“ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ” ಪ್ರತಿಭಾ ಕುಳಾಯಿ ಆಯ್ಕೆ

ಮಂಗಳೂರು: ಸಮಾಜ ಸೇವೆಗಾಗಿ ಕುಳಾಯಿ ಫೌಂಡೇಶನ್ ರಚಿಸಿ ೫೦೦ಕ್ಕೂ ಹೆಚ್ಚು ಮಹಿಳೆ ಮತ್ತು ಮಕ್ಕಳಿಗೆ ಬದುಕು ಕಟ್ಟಿಕೊಡುತ್ತಿರುವ, ಯುವ ರಾಜಕಾರಣಿ ಪ್ರತಿಭಾ ಕುಳಾಯಿ, ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ಸ್ ಗೆ ಆಯ್ಕೆಯಾಗಿದ್ದಾರೆ. ರಷ್ಯಾದ ಮಾಸ್ಕೋದಲ್ಲಿ ಏಪ್ರಿಲ್ 24ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಸಮಾಜ ಸೇವಾ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರತಿಭಾ ಕುಳಾಯಿ ಮಹಿಳೆಯರ ಸ್ವಾವಲಂಬಿ ಬದುಕು ರೂಪಿಸಲು ಮಾಡಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಹಣಕಾಸು ಸೌಲಭ್ಯ, ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ […]
ವಿದೇಶದ ಇಸ್ರೇಲ್ ನಲ್ಲಿದ್ದು ತುಳುನಾಡಿನ ಸಂಕಷ್ಟದ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಿದ ಮಹನೀಯ ವ್ಯಕ್ತಿ ದಿನಕರ ಪೂಜಾರಿ

ನಾನು ನನ್ನವರು ಎಂಬ ಈ ಕಾಲ ಘಟ್ಟದಲ್ಲಿ ಸಮಾನ ಮನಸ್ಕರ ಜೊತೆ ಸೇರಿ ದುಡಿದದ್ದರಲ್ಲಿ ಸ್ವಲ್ಪ ಪಾಲನ್ನು ಸಮಾಜಕ್ಕಾಗಿ ವಿನಿಯೋಗಿಸುವ ಮಹೋನ್ನತ ಕಾರ್ಯಗೈಯುತ್ತಿರುವ ವ್ಯಕ್ತಿ ದಿನಕರ ಪೂಜಾರಿ. ವಿದೇಶದಲ್ಲಿದ್ದು ಸಂಕಷ್ಟದ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಿದ ಮಹನೀಯ. ಇದಕ್ಕೆ ಕಾರಣ ತಾನು ಬಾಲ್ಯದಲ್ಲಿ ಅನುಭವಿಸಿದ ಕಷ್ಟದ ಅನುಭವಗಳು. ವಿದ್ಯೆ ಪಡೆಯುವ ಹಂಬಲವಿದ್ದರೂ ಆರ್ಥಿಕತೆಯ ಬೆಂಬಲವಿಲ್ಲದೆ ಪರಿತಪಿಸಿದ ಕ್ಷಣಗಳು ಇಂದಿಗೂ ಅವರಿಗೆ ಕಹಿ ನೆನಪು. ಸಕ್ಕರೆ ಮನಸಿನ ದಿನಕರ್ ಪೂಜಾರಿ ಇವರು ಕಾರ್ಕಳ ತಾಲೂಕಿನ ನಕ್ಕರೆ ಎನ್ನುವ ಗ್ರಾಮದಲ್ಲಿ […]
ಬಿಲ್ಲವ ಸಮಾಜಕ್ಕಾಗಿ ಪಂದ್ಯಾಟದ ಜೊತೆಗೆ ಆರ್ಥಿಕ ಯೋಜನೆಯನ್ನು ರೂಪಿಸಿದ ರುವಾರಿ ವಿಶ್ವನಾಥ ಪೂಜಾರಿ ಕಡ್ತಲ

ಆದರಣೀಯ ಕ್ಷಣಗಳನ್ನು ಮತ್ತೊಮ್ಮೆ ಮರಳಿಸಿ ವಿದೇಶದ ಮಣ್ಣಲ್ಲೂ ಬಿಲ್ಲವರನ್ನು ಒಗ್ಗೂಡಿಸಿಕೊಂಡು ಒಂದು ಪಂದ್ಯಾಟ ನಡೆಸುವುದು ಕಷ್ಟ ಎಂಬ ಸನ್ನಿವೇಶದಲ್ಲಿ ಮಾಡಿಯೇ ಸಿದ್ಧ ಎಂಬ ಸ್ಪಷ್ಟ ನಿಲುವಿನೊಂದಿಗೆ ಎಲ್ಲರಿಗೂ ಇಷ್ಟವಾಗಿಸಿದ ಕ್ರಿಕೆಟ್ ಪಂದ್ಯಾಟ ಮಾಡಿ ಸೈ ಎನಿಸಿಕೊಂಡ ಖ್ಯಾತಿ ಬಿಲ್ಲವ ಸಂಘ ಪುಣೆಯದ್ದು. ಉದ್ಯೋಗ ನಿಮಿತ್ತ ವಿವಿಧ ಕಡೆಗಳಲ್ಲಿದ್ದ ಬಿಲ್ಲವರನ್ನು ಒಗ್ಗೂಡಿಸಿ ”ವಲ್ಡ್೯ ಬಿಲ್ಲವ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್” ಆಯೋಜನೆಯು ಅವಿರತ ಶ್ರಮದ ಫಲವಾಗಿದೆ. ಇದರ ಜೊತೆಗೆ ಆರ್ಥಿಕವಾಗಿ ಹಿಂದುಳಿದ ಬಿಲ್ಲವ ಸಮಾಜದ ಬಾಂಧವರಿಗೆ “ದೇಯಿ ಸಂಜೀವಿನಿ” […]