TOP STORIES:

ಬಿಲ್ಲವಾಸ್ ಕತಾರ್ ನ ಅಧ್ಯಕ್ಷ ಶ್ರೀ ಸಂದೀಪ್ ಸಾಲಿಯಾನ್ ರವರಿಗೆ ವಿನಯಪೂರ್ವಕ ಬೀಳ್ಕೊಡುಗೆ


ಬಿಲ್ಲವಾಸ್ ಕತಾರ್ ನ ನೇತೃತ್ವದಲ್ಲಿ ದಿನಾಂಕ ೮.೨.೨೦೨೫ ರಂದು ಎಂ. ಆರ್. ಎ, ಸಲ್ವ ರೋಡ್, ಕತಾರ್, ಔತಣಕೂಟ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಬಿಲ್ಲವಾಸ್ ಕತಾರ್ ನ ಅಧ್ಯಕ್ಷರಾದ ಶ್ರೀ ಸಂದೀಪ್ ಸಾಲಿಯಾನ್ ಅವರನ್ನು ವಿನಯಪೂರ್ವಕವಾಗಿ ಬೀಳ್ಕೊಡಲಾಯಿತು.

ಈ ಬೀಳ್ಕೊಡುಗೆ ಸಮಾರಂಭದ ಆರಂಭವನ್ನು ಬಿಲ್ಲವಾಸ್ ಕತಾರ್ ನ ಸಾಂಸ್ಕ್ರತಿಕ   ಕಾರ್ಯದರ್ಶಿ ಪೂಜಾ ಜಿತಿನ್ ಮಾಡಿದರು.  ಸ್ವಾಗತ ಭಾಷಣವನ್ನು ಸಂಘದ ಉಪಾಧ್ಯಕ್ಷೆ ಶ್ರೀಮತಿ ಅಪರ್ಣ ಶರತ್ ಅವರು ಮಾಡಿದರು.

ಸರಳ ಸಜ್ಜನಿಕೆಯ, ನಿರಾಡಂಬರ, ಮೃದು ಸ್ವಭಾವದ ಶ್ರೀ ಸಂದೀಪ್ ಸಾಲಿಯಾನ್  ಅವರ ಕತಾರ್ ನ ಜೀವನ ಚರಿತ್ರೆಯನ್ನು ಬಿಲ್ಲವಾಸ್ ಕತಾರ್ ನ ಸಾಂಸ್ಕ್ರತಿಕ ಸಮಿತಿಯ ಸದಸ್ಯರು ಕಿರು ನಾಟಕದ ರೂಪದಲ್ಲಿ  ವಹಿಸಿ ಕೊಟ್ಟು ಎಲ್ಲರ ಮನ ಸೂರೆಗೊಂಡರು.

ಬೀಳ್ಕೊಡುಗೆಯ ಸಂದರ್ಭದಲ್ಲಿ ಹಾಜರಿದ್ದ  ಐ. ಸಿ. ಸಿ. ಕತಾರ್ ನ ಉಪಾಧ್ಯಕ್ಷರಾದ ಶ್ರೀಸುಬ್ರಹ್ಮಣ್ಯ

ಹೆಬ್ಬಾಗಿಲು, ಬಿಲ್ಲವಾಸ್ ಕತಾರ್ ನ ಮಾಜಿ ಅಧ್ಯಕ್ಷರಾದ ಶ್ರೀ ರಘುನಾಥ್ ಅಂಚನ್,  ಸಲಹಾ ಮಂಡಳಿ, ಕಾರ್ಯಕಾರಿ ಮಂಡಳಿ  ಮತ್ತು ಸದಸ್ಯರು ಶ್ರೀ ಸಂದೀಪ್ ಸಾಲಿಯಾನ್ ರವರ ಗುಣಗಾನ ಮಾಡಿ, ಬಿಲ್ಲವ ರಥವನ್ನು ಉತ್ತಮ ಪಥದಲ್ಲಿ ಮುನ್ನಡೆಸಿದ ಯಶಸ್ವೀ ನಾಯಕ ಎಂದು ಹೊಗಳಿದರು. ಬಿಲ್ಲವಾಸ್ ಕತಾರ್ ನ ಮಾಜಿ ಉಪಾಧ್ಯಕ್ಷ ಶ್ರೀ ಅಮಿತ್ ಅವರ ವಿಶೇಷ ಉಪಸ್ಥಿತಿ ಕಾರ್ಯಕ್ರ್ರಮಕ್ಕೊಂದು ಮೆರಗು ಕೊಟ್ಟಿತ್ತು.

ಬೀಳ್ಕೊಡುಗೆಗೆ  ಉತ್ತರಿಸುತ್ತಾ ಶ್ರೀ ಸಾಲಿಯಾನ್ ರವರು ಉದ್ಯೋಗದ ನಿಮಿತ್ತ ಹತ್ತಿರದ ಕೊಲ್ಲಿ ರಾಷ್ಟ್ರಕ್ಕೆ  ವರ್ಗಾವಣೆ ಹೊಂದಬೇಕಾದ ಅನಿವಾರ್ಯತೆಯನ್ನು ವ್ಯಕ್ತ ಪಡಿಸಿ ತನಗೆ ಸಹಕರಿಸಿದ ಎಲ್ಲಾ ಮಹನೀಯರನ್ನು ಹೃತ್ಪೂರ್ವಕವಾಗಿ ನೆನಪಿನಂಗಳದಿಂದಿಳಿಸಿ ಅಭಿನಂದಿಸಿದರು.   


Related Posts

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »