ಸಹಸ್ರಾರು ಮಂದಿಯ ಹೃದಯ ದೇವತೆ ಲೀಲಾವತಿ ಜಯ ಸುವರ್ಣ

ಸ್ವಂತ ಮಕ್ಕಳನ್ನು ಹೆತ್ತು ತಾಯಿಯಾಗುವುದಕ್ಕಿಂತ, ಸಾಮಾಜಿಕವಾಗಿ ತಾಯಿಯಾದವರು ಎಲ್ಲ ತಾಯಿಯಂದಿರಿಗಿಂತ ಉನ್ನತ ಸ್ಥಾನದಲ್ಲಿ ನಿಲ್ಲುತ್ತಾರೆ. ಅಂಥ ವಿಶಾಲ ಹೃದಯಿ ಲೀಲಾವತಿ ಜಯ ಸುವರ್ಣರು. ಜಗತ್ತಿನ ಬಹುತೇಕ ಸಾಧಕರ ಸಾಧನೆಯಲ್ಲಿ ಅದೆಷ್ಟೋ ಮಹಿಳೆಯರ ತ್ಯಾಗವಿದೆ, ಸಹನೆಯಿದೆ, ಸಮರ್ಪಣೆಯಿದೆ, ಪ್ರೀತಿ ಪ್ರೋತ್ಸಾಹಗಳಿವೆ. ಬಿಲ್ಲವ ಸಮಾಜದ ಅಭಿವೃದ್ಧಿಯ ರೂವಾರಿ ಸನ್ಮಾನ್ಯ ಜಯ ಸಿ. ಸುವರ್ಣರ ಸಮಾಜಪರ ಕೆಲಸ ಕಾರ್ಯಗಳಿಗೆ ಶಕ್ತಿಯಾಗಿ ನಿಂತವರು ಲೀಲಾವತಿಯವರು. ಈ ದಂಪತಿ ಸಮಾಜ ಸೇವೆಯನ್ನು ದೇವರ ಸೇವೆಯೆಂದು ಭಾವಿಸಿ ಅನುಸರಿಸಿದವರು. ಪರರ ಒಳಿತಿನಲ್ಲಿಯೇ ಖುಷಿಯನ್ನು ಕಂಡವರು. ಭಾರತೀಯ […]