TOP STORIES:

ಮಂಗಳೂರು ಬಜ್ಪೆ ಊರಿನಲ್ಲೊಬ್ಬ ಆಪತ್ಬಾಂಧವ… ದಿನೇಶಣ್ಣ ಬಜಪೆ.


#ಬಜ್ಪೆ_ರಿಕ್ಷ_ದಿನೇಶಣ್ಣೆ…. 😍

ಮಂಗಳೂರು ಬಜ್ಪೆ  ಊರಿನಲ್ಲೊಬ್ಬ ಆಪತ್ಬಾಂಧವ…. ನಮ್ಮ ಆಟೋ ದಿನೇಶಣ್ಣ ಬಜಪೆ.

ಎಲ್ಲೋ ಒಬ್ಬ ಆಟೋ ಚಾಲಕ ಮೀಟರ್  ಡಬಲ್ ಕೇಳಿದರೆ ನಾವು ಅವನಿಗೆ ಬಾಯಿ ತುಂಬಾ ಬೈದು ಮತ್ತೆ ಎಲ್ಲಾ ಆಟೋ ಚಾಲಕರ ಮೇಲೆ ಮುನಿಸಿಕೊಳ್ಳುತ್ತೇವೆ. ಆದರೆ ಅದೆಷ್ಟೋ ಆಟೋ ಚಾಲಕರು ತಮ್ಮ ದುಡಿಮೆಯ ಜೊತೆಗೆ ಸಮಾಜದ ಪ್ರತಿ ಒಂದು ವರ್ಗದ ಜಾತಿ ಧರ್ಮ ಭೇದ ಮರೆತು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತನ್ನ ಸೇವೆಯನ್ನು ನೀಡಿ ತನ್ನ ಜೀವನವನ್ನು ಸಮಾಜಕ್ಕೆ ಮುಡಿಪಾಗಿಟ್ಟ ಎಷ್ಟು ಆಟೋ ಚಾಲಕರು ನಮ್ಮ ಕಣ್ಣ ಮುಂದೆ ಇದ್ದಾರೆ. ಅದರಲ್ಲಿ ನಮ್ಮ ಬಜಪೆಯ ಆಪತ್ಬಾಂಧವ ದಿನೇಶಣ್ಣ ಒಬ್ಬರು…

ಶ್ರೀ ದಿನೇಶ್ ಬಂಗೇರ ಬಜಪೆ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಬಜಪೆಯಲ್ಲಿ ಆಟೋ ಚಾಲಕರಾಗಿರುವ ಇವರು ಕಳೆದ ಅನೇಕ ವರ್ಷಗಳಿಂದ ದುಡಿಮೆ ಜೊತೆಗೆ ಸಮಾಜಮುಖಿ ಕಾರ್ಯಗಳು, ಸಮಾಜದ ಕಡು ಬಡತನದಲ್ಲಿರುವ ಅಶಕ್ತರ ನೆನಪಿಗೆ ನೆರವಿಗೆ ಧಾವಿಸುವ ಆಪತ್ಬಾಂಧವ. ಕೆಲವು ವರ್ಷಗಳ ಹಿಂದೆ ನಾನು ಬಸ್ಸಿನಲ್ಲಿ ಕೈಕಂಬ ಮಾರ್ಗವಾಗಿ ಪ್ರಯಾಣಿಸುತ್ತಿದ್ದೆ ಆ ಸಂದರ್ಭದಲ್ಲಿ ಕ್ರಿಶ್ಚಿಯನ್ ವ್ಯಕ್ತಿಗೆ ಬಸ್ಸು ತಾಗಿ ಅವರು ನೆಲಕ್ಕೆ ಕುಸಿತರು ಬಸ್ಸಿನವ ಬಿಟ್ಟು ಹೋಗುವವನಿದ್ದ.. ಆ ಸಂದರ್ಭದಲ್ಲಿ ತಕ್ಷಣವೇ ದಿನೇಶಣ್ಣ ತಮ್ಮ ರಿಕ್ಷಾದಿಂದ ಹಾರಿ ಬಸ್ಸನ್ನು ನಿಲ್ಲಿಸಿ ಅಸಹಾಯಕತೆಯಲ್ಲಿ ಇದ್ದ ವ್ಯಕ್ತಿಗೆ ನ್ಯಾಯವನ್ನು ಸ್ಥಳದಲ್ಲಿ ಕೊಡಿಸುವ ಕೆಲಸ ಮಾಡಿದರು. ಇದು ನಾನು ಪ್ರತ್ಯಕ್ಷ ನೋಡಿದ ಘಟನೆ. ಅದೇ ರೀತಿ ಅದೆಷ್ಟೋ ಅಶಕ್ತರಿಗೆ ವೃದ್ಧರಿಗೆ ಸಹಾಯ ಮಾಡಿದ ಘಟನೆಗಳು ನೂರಾರು ಇದೆ.

ಬಿರುವೆರ್ ಕುಡ್ಲ ಬಜಪೆ ಘಟಕ ಎಲ್ಲರಿಗೂ ಗೊತ್ತಿರುವ ವಿಷಯ ಅವರು ಮಾಡುವ ಸೇವಾ ಯೋಜನೆಗಳು ಇಡೀ ಸಮಾಜಕ್ಕೆ ಗೊತ್ತಿರುವಂತಹ ವಿಷಯ, ಬಿರುವೆರ್ ಕುಡ್ಲ ಬಜಪೆ ಘಟಕ ಉಪಾಧ್ಯಕ್ಷರಾಗಿ ಕಳೆದ ನಾಲ್ಕು ವರ್ಷಗಳಿಂದ ಘಟಕದ ಸಮಾಜಕ್ಕೆ ಸೇವೆಗಳು ಯಶಸ್ವಿಯಾಗಿ ನಡೆಯಲು ಇವರು ಕೂಡ ಕಾರಣಿಭೂತರು. ಘಟಕದ ಪ್ರತಿಯೊಂದು ಹೆಜ್ಜೆಲ್ಲೂ   ಮಾರ್ಗದರ್ಶನ ನೀಡುತ್ತಾ, ಘಟಕದ ಸ್ಪಂದನ ತಂಡಕ್ಕೆ ಧನವನ್ನು ಕೂಡಿಕರಿಸುವುದರಲ್ಲಿ ಇವರ ಪರಿಶ್ರಮ ಅಪಾರ. ಕೇಸರಿ ಆಟೋ ಚಾಲಕರ ಸಂಘ ಬಜತಪೆ ಇದರ ಒಂದು ಯಶಸ್ವಿ ಪದಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಹಿರಿಯರಲ್ಲಿ ಹಿರಿಯರಂತೆ…. ಕಿರಿಯದಲ್ಲಿ ಕಿರಿಯರಂತೆ ಅತಿ ಮುಗ್ಧತೆಯಿಂದ ಇರುವ ಇವರ ವ್ಯಕ್ತಿತ್ವ ನಮಗೆಲ್ಲ ಆದರ್ಶವಾಗಿದೆ. ಅನಾರೋಗ್ಯದಲ್ಲಿರುವವರಿಗೆ, ಬಾಣಂತಿಯರಿಗೆ, ಹಿರಿಯರಿಗೆ ಮತ್ತು ಅಪಘಾತವಾದವರಿಗೆ ತಡ ರಾತ್ರಿ ನೋಡದೆ ತಕ್ಷಣವೇ ಸ್ಪಂದಿಸುವ ವ್ಯಕ್ತಿ ನಮ್ಮ ದಿನೇಶಣ್ಣ. ಬ್ರಹ್ಮಶ್ರೀ ನಾರಾಯಣ ಗುರುಗಳ ಅಪ್ಪಟ ಭಕ್ತ ಹಾಗೂ ಅತಿ ಶ್ರದ್ಧೆಯ ಅನುಯಾಯಿಯಾಗಿದ್ದಾರೆ. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಮಾತಿನಂತೆ ನಡೆಯುತ್ತಿರುವ ಇವರು ತನ್ನ ಸಣ್ಣ ಕುಟುಂಬ ಜೊತೆಗೆ ಸುಖಿ ಜೀವನವನ್ನು ನಡೆಸುತ್ತಿದ್ದಾರೆ. ಇವರ ವೃತ್ತಿ ಹಾಗೂ ಇವರ ಸಮಾಜ ಬಗ್ಗೆ ಸೇವೆಗಳಿಗೆ ಆ ಭಗವಂತ ಇನ್ನಷ್ಟು ಆಶೀರ್ವಾದ ನೀಡಲಿ ಎಂದು ನಾವು ಪ್ರಾರ್ಥಿಸುತ್


Related Posts

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »