TOP STORIES:

”ಲೀಫ್ ಆರ್ಟ್’ ಎಂಬ ಕಲೆಯಿಂದ ಜನಮಣ್ಣನೆ ಪಡೆದಿರುವರು ಮೂಡುಬಿದಿರೆಯ ಅಕ್ಷಯ್ ಕೋಟ್ಯಾನ್


ಬಲ್ಲವನೇ ಬಲ್ಲ ಬೆಲ್ಲದ ರುಚಿಯಎಂಬಂತೆ ಒಬ್ಬ ಕಲಾವಿದನಿಗೆ ಮಾತ್ರ ಗೊತ್ತು ಕಲೆಯ ಬೆಲೆ. ಅವನಲ್ಲಿ ಮೂಡುವ ವಿಶಿಷ್ಟಚಟುವಟಿಕೆಯೇ ಕಲೆ ಎಂಬಂತೆ ಪೆನ್ಸಿಲ್ ಸ್ಕೆಚ್,ಪೈಂಟಿಂಗ್,ಚಿತ್ರಕಲೆ ಇವೆಲ್ಲವನ್ನು ಹೊರತುಪಡಿಸಿ ಪಚ್ಚನೆಯ ಪತ್ರೆಗಳಲ್ಲಿ ಹಲವಾರುನಗುಮುಖಗಳನ್ನು ಸೃಷ್ಟಿಸಿ ಅವುಗಳಿಗೆ ವಿಶೇಷವಾದ ಕಳೆಯನ್ನು ತುಂಬಿ ಇದೀಗಲೀಫ್ ಆರ್ಟ್ಎಂಬ ಕಲೆಯಿಂದ ಜನಮಣ್ಣನೆಪಡೆದಿರುವರು ಮೂಡುಬಿದಿರೆಯ ಅಕ್ಷಯ್ ಕೋಟ್ಯಾನ್.

   (Copyrights owned by: billavaswarriors.com )

ಲೀಫ್ ಆರ್ಟಿಸ್ಟ್ ಎಂದೇ ಪ್ರಸಿದ್ದಿ ಹೊಂದಿರುವ ಇವರು ಮೋಹನ್ ಬಿ.ಪೂಜಾರಿ ಮತ್ತು ಶೋಭಾ ದಂಪತಿಯ ಪುತ್ರ.ಪ್ರಾಂತ್ಯಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ,ಹೋಲಿ ರೋಸರಿ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಗಿಸಿ ಪ್ರಸ್ತುತ ಮೂಡಬಿದಿರೆಯಆಳ್ವಾಸ್ ಕಾಲೇಜಿನಲ್ಲಿ ೩ನೇ ವರುಷದ  ವೀಷ್ಯುಲ್ ಆರ್ಟ್ಸ್ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.ಪೆನ್ಸಿಲ್ ಸ್ಕೆಚ್,ಸಾಬೂನಿನಲ್ಲಿದೇವರ ಕಲಾಕೃತಿ,ವಾಲ್ ಪೈಟಿಂಗ್,ರಂಗೋಲಿ ಮತ್ತು ಪೆನ್ಸಿಲ್ ಮೊನೆಯಿಂದ ಮೈಕ್ರೋ ಆರ್ಟ್ ಹೀಗೆ ಹಲವಾರು ಕಲೆಗಳನ್ನುಹೊಂದಿರುವ ಕಲಾಭಂಡಾರಿ ಎಂದೆನಿಸಿಕೊಂಡಿದ್ದಾರೆ.

   (Copyrights owned by: billavaswarriors.com )

ಪಚ್ಚೆ ಪತ್ರೆಗಳಲ್ಲಿ ಮೂಡಿದ ನಗುಮುಖಗಳು:

ಲಾಕ್ ಡೌನ್ ವೇಳೆ ಕೇವಲ ವೆಕ್ಟರ್ ಫಾರ್ಮ್ ನಲ್ಲಿ ಪೇಪರ್ ಕಟ್ಟಿಂಗ್ ಮಾಡುತ್ತಿದ್ದ ಇವರು ಎಲೆಗಳಲ್ಲೇಕೆ ಪ್ರಯತ್ನಿಸಬಾರದು ಎಂದುಕುತೂಹಲದಿಂದ ಒಂದ್ಹೆಜ್ಜೆ ಮುಂದಿಟ್ಟರು.ಮೊದಲ ಪ್ರಯತ್ನದಲ್ಲಿ ಸೋತರೂ ಎರಡನೇ ಬಾರಿ ರಶ್ಮಿಕಾ ಮಂದಣ್ಣರವರಮುಖಚಿತ್ರವನ್ನು ಎಲೆಯ ಮೇಲೆ ಬಿಡಿಸುವಲ್ಲಿ ಫಲಕಾರಿಯಾದರು.

ನಂತರ ಪ್ರಧಾನಮಂತ್ರಿಯಾದ ಶ್ರೀ ನರೇಂದ್ರ ಮೋದಿ, ಸಿ.ಎಂ ಬಿ.ಎಸ್ ಎಡಿಯೂರಪ್ಪ, ಡಾ.ವೀರೇಂದ್ರ ಹೆಗ್ಗಡೆ,ಸನ್ನಿಧ್ಪೂಜಾರಿ,ಹರೀಶ್ ಪೂಂಜ,ಶಾಸಕ ಉಮಾನಾಥ್ ಕೋಟ್ಯಾನ್,ಸಿನಿಮಾ ದಿಗ್ಗಜರಾದಸುದೀಪ್, ದರ್ಶನ್,ಜಗ್ಗೇಶ್ ಹೀಗೆ ಅನೇಕಕಲಾವಿದರ ,ಸಾಧಕರ ಮುಖಚಿತ್ರಗಳನ್ನು ಎಲೆಗಳಲ್ಲಿ ಬರೆದು ಒಂದು ವರುಷದಲ್ಲಿ ಒಟ್ಟು ೨೦೦ ಲೀಫ್ ಅರ್ಟ್ ಗಳನ್ನುತಯಾರಿಸಿದ್ದಾರೆ.

ಹಸಿರೆಲೆಗಳಲ್ಲಿ ಹಸನ್ಮುಖಗಳು ಅನಾವರಣಗೊಂಡಿದ್ದು ಹೇಗೆ?

ತಾಳ್ಮೆ ಮತ್ತು ಸಹನೆ ಇರುವವರಿಗೆ ಎಲ್ಲವೂ ಹೆದ್ದಾರಿಯಾಗುತ್ತದೆ ಎಂಬುದು ಕಲೆಯಲ್ಲಿ ಎದ್ದು ಕಾಣುತ್ತಿದೆ.”ಹೂವಿನಷ್ಟೇನಾಜ಼ೂಕಾದ ಎಲೆಗಳ ಮೇಲೆ ಯಾವುದೇ ಕಲಾಕೃತಿ ಬರೆಯಲು ರಿಂದ ಎರಡೂವರೆ ಗಂಟೆ ಬೇಕಾಗುತ್ತದೆ.ಇಲ್ಲಿ ತಮಗೆ ಬೇಕಾದಎಲೆಗಳನ್ನು ಆರಿಸಿಕೊಳ್ಳಬಹುದು.ನಾನು ಮೊದಲನೇ ಬಾರಿ ಹಲಸಿನ ಎಲೆಗಳನ್ನು ಬಳಸಿದೆ,ನಂತರ ಅಶ್ವಥ ಎಲೆಗಳನ್ನು ಜಾಸ್ತಿ ದಿನಸಂಗ್ರಹಿಸಬಹುದೆಂಬ ಕಾರಣಕ್ಕೆ ಅದನ್ನು ಬಳಸಲು ಮುಂದಾದೆ.ಮೊದಲಿಗೆ ಎಲೆಗಳ ಮೇಲೆ ಸ್ಕೆಚ್ ತಯಾರಿಸಿ ಅದರ ಮೇಲೆಕಟ್ಟಿಂಗ್ ಬ್ಲೇಡ್ ನಿಂದ ತಿರುವುಗಳನ್ನು ಬಿಡಿಸಿ ತದನಂತರ ಕಟ್ಟಿಂಗ್ ಮುಗಿಸಿದ ಮೇಲೆ ಎಲೆಯನ್ನು ಆಕಾಶದಾಚೆಗೆ ಎತ್ತಿ ಹಿಡಿದಲ್ಲಿಹೊಸ ವಿನ್ಯಾಸವೊಂದು ಮೂಡಿ ಬರುತ್ತದೆ.ಅದುವೇ ಲೀಫ್ ಆರ್ಟ್. ಇವುಗಳನ್ನು ಫ್ರೇಮ್ ಹಾಕಿ ಕೂಡಇಟ್ಟುಕೊಳ್ಳಬಹುದು.ಅನೇಕ ಸಮಾರಂಭಗಳಿಗೆ ಇದನ್ನು ಉಡುಗೊರೆಯಾಗಿಯೂ ಕೊಡಬಹುದು“‌ ಎನ್ನುತ್ತಾರೆ ಅಕ್ಷಯ್.

(Copyrights owned by: billavaswarriors.com )

ಲೀಫ್ ಆರ್ಟ್ ಕಲಾವಿದನ ಮನದ ಮಾತು:

ನನ್ನ ಪ್ರತಿ ಕಾರ್ಯದಲ್ಲಿ ನನಗೆ ಸಹಕರಿಸಿದವರು ನನ್ನ ಹೆತ್ತವರು,ಶಿಕ್ಷಕರು ಹಾಗೂ ಸ್ನೇಹಿತರು. ನನಗೆಂದೂ ಸ್ಪೂರ್ತಿಯಾದವರುವಿಲಾಸ್ ನಾಯಕ್.ಹಲವಾರು ಟಿ.ವಿ ಚಾನಲ್ ನವರು ಸಂದರ್ಶನ ಮಾಡಿದ್ದರಿಂದ ಇದೀಗ ಎಲ್ಲರೂಲೀಫ್ ಆರ್ಟಿಸ್ಟ್ಎಂದುಗುರುತಿಸುತ್ತಾರೆ.ಇದರಿಂದಾಗಿ ಲೀಫ್ ಆರ್ಟ್ ಗೆ ಸುಮಾರು ಬೇಡಿಕೆಗಳು ಸಹ ಬಂದಿವೆ.ನನ್ನ ಸಾಧನೆಯ ಹಾದಿಯಲ್ಲಿಬೆನ್ನೆಲುಬಾಗಿ ನಿಂತು ಸಹಕರಿಸಿದವರಿಗೆ ನಾನು ಸದಾ ಚಿರರುಣಿಎನ್ನುತ್ತಾರೆ ಅಕ್ಷಯ್.

ಸಂದ ಗೌರವಗಳು:

ಇವರ ಸಾಧನೆಯನ್ನು ಗುರುತಿಸಿ ವೀರಕೇಸರಿ ಬೆಳ್ತಂಗಡಿ ವತಿಯಿಂದಕಲಾರತ್ನ ಪುರಸ್ಕಾರಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ವತಿಯಿಂದ ಗೌರವಿಸಲಾಗಿದೆ.ಇದಲ್ಲದೆ‌ ಸಿ.ಎಂ.ಎಡಿಯೂರಪ್ಪರವರು ತನ್ನ ಶಿಕ್ಷಣಕ್ಕಾಗಿ ಒಂದು ಲಕ್ಷ ಮೊತ್ತವನ್ನ ಹಾಗೇಡಾ.ವೀರೇಂದ್ರ ಹೆಗ್ಗಡೆಯವರು ತನ್ನ ಕಲೆಯನ್ನು ಗುರುತಿಸಿ ಅವರೇ ಖುದ್ದಾಗಿ ವೀಡಿಯೋ ಮಾಡಿ ತನಗೆ ಆಶೀರ್ವದಿಸಿದ್ದು  ತನ್ನಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ಅಕ್ಷಯ್ ರವರ ಅಭಿಪ್ರಾಯ.

ಜೀವನದ ಪಥದಲ್ಲಿ ಸಾಧನೆ ಎಂಬ ಕೀರ್ತಿಯನ್ನು  ತಮ್ಮದಾಗಿಸಿ ಇನ್ನಷ್ಟು ಜನಮನಗಳನ್ನು ಗೆದ್ದು ನಿಮ್ಮ ಕಲೆಯನ್ನು ಬೆಳೆಸಲುಇನ್ನಷ್ಟು ಅವಕಾಶ ದೊರೆಯಲಿ ಎಂದು ಆಶಯಿಸುತ್ತಾ ನಾರಾಯಣ ಗುರುಗಳ ಆಶೀರ್ವಾದ ಕೋಟಿಚೆನ್ನಯರ ಅನುಗ್ರಹ ಸದಾನಿಮ್ಮ ಮೇಲೆ ಇರೆಲಿ ಎಂದು ಬಿಲ್ಲವ ವಾರಿಯರ್ಸ್‌ ಸಂಸ್ಥೆಯ ವತಿಯಿಂದ ಹಾರೈಸುತ್ತೇನೆ.

www.billavaswarriors.com


✍️
ಬರಹ : ಯಕ್ಷಿತಾ ಆರ್ ,ಮೂಡುಕೊಣಾಜೆ


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »