TOP STORIES:

ಅರ್ಹ ಮಗುವಿಗೆ ಗುರುಬೆಳದಿಂಗಳು(ರಿ) ಕುದ್ರೋಳಿ ಮೂಲಕ ಶ್ರವಣ ಯಂತ್ರ ಕೊಡುಗೆ


ಸತೀಶ್ ಪೂಜಾರಿ ಬೆಳಪು, ದುಬೈ ಪಿತೃಶ್ರೀ ದಿ|ಸೂರು ಪೂಜಾರಿ ಪುಣ್ಯತಿಥಿ ಸ್ಮರಣಾರ್ಥ ಸಮಾಜಮುಖಿ ಕೊಡುಗೆ

ಸುಂದರ ಜೀವನ, ಜೀವನಕ್ಕಾಗಿ ದಾರಿ, ದಾರಿಗಾಗಿ ಕನಸು, ಕನಸಿಗಾಗಿ ಬದುಕು. ಎಲ್ಲವನ್ನು ರೂಪಿಸುವುದು ನಮ್ಮ ದೇಹ, ದೇಹದ ಪ್ರತಿಯೊಂದು ಅಂಗಗಳು , ಜ್ಞಾನೇಂದ್ರಿಯಗಳು ನಮ್ಮ ಜೀವನವನ್ನು ರೂಪಿಸುವ ಅಂಶವಾಗಿದೆ. ನೋವು, ಕಷ್ಟಗಳು ನಮ್ಮ ಜೀವಕ್ಕೆ ಮತ್ತು ಜೀವನಕ್ಕೆ ಯಾವ ಸಂದರ್ಭದಲ್ಲಿಯೂ, ಯಾವ ರೂಪದಲ್ಲಿಯೂ ಬರಬಹುದು. ಅದನ್ನು ನಿರ್ಣಯಿಸುವುದು ಸಮಯ. ಅದಕ್ಕೆ ವಯಸ್ಸಿನ ಅಂತರವಿಲ್ಲ ಜಾತಿಯ ಬೇಧವಿಲ್ಲ.

ಅಂಗಗಳ ನ್ಯೂನ್ಯತೆ ಬಂದಾಗ ಹತ್ತಿರದವರು ದೂರವಾಗುವುದು ಸಹಜ ಮತ್ತು ಅದನ್ನು ಸರಿಪಡಿಸುವುದು ಕಠಿಣ. ಈ ರೀತಿ ಸಮಸ್ಯೆಯೊಂದಿಗೆ ಮೂಲ್ಕಿಯ ಒಂದು ಪುಟ್ಟ ದ್ವೀಪದಲ್ಲಿ ಹುಟ್ಟಿದ ಮಗು ಶೌರ್ಯ. ಸುಂದರ ಮುಖ, ಮುಖದಲ್ಲಿ ನಿಷ್ಕಲ್ಮಶ ನಗು ಮತ್ತು ಶ್ರವಣ ಸಮಸ್ಯೆ. ಹುಟ್ಟಿದ ಮಗುವಿಗೆ ತನ್ನ ಒಂದು ವರ್ಷದ ಜೀವನದಲ್ಲಿ ಸಿಕ್ಕಿದ್ದು ಬಡತನ, ಕಂಡಿದ್ದು ತಂದೆಯ ಮರಣ, ತಾಯಿಯ ದುಃಖ ಕೇಳಿದ್ದು ಶೂನ್ಯ. ತಾಯಿ ಆಸ್ಪತ್ರೆಗೆ ಹೋದಾಗ ವೈದ್ಯರು ನೀಡಿದ್ದು 54000 ರೂ. ವೆಚ್ಚದ ಕಿವಿಯ ಯಂತ್ರ, ಮಾತಿನ ತರಬೇತಿಯ ಸಲಹೆ. ಅದು ಸಾಧ್ಯವಿಲ್ಲದ್ದಾಗ ಆ ತಾಯಿಯ ದಿಕ್ಕೇ ತೋಚದ ಭಾವ.

ಜೀವನವಿಡೀ ನೋವಿನ ಚೀಲವಾಗಿರುವಾಗ ನಂಬಿಕೆ ಮಾತ್ರ ಬದುಕಲು ದಾರಿ ತೋರುತ್ತದೆ. ಆದರೆ ಆ ನಂಬಿಕೆಯ ಹಸ್ತ ಮಾತ್ರ ವಿರಳವಾಗಿರುತ್ತದೆ. ಆ ನೊಂದ ತಾಯಿ ಮತ್ತು ಶೌರ್ಯನಿಗೆ ನಂಬಿಕೆಯ ಹಸ್ತವಾಗಿದ್ದು, ನಾರಾಯಣ ಗುರುಗಳ ಧ್ಯೇಯ ಹಾಗೂ ವಿಚಾರದಂತೆ ಕಾರ್ಯ ನಿರ್ವಹಿಸುತ್ತಿರುವ ಗುರುಬೆಳದಿಂಗಳು (ರಿ.) ಕುದ್ರೋಳಿ ಸಂಸ್ಥೆಯ ಪ್ರಮುಖ ದಾನಿಗಳಲ್ಲೋರ್ವರಾದ ಸದಾಕಾಲ ನೊಂದವರ ಮನಕ್ಕೆ ಸಾಂತ್ವನ ನೀಡುವ ಹಂಬಲವುಳ್ಳ, ಸಹೃದಯಿ ಸಮಾಜ ಸೇವಕ, ಕೊಡುಗೈ ದಾನಿ ಸತೀಶ್ ಪೂಜಾರಿ ಬೆಳಪು, ದುಬೈ ಇವರ ಪೂಜ್ಯ ತಂದೆಯವರಾದ ದಿ| ಸೂರು ಪೂಜಾರಿ ಇವರ ಪುಣ್ಯತಿಥಿಯ ಸ್ಮರಣಾರ್ಥ ಪುಟ್ಟ ಮಗು ಶೌರ್ಯನಿಗೆ ಶ್ರವಣ ಯಂತ್ರ ನೀಡುವ ಸಾರ್ಥಕ ಸೇವಾಕಾರ್ಯದ ಮೂಲಕ ತಮ್ಮ ಪಿತೃಶ್ರೀಯವರ ಹೆಸರು ಚಿರಕಾಲ ನೆನೆಯುವಂತೆ ಪುಣ್ಯತಿಥಿ ಆಚರಿಸಿದರು.

ಎರಡು ಜೀವನಕ್ಕೆ, ಎರಡು ಕನಸುಗಳಿಗೆ ಕಿವಿಕೊಟ್ಟು ಶೌರ್ಯನಿಗೆ ಆಧುನಿಕ ಯಂತ್ರ ನೀಡಿದ ದಾನಿಗಳಿಗೆ ನಾವು ಅಭಾರಿಯಾಗಿರುತ್ತೇವೆ.
ಮಗುವಿಗೆ ಇನ್ನೂ ಜೀವವಿದೆ, ಎಲ್ಲರಂತೆ ಓದುವ, ಬರೆಯುವ, ಕಲಿಯುವ ಅವಕಾಶವಿದೆ ಎಂದು ತೋರಿಸಿಕೊಟ್ಟ ದಾನಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳು. ನೀಡಿದ ನೆರವು ಮುಂದೊಂದು ದಿನ ಮರವಾಗಿ ಸಿಹಿಯಾದ ಫಲ ನಿಮ್ಮ ಮುಂದಿರುತ್ತದೆ ಎಂಬುದು ನಮ್ಮ ನಂಬಿಕೆ ಮತ್ತು ಆಶಯ.


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »