧ್ಯಕ್ಷ ಶ್ರೀ ಸಂದೀಪ್ ಸಾಲಿಯಾನ್ ರವರಿಗೆ ವಿನಯಪೂರ್ವಕ ಬೀಳ್ಕೊಡುಗೆ


Share       ಬಿಲ್ಲವಾಸ್ ಕತಾರ್ ನ ನೇತೃತ್ವದಲ್ಲಿ ದಿನಾಂಕ ೮.೨.೨೦೨೫ ರಂದು ಎಂ. ಆರ್. ಎ, ಸಲ್ವ ರೋಡ್, ಕತಾರ್, ಔತಣಕೂಟ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಬಿಲ್ಲವಾಸ್ ಕತಾರ್ ನ ಅಧ್ಯಕ್ಷರಾದ ಶ್ರೀ ಸಂದೀಪ್


Read More »

ರಾಷ್ಟ್ರಮಟ್ಟದ ಪ್ರಶಸ್ತಿ ಸ್ವೀಕರಿಸಿದ ತುಳುನಾಡಿನ ಹೆಮ್ಮೆಯ ಸಾಹಿತಿ ಪ್ರಮೀಳ ದೀಪಕ್ ಪೆರ್ಮುದೆ


Share       ಮಂಗಳೂರು: ರಾಷ್ಟ್ರಮಟ್ಟದ ಪ್ರಶಸ್ತಿ ಸ್ವೀಕರಿಸಿದ ತುಳುನಾಡಿನ ಹೆಮ್ಮೆಯ ಸಾಹಿತಿ ಪ್ರಮೀಳ ದೀಪಕ್ ಪೆರ್ಮುದೆ. MRPL ಸಂಸ್ಥೆಯ ಉದ್ಯೋಗಿ ಆಗಿರುವ ಪ್ರಮೀಳ ದೀಪಕ್ ಪೆರ್ಮುದೆ ಇವರಿಗೆ ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಪರಿಕಲ್ಪನೆಯಡಿ “ Woman


Read More »