ಬೆಂಗಳೂರು: 8 ಬೇಡಿಕೆಗಳನ್ನು ಅಖಿಲ ಕರ್ನಾಟಕ ಈಡಿಗ-ಬಿಲ್ಲವ-ನಾಮದಾರಿ ಸಮಿತಿಯಿಂದ ಕರ್ನಾಟಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು
ಈಡಿಗ -ಬಿಲ್ಲವ-ನಾಮದಾರಿ ಒಟ್ಟು 26 ಉಪ ಪಂಗಡಗಳಿಗೆ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದರ ಜೊತೆಗೆ ಕನಿಷ್ಟ 500ಕೋಟಿ ರೂಪಾಯಿಗಳನ್ನು ನಿಗಮಕ್ಕೆ ಬಿಡುಗಡೆ ಮಾಡಬೇಕು,ಈ ಸಮಾಜವನ್ನು ಪ್ರವರ್ಗ 2ಎ ಕೆಟಗರಿಯಿಂದ ಪ್ರವರ್ಗ -1ಕ್ಕೆ ಸೇರ್ಪಡೆಗೊಳಿಸಬೇಕು ಮುಂತಾದ ಒಟ್ಟು 8 ಬೇಡಿಕೆಗಳನ್ನು ಇಟ್ಟುಕೊಂಡು ಅಖಿಲ ಕರ್ನಾಟಕ ಈಡಿಗ-ಬಿಲ್ಲವ-ನಾಮದಾರಿ 26 ಉಪಪಂಗಡಗಳ ಹೋರಾಟ ಸಮಿತಿಯಿಂದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿಯವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು.
ಈ ಸಂಧರ್ಭ ಹೋರಾಟ ಸಮಿತಿಯ ಅಧ್ಯಕ್ಷರಾದ ಶ್ರೀ ಮಾಲೀಕಯ್ಯ.ವಿ.ಗುತ್ತೇದಾರ್, ಕಾರ್ಯಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್,ಶ್ರೀ ಎಚ್.ಆರ್.ಶ್ರೀನಾಥ್ ಉಪಸ್ಥಿತರಿದ್ದರು.