ಹಸ್ತ ಹಸ್ತ ಬೇಸೆದ ಯುವಶಕ್ತಿಯೊಂದು ಸಮಾಜಕ್ಕೆ ಮಾದರಿಯಾಗಿ ಇತರರಿಗೆ ಸ್ಫೂರ್ತಿಯಾಗಿ ಸಮಾಜಕ್ಕೆ ತನ್ನಿಂದಾದ ಸಹಾಯವನ್ನು ಮಾಡಬೇಕೆನ್ನುವ ತುಡಿತದೊಂದಿಗೆ ತಾವು ದುಡಿದದಲ್ಲಿ ಸ್ವಲ್ಪವನ್ನು ಸಮಾಜಕ್ಕಾಗಿ ಮಿಸಲಿಟ್ಟ ಟೀಮ್ ತುಳುನಾಡ ಬಿರುವೆರ್ ಬೆಳ್ತಂಗಡಿಯ ಸದಸ್ಯರು. 40 ಶೇಕಡವಿರುವ ಯುವಕರ ತಂಡ ದೊಡ್ಡ ಮೊತ್ತವನ್ನು ಸೇರಿಸಿ ಯುವಕರೆ ದೇಶದ ಶಕ್ತಿಯೆಂದುಯೆಂದು ಟೀಮ್ ತುಳುನಾಡ ಬಿರುವೆರ್ ಬೆಳ್ತಂಗಡಿಯ ಸದಸ್ಯರು ತೋರಿಸಿಕೊಟ್ಟಿದ್ದಾರೆ.
ಬೆಳ್ತಂಗಡಿ ತಾಲೂಕು ಬರಮೇಲು ಪುದುವೆಟ್ಟು ಗ್ರಾಮದ ವ್ಯಾಪ್ತಿಯ ಕ್ರಷ್ಣಪ್ಪ ಪೂಜಾರಿಯ ಧರ್ಮ ಪತ್ನಿ ಅಪ್ಪಿ ಪೂಜಾರ್ತಿಯರ ಕಾಲಿನ ಮೇಲೆ ಮನೆಯ ಕೊಟ್ಟಿಗೆಯ ಗೋಡೆ ಕುಸಿದು ಕಾಲು ಮುರಿದು ಹೋಗಿರುತ್ತದ್ದೆ .ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಚಿಕ್ಸಿತೆಗೆ ದಾಖಲಿಸಿದ್ದು ಸರಿ ಸುಮಾರು 2ಲಕ್ಷಕ್ಕೂ ಅದಿಕ ಹಣ ಖರ್ಚು ತಗಲಿದೆ. ಈ ಬಡ ಕುಟುಂಬಕ್ಕೆ ಇನ್ನೂ ಹೆಚ್ಚಿನ ಹಣ ವ್ಯವಸ್ಥೆಗಾಗಿ ಟೀಮ್ ತುಳುನಾಡ ಬಿರುವೆರ್ ಬೆಳ್ತಂಗಡಿಯ ಸದಸ್ಯರಲ್ಲಿ ತಿಳಿಸಿದ್ದು ಇದಕ್ಕೆ ಪ್ರತಿಕ್ರಿಯಿಸಿದ ನಮ್ಮ ಟೀಮ್ ಸದಸ್ಯರು ಇಂದು ದೊಡ್ಡ ಮೊತ್ತವನ್ನು ಹಸ್ತಾಂತಿಸಿದರು .
ಟೀಮ್ ತುಳುನಾಡ ಬಿರುವೆರ್ ಬೆಳ್ತಂಗಡಿಯ ಸೇವಾಕಾರ್ಯಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಧನ್ಯವಾದಗಳು.