TOP STORIES:

ತುಳುನಾಡಿನ ಸ್ವರಧಾರೆ ‘ರೇಣುಕಾ ಕಣಿಯೂರು’ ಪರಿಚಯ


ಹೆಚ್ಚು ಪೆಟ್ಟು ತಿಂದ ಕಲ್ಲೇ ಶಿಲೆಯಾಗಿ ನಿಂತು ಅಭಿಷೇಕ ಪಡೆಯುವುದುಎಂಬ ಮಾತಿನಂತೆ ಕಷ್ಟ ಸುಖಗಳನ್ನು ಜೀವನದಲ್ಲಿಸಮಾನವಾಗಿ ಸ್ವೀಕರಿಸಿ , ಅವಮಾನ ಎಂಬ ಬೆಂಕಿಯಲ್ಲಿ ಬೆಂದು, ಅಮ್ಮ ಚಾಮುಂಡೇಶ್ವರಿ ನೆಲೆಯಾದ ಪುಣ್ಯ ಭೂಮಿಕಣಿಯೂರಿನಲ್ಲಿ ಜನಿಸಿ ಅದೆಷ್ಟೋ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ,ಪ್ರೇರಣೆಯ ಪದಗಳಿಗೆ ದನಿಯಾಗಿ, ಉದಯೋನ್ಮುಖ ಪ್ರತಿಭೆಗಳಿಗೆ ತನ್ನ ಬರವಣಿಗೆ ಮತ್ತು ಮಧುರವಾದ ಕಂಠದ ಮೂಲಕ ಅವರನ್ನು ಸಮಾಜಕ್ಕೆ ಪರಿಚಯಿಸಿಸ್ವರಮಾಯೆ ಎಂದೆನಿಸಿಕೊಂಡವರೇರೇಣುಕಾ ಕಣಿಯೂರು‘ .

(Copyrights owned by: billavaswarriors.com )

ಬಾಲ್ಯದಿಂದಲೇ ರಂಗಭೂಮಿಯ ಮೇಲಿನ ಒಲವು:

ಕಡುಬಡತನದಲ್ಲಿ ಅರಳಿದ ಪ್ರತಿಭೆ ಮೂಲತಃ ಬಂಟ್ವಾಳ ತಾಲೂಕಿನ ಕಣಿಯೂರಿನವರು. ಇಬ್ಬರು ಸಹೋದರಿಯರನ್ನುಹೊಂದಿರುವ ಇವರು ತನ್ನ ಕುಟುಂಬಕ್ಕೆ ತಾನೇ ಹಿರಿಮಗಳು. ಚಿಕ್ಕದಿನಿಂದಲೇ ನೃತ್ಯದಲ್ಲಿ ಆಸಕ್ತಿ ಹೊಂದಿದ ಇವರುಚಾಮುಂಡೇಶ್ವರಿಕಲಾ ತಂಡವನ್ನು ಕಟ್ಟಿ ಮಕ್ಕಳಿಗೆ ನೃತ್ಯ‌ ಕಲೆಯ ಕಲಿಸುತ್ತಿದ್ದರು. ಚಾಮುಂಡೇಶ್ವರಿ ಭಜನಾ ತಂಡದಲ್ಲೂ ಸದಸ್ಯೆಯಾದರು.ಇವರುಮೊದಲನೇ ಬಾರಿ ಬಣ್ಣ ಹೆಚ್ಚಿದ್ದು ತನ್ನ ನೇ ಕ್ಲಾಸಿನಲ್ಲಿ. ಹೀಗೆ ರಂಗಪ್ರವೇಶಿಸಿದವರು ರಂಗತೋರಣದೊಳಗೆ ಹೊಕ್ಕವರು ಮತ್ತೆಹಿಂದಿರುಗಲಿಲ್ಲ . ತಮ್ಮ ಊರಿನ ಸಭೆ ಸಮಾರಂಭಗಳಲ್ಲಿ ನಾಟಕ , ನೃತ್ಯ, ನಿರೂಪಣೆ ಹೀಗೆ ಒಂದಲ್ಲ‌ ಎರಡಲ್ಲ ಹಲವಾರುಚಟುವಟಿಕೆಗಳಲ್ಲಿ ತೊಡಗುತ್ತಾ ತನ್ನವರ ಸಹಕಾರವಿಲ್ಲದಿದ್ದರೂ ತಾನೇ ಮುಂದೆ ನಿಂತು ಊರಿನ ಹೆಣ್ಣುಮಕ್ಕಳಿಗೆ ಕಲಾ  ಪ್ರೇರಕಿಯಾಗಿ  ಮುನ್ನಡೆದರು. ಹೀಗೆ ಕೇವಲ ನೃತ್ಯ , ನಾಟಕ , ನಿರೂಪಣೆಗೆ ಸೀಮಿತವಾಗದೆ ಯಕ್ಷಗಾನ ತಾಳಮದ್ದಳೆಯಲ್ಲೂಇವರು ಸೈ ಎಂದೆನೆಸಿಕೊಂಡಿದ್ದಾರೆ. ಮುಂದೆ ಸಾಗುತ್ತಾ ಪದವಿಪೂರ್ವ ಶಿಕ್ಷಣ ಪಡೆದ ಮೇಲೆ‌ ಬಿ.ಎ‌ ಕರೆಸ್ಪಾಂಡೆನ್ಸ್ ಪದವಿಯನ್ನುಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪೂರ್ಣಗೊಳಿಸಿ ಇವರು ಡಿ.ಎಡ್ ಶಿಕ್ಷಣವನ್ನು ಪಡೆದರು.

(Copyrights owned by: billavaswarriors.com )

ನಂತರ ೨೦೦೮ ರಲ್ಲಿ ಆಂಗ್ಲ ಭಾಷಾ ಶಿಕ್ಷಿಕಿಯಾಗಿ ಸೂರಜ್ ಇಂಟರ್ನಾಷನಲ್ ಸ್ಕೂಲ್ ಮುಡಿಪು ಇಲ್ಲಿ   ವೃತ್ತಿಜೀವನಕ್ಕೆ ಪಾದಾರ್ಪಿಸಿಅಲ್ಲಿಯೂ ವಿದ್ಯಾರ್ಥಿಗಳಿಂದ ಮೆಚ್ಚುಗೆಗೆ ಪಾತ್ರರಾದರು. ನಂತರ ಶ್ರೀ ಸರಸ್ವತಿ ವಿದ್ಯಾಲಯದಲ್ಲಿ ಸೇವೆ ಮುಂದುವರೆಸಿ ಅನೇಕಪಠ್ಯೇತರ ಚಟುವಟಿಕೆಗಳಿಗೆ  ವಿದ್ಯಾರ್ಥಿಗಳನ್ನು ಪ್ರೇರೇಪಿಸಿದವರು.

ಕಂಠದಾನಿಯಿಂದ ಪ್ರತಿಭೆಗಳ ಪರಿಚಯ:

ಮೊದಲಾಗಿಸೂಕ್ತವಾಹಿನಿಯ ಮೂಲಕ ಕಂಠದಾನವನ್ನು ಮಾಡಲು ಪ್ರಾರಂಭಿಸಿ ಸಾಮಾಜಿಕ ಜಾಲತಾಣದಲ್ಲಿ ಗುರುತಿಸಲ್ಪಟ್ಟ  ಇವರು ಮುಂದಕ್ಕೆಬೆಳಕುತಂಡದಲ್ಲಿ  ತನ್ನ ಬರವಣಿಗೆಗೆ ಒಂದು ಹೊಸ ಜೀವವನ್ನು ತುಂಬಿ ಸ್ವತಃ ತಾನೇ ಬರೆದ ವ್ಯಕ್ತಿ ಪರಿಚಯಕ್ಕೆಕಂಠದಾನ ಮಾಡುತ್ತಿದ್ದರು. ಇದರ ಮೂಲಕ ಇವರ ಹಿನ್ನಲೆ ಧ್ವನಿಯ ನಾದ ಎಲ್ಲೆಡೆ ಪಸರಿತು. ಅದಲ್ಲದೇಬಿಲ್ಲವ ಸೇವಾಮಾಣಿಕ್ಯದಾತರ ಸಮಾಗಮ ಪ್ರೋತ್ಸಾಹದೊಂದಿಗೆ ಅಲ್ಲೂ  ಕಂಠದಾನ ಮಾಡಿದ ಮಹಾನ್ ದಾನಿ ಇವರು. ಯುವವಾಹಿನಿ ರಿ. ಮಾಣಿ ಘಟಕದ ಸಕ್ರೀಯ ಸದಸ್ಯೆಯಾಗಿದ್ದು ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ .ಇದರ ಜೊತೆಗೆ ಸಾಹಿತ್ಯಕ್ಷೇತ್ರದಲ್ಲಿನ ಇವರ ಸಾಧನೆ ಬೆಳಕಿಗೆ ಬಂದದ್ದು ಶಿವರಾತ್ರಿಯಂದು, ಶ್ರೀ ನಾರಾಯಣ ಗುರು ಮತ್ತು ಶ್ರೀ  ಗೋಕರ್ಣನಾಥನನ್ನುಆಧರಿಸಿ ಬರೆದ ಪದಗಳ‌ ಸಾಲುಗಳು ಕುದ್ರೋಳಿ ಗೋಕರ್ಣನಾಥೇಶ್ವರನ ಸನ್ನಿಧಾನದಲ್ಲಿ ಬಿಡುಗಡೆಯಾದ ಸಮಯದಲ್ಲಿ . ಇನ್ನೂಇವರು ಬರೆದ  ಹಲವಾರು ಸಾಹಿತ್ಯಗಳು ಬಿಡುಗಡೆಯಾಗುವ ಹಂತದಲ್ಲಿದೆ. ಇವರು  ಹಲವಾರು  ವೇದಿಕೆಗಳಲ್ಲಿ ಅತಿಥಿಸ್ಥಾನವನ್ನುಅಲಂಕರಿಸಿದ್ದಲ್ಲದೆ, ಅನೇಕ ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಇವರ ತುಳು ಭಾಷಾ ನಿರೂಪಣೆಯನ್ನು  ಜನ ಹೆಮ್ಮೆಯಿಂದಕೊಂಡಾಡಿದ್ದಾರೆ. ಹಾಗೆಯೇ ಶ್ರೀ ಕ್ಷೇತ್ರ ಪಾಂಡೇಶ್ವರದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಕೀರ್ತಿ ಇವರದ್ದು.

(Copyrights owned by: billavaswarriors.com )


ರೇಣುಕಾರ
ಮನದ ಮಾತು:

ತಾನು ಬೆಳೆಯುತ್ತಾ ಇತರರನ್ನೂ ಮೇಲೆತ್ತಬೇಕೆಂಬ ನಿಸ್ವಾರ್ಥ ಭಾವನೆಯನ್ನು ಹೊಂದಿರುವ ಇವರು, ಅಸಹಾಯಕತೆಯ ಬೇಸರತನಗೆ ಗೊತ್ತಿದ್ದು ಇನ್ನು ಮುಂಬರುವ ಪ್ರತಿಭೆಗಳಿಗೆ ಉತ್ತಮ ವೇದಿಕೆ ಸಿಗಬೇಕೆಂಬುದವುದೇ ಇವರ ಇಚ್ಛೆ.

ಅದೆಷ್ಟೋ ಬಾರಿ ತನ್ನವರಿಂದ ಸಹಕಾರ ಸಿಗದೆ , ಸಾಕಷ್ಟು ಬಾರಿ ಅವಮಾನಗಳ ಭಾರ ಹೊತ್ತ ಜೀವನ ಚಿಕ್ಕದಿನಿಂದಲೇ ಸಾಗಿತ್ತು. ಒಬ್ಬ ಹೆಣ್ಣು ಮಗಳು ಸಮಾಜವನ್ನು ಎದುರಿಸಬೇಕಾದರೆ ತನ್ನ ತಾಯಿಯ ಸಹಕಾರವಿಲ್ಲದೆ ಅದು ಅಸಾಧ್ಯ . ಹಾಗಾಗಿ ತನ್ನತಾಯಿಯೇ ತನಗೆ ಸ್ಪೂರ್ತಿ, ತನ್ನ ಅಜ್ಜಿಯೇ ತನಗೆ ಫೇಸ್ಬುಕ್ , ಇನ್ಸ್ಟಾಗ್ರಾಂ ಎಲ್ಲವೂ. ಸಮಾಜಕ್ಕೆ ರೇಣುಕಾ ಕಣಿಯೂರು ಎಂಬಹೆಸರು ಚಿರಪರಿಚಿತವಾಗಿದ್ದು ಚೇತನ್ ವರ್ಕಾಡಿಯವರು ತನ್ನ ಬಗ್ಗೆ ಬರೆದ ವ್ಯಕ್ತಿ ಪರಿಚಯದಿಂದ , ಸೂಕ್ತ , ಬೆಳಕು, ಬಿಲ್ಲವ ಸೇವಾಮಾಣಿಕ್ಯದಾತರ ಸಮಾಗಮ, ರಾಜ್ ಕ್ರಿಯೇಷನ್ಸ್, ಯುವವಾಹಿನಿ , ಸತ್ಯದ ತುಳುವೆರ್ ರಿ. ಉಡುಪಿ ಮಂಗಳೂರು  ನಂತಹ  ತಂಡಗಳಿಂದ ಮತ್ತು ತನ್ನ ಸ್ವರ ಬರಹ, ನಿರೂಪಣೆಗೆ ಪ್ರೋತ್ಸಾಹ ನೀಡಿ ಮೇಲೆತ್ತಿದ ಸರ್ವ ಹಿತೈಷಿಗಳಿಂದ ಮತ್ತು ಹಲವಾರುಬಳಗದಿಂದ  . ಹಾಗೇ ಸಮಾಜದಲ್ಲಿ ಒಂದು ಒಳ್ಳೆ ಸ್ಥಾನ ಸಿಗಲು ತನ್ನ ಗಂಡ ಲೋಕೇಶ್ ಪೂಜಾರಿ ಮತ್ತು ಮನೆಯವರ ಬೆಂಬಲವೇಕಾರಣಎನ್ನುತ್ತಾರೆ ರೇಣುಕಾ.

(Copyrights owned by: billavaswarriors.com )

ಸಂದ ಗೌರವಗಳು :

ರೇಣುಕಾ ರವರ ನಿಸ್ವಾರ್ಥ ಸೇವೆ ಹಾಗೂ ಸೇವೆಗಳನ್ನು ಗುರುತಿಸಿ  ಸತ್ಯದ ತುಳುವೆರ್ ತಂಡ, ಶ್ರೀ ಕ್ಷೇತ್ರ ಕುದ್ರೋಳಿ, ಸೂಕ್ತ ನ್ಯೂಸ್, ಹೀಗೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಗಳನ್ನು ಮಾಡಿವೆ. ಇದಲ್ಲದೇ ತುಳು ಭಾಷೆಯ ಮೇಲಿರುವ ಇವರ ಅಭಿಮಾನವನ್ನುಕಂಡು,  ಇವರನ್ನು ಬಿರುವೆರ್ ಕುಡ್ಲ ತಂಡವು ಯುವ ಪ್ರತಿಭೆ ದಿವ್ಯಶ್ರೀ ರವರನ್ನು ಸಂದರ್ಶನ ಮಾಡಲು ಆಹ್ವಾನಿಸಿದ್ದು, ಮುಕ್ತವಾಹಿನಿ ಉಡುಪಿಯ ಇದರಲ್ಲಿ ಭೂಮಿಕಾ ವಿಶೇಷ ಸಂಚಿಕೆಯಲ್ಲಿ  ನಡೆದ ಇವರ ಸಂದರ್ಶನ,  ಹೀಗೆ ಸಮಾಜದಲ್ಲಿ ಜನರು ತನ್ನನ್ನು  ಗುರುತಿಸುವುದೇ ಒಂದು ದೊಡ್ಡ ಸನ್ಮಾನ  ಎಂದೆನ್ನುತ್ತಾರೆ ರೇಣುಕಾ.

(Copyrights owned by: billavaswarriors.com )

ಸದಾ ಮುಗುಳ್ನಗೆಯ ಒಡತಿಯಾಗಿರುವ ನಿಮ್ಮ ಮಧುರವಾದ ಧ್ವನಿಯ ಇಂಪು ಹೀಗೇ ಎಲ್ಲರ ಕಿವಿಯಲ್ಲಿ ನಿತ್ಯ ಪ್ರತಿಧ್ವನಿಸುತ್ತಾ , ಪ್ರತಿ ಕಾರ್ಯದಲ್ಲೂ ಶ್ರೀ ನಾರಾಯಣ ಗುರುಗಳ ಆಶೀರ್ವಾದ ಕೋಟಿಚೆನ್ನಯರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ ಎಂದುಬಿಲ್ಲವ ವಾರಿಯರ್ಸ್‌ ಸಂಸ್ಥೆಯ ವತಿಯಿಂದ ಹಾರೈಸುತ್ತೇನೆ.

www.billavaswarriors.com

✍️ಬರಹ : ಯಕ್ಷಿತಾ ಆರ್ ,ಮೂಡುಕೊಣಾಜೆ


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »