ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?
ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ ಅಲ್ಲ ಎಂಬರ್ಥದಲ್ಲೇ ಪರಿಗಣಿತವಾಗಿತ್ತು. ಒಂದೇ ಆ ವ್ಯಕ್ತಿಯಲ್ಲಿ ಅಥವಾ ಗೈದ ವಿಧಿವಿಧಾನಗಳಲ್ಲಿ ಏನಾದರೂ ಲೋಪದೋಷಗಳಾದಾಗ ಮಾತ್ರ ಹೀಗಾಗುವುದಿತ್ತು. ಹೆಚ್ಚಿನ ಸಂದರ್ಭಗಳಲ್ಲಿ ಆ ವ್ಯಕ್ತಿಯ ಭಾವೋದ್ವೇಗವೇ ಇದಕ್ಕೆ ಕಾರಣ. ಆದರೆ, ಮೂರು ನಾಲ್ಕು ವರ್ಷಗಳಲ್ಲಿ ಊರಿನ ಐದಾರು ಕಡೆಯ ಊದುವಿನ ಸಂದರ್ಭದಲ್ಲಿ ಹುಲಿಯಾವೇಶ. ಕೆಲವೆಡೆ […]