ಬೆಳ್ತಂಗಡಿ ತಾಲೂಕಿನಲ್ಲಿ ಗೆಜ್ಜೆಗಿರಿ ಜಾತ್ರೋತ್ಸವದ ವಲಯ ಸಮಿತಿ ಗಳನ್ನು ರಚಿಸಿ ಗ್ರಾಮ ಮಟ್ಟದಲ್ಲಿ ಸಮಾಜದ ಎಲ್ಲಾ ಸಂಘಟನೆಗಳು ಒಗ್ಗಟ್ಟಿನ ಮೂಲಕ ಸಂಘಟನಾತ್ಮಕವಾಗಿ ಕೆಲಸ ಮಾಡಲು ನಿರ್ಧಾರ.
ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾರ್ಚ್1 ರಿಂದ ಮಾರ್ಚ್ 5 ರ ತನಕ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವ ಯಶಸ್ಸು ಗೊಳಿಸುವ ಬಗ್ಗೆ ಬೆಳ್ತಂಗಡಿ ತಾಲೂಕಿನಲ್ಲಿ ಸಮಾಲೋಚನಾ ಸಭೆಯನ್ನು ದಿನಾಂಕ 28 01 2025 ನೇ ಮಂಗಳವಾರ ಅಪರಾಹ್ನ ಗಂಟೆ 3 ಕ್ಕೆ ಶ್ರೀ ಗುರು ನಾರಾಯಣ ಸೇವಾ ಸಂಘ ಬೆಳ್ತಂಗಡಿ ಇಲ್ಲಿ ಆಯೋಜಿಸಲಾಗಿತ್ತು. ಈ ಸಮಾಲೋಚನ ಸಭೆಯ ಅಧ್ಯಕ್ಷತೆಯನ್ನು ಶ್ರೀ ಗುರುನಾರಾಯಣ ಸೇವಾ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷರಾದ ಜಯ ವಿಕ್ರಂ ಕಲ್ಲಾಪು ವಹಿಸಿದ್ದರು ಶ್ರೀ ಕ್ಷೇತ್ರ ಗೆಜ್ಜಗಿರಿಯ ಆಡಳಿತ ಸಮಿತಿಯ ಅಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ ಯವರು ಶ್ರೀ ಕ್ಷೇತ್ರದಲ್ಲಿ ನಡೆಯುವ ಜಾತ್ರೋತ್ಸವದ ಮಾಹಿತಿಯನ್ನು ನೀಡಿದರು. ಕ್ಷೇತ್ರದ ಗೌರವಾಧ್ಯಕ್ಷರಾದ ಶ್ರೀ ಪೀತಾಂಬರ ಹೆರಾಜೆಯವರು ಅಂದಿನಿಂದ ಇಂದಿನವರೆಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಡೆದು ಬಂದ ಹಾದಿಯನ್ನು ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ ತಿಳಿಸಿದರು .
ಕಾರ್ಕಳ ಬಿಲ್ಲವಾ ಸಂಘದ ಅಧ್ಯಕ್ಷರೂ ಜಾತ್ರೋತ್ಸವ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕರಾದ ಪ್ರಮಲ್ ಕುಮಾರ್ ರವರು ದಿನಾಂಕ ಮಾರ್ಚ್ಎರಡರಂದು ಶ್ರೀ ಕ್ಷೇತ್ರದಲ್ಲಿ ಮಾತೆ ದೇಯಿ ಬೈದೆದಿಯ ಸನ್ನಿಧಿಯಲ್ಲಿ ನಡೆಯುವ ಮಡಿಲು ಸೇವೆಯ ಮಾಹಿತಿಯನ್ನು ಸಭೆಗೆ ಸವಿವರವಾಗಿ ತಿಳಿಸಿದರು.ವೇದಿಕೆಯಲ್ಲಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾದ ಡಾ l ರಾಜಾರಾಮ್ , ಮಹಿಳಾ ಸಂಚಾಲಕಿ ವಿದ್ಯಾ ರಾಕೇಶ್ , ಕ್ಷೇತ್ರದ ಅಭಿವೃದ್ಧಿ ಸಮಿತಿಯ ಸದಸ್ಯರಾದ ರಾಜಶ್ರೀ ರಮಣ ,ಬೆಳ್ತಂಗಡಿ ಮಹಿಳಾ ಬಿಲ್ಲಾ ವೇದಿಕೆಯ ಅಧ್ಯಕ್ಷರಾದ ಸುಮತಿ ಪ್ರಮೋದ್, ಗುರುನಾರಾಯಣ ಸೇವಾ ಸಂಘ ಬೆಳ್ತಂಗಡಿಯ ಉಪಾಧ್ಯಕ್ಷರಾದ ಸುಂದರ ಪೂಜಾರಿ, ಕ್ಷೇತ್ರದ ಟ್ರಸ್ಟಿ ನಾರಾಯಣ ಪೂಜಾರಿ ಮಚ್ಚಿನ, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಮಾದ್ಯಮ ವಕ್ತಾರರಾದ ರಾಜೇಂದ್ರ ಚಿಲಿಂಬಿ, ಬೆಳ್ತಂಗಡಿ ಯುವ ಬಿಲ್ಲ ವೇದಿಕೆಯಾದ ಅಧ್ಯಕ್ಷರಾದ ಪ್ರಸಾದ್ ಎಮ್ ಕೆ ಶಿರ್ಲಾಲು ಉಪಸ್ಥಿತರಿದ್ದರು, ಜಾತ್ರೋತ್ಸವ ಸಮಿತಿಯ ಬೆಳ್ತಂಗಡಿ ತಾಲೂಕಿನ ಪ್ರಧಾನ ಸಂಚಾಲಕರಾದ ನಿತ್ಯಾನಂದ ನಾವರ ರವರ ಸ್ವಾಗತದೊಂದಿಗೆ ಪ್ರಾರಂಭಗೊಂಡ ಸಮಾಲೋಚನಾ ಸಭೆಯು ಬೆಳ್ತಂಗಡಿ ಗುರುನಾರಾಯಣ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿಯಾದ ನಿತೀಶ್ ಕೋಟ್ಯಾನ್ ಕುಕ್ಕೆಡಿಯವರ ಧನ್ಯವಾದದೊಂದಿಗೆ ಕಾರ್ಯಕ್ರಮ ಸಮಪನಗೊಂಡಿತು .ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಬೆಳ್ತಂಗಡಿಯ ವಕ್ತಾರರಾದ ಸಂದೀಪ್ ನಿರಲ್ಕೆಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಗುರುನಾರಾಯಣ ಸೇವಾಸಂಘದ ಮಾಜಿ ಅಧ್ಯಕ್ಷರಾದ ಜಯರಾಮ್ ಬಂಗೇರ, ಚಿದಾನಂದ ಪೂಜಾರಿ ಎಲ್ದಕ ಮಹಿಳಾಭಿಲ್ಲವ ವೇದಿಕೆಯ ನಿರ್ದೇಶಕರುಗಳು ತಾಲೂಕಿನ ಗ್ರಾಮ ಸಮಿತಿಯ ಅಧ್ಯಕ್ಷರುಗಳು ಮಹಿಳಾ ಬಿಲ್ಲವ ವೇದಿಕೆಯ ಸದಸ್ಯರುಗಳು ಹಾಗೂ ಕ್ಷೇತ್ರದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.. ಜಾತ್ರೋತ್ಸವ ಸಮಿತಿಯ ಪ್ರಧಾನ ಸಂಚಾಲಕರಾದ ನಿತ್ಯಾನಂದ ನಾವರ ರವರು ಬೆಳ್ತಂಗಡಿ ತಾಲೂಕಿನ ಎಲ್ಲಾ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಸಂಚಾಲಕರುಗಳ ಪಟ್ಟಿಯನ್ನು ವಾಚಿಸಿದರು.