#ಬಜ್ಪೆ_ರಿಕ್ಷ_ದಿನೇಶಣ್ಣೆ…. 😍
ಮಂಗಳೂರು ಬಜ್ಪೆ ಊರಿನಲ್ಲೊಬ್ಬ ಆಪತ್ಬಾಂಧವ…. ನಮ್ಮ ಆಟೋ ದಿನೇಶಣ್ಣ ಬಜಪೆ.
ಎಲ್ಲೋ ಒಬ್ಬ ಆಟೋ ಚಾಲಕ ಮೀಟರ್ ಡಬಲ್ ಕೇಳಿದರೆ ನಾವು ಅವನಿಗೆ ಬಾಯಿ ತುಂಬಾ ಬೈದು ಮತ್ತೆ ಎಲ್ಲಾ ಆಟೋ ಚಾಲಕರ ಮೇಲೆ ಮುನಿಸಿಕೊಳ್ಳುತ್ತೇವೆ. ಆದರೆ ಅದೆಷ್ಟೋ ಆಟೋ ಚಾಲಕರು ತಮ್ಮ ದುಡಿಮೆಯ ಜೊತೆಗೆ ಸಮಾಜದ ಪ್ರತಿ ಒಂದು ವರ್ಗದ ಜಾತಿ ಧರ್ಮ ಭೇದ ಮರೆತು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತನ್ನ ಸೇವೆಯನ್ನು ನೀಡಿ ತನ್ನ ಜೀವನವನ್ನು ಸಮಾಜಕ್ಕೆ ಮುಡಿಪಾಗಿಟ್ಟ ಎಷ್ಟು ಆಟೋ ಚಾಲಕರು ನಮ್ಮ ಕಣ್ಣ ಮುಂದೆ ಇದ್ದಾರೆ. ಅದರಲ್ಲಿ ನಮ್ಮ ಬಜಪೆಯ ಆಪತ್ಬಾಂಧವ ದಿನೇಶಣ್ಣ ಒಬ್ಬರು…
ಶ್ರೀ ದಿನೇಶ್ ಬಂಗೇರ ಬಜಪೆ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಬಜಪೆಯಲ್ಲಿ ಆಟೋ ಚಾಲಕರಾಗಿರುವ ಇವರು ಕಳೆದ ಅನೇಕ ವರ್ಷಗಳಿಂದ ದುಡಿಮೆ ಜೊತೆಗೆ ಸಮಾಜಮುಖಿ ಕಾರ್ಯಗಳು, ಸಮಾಜದ ಕಡು ಬಡತನದಲ್ಲಿರುವ ಅಶಕ್ತರ ನೆನಪಿಗೆ ನೆರವಿಗೆ ಧಾವಿಸುವ ಆಪತ್ಬಾಂಧವ. ಕೆಲವು ವರ್ಷಗಳ ಹಿಂದೆ ನಾನು ಬಸ್ಸಿನಲ್ಲಿ ಕೈಕಂಬ ಮಾರ್ಗವಾಗಿ ಪ್ರಯಾಣಿಸುತ್ತಿದ್ದೆ ಆ ಸಂದರ್ಭದಲ್ಲಿ ಕ್ರಿಶ್ಚಿಯನ್ ವ್ಯಕ್ತಿಗೆ ಬಸ್ಸು ತಾಗಿ ಅವರು ನೆಲಕ್ಕೆ ಕುಸಿತರು ಬಸ್ಸಿನವ ಬಿಟ್ಟು ಹೋಗುವವನಿದ್ದ.. ಆ ಸಂದರ್ಭದಲ್ಲಿ ತಕ್ಷಣವೇ ದಿನೇಶಣ್ಣ ತಮ್ಮ ರಿಕ್ಷಾದಿಂದ ಹಾರಿ ಬಸ್ಸನ್ನು ನಿಲ್ಲಿಸಿ ಅಸಹಾಯಕತೆಯಲ್ಲಿ ಇದ್ದ ವ್ಯಕ್ತಿಗೆ ನ್ಯಾಯವನ್ನು ಸ್ಥಳದಲ್ಲಿ ಕೊಡಿಸುವ ಕೆಲಸ ಮಾಡಿದರು. ಇದು ನಾನು ಪ್ರತ್ಯಕ್ಷ ನೋಡಿದ ಘಟನೆ. ಅದೇ ರೀತಿ ಅದೆಷ್ಟೋ ಅಶಕ್ತರಿಗೆ ವೃದ್ಧರಿಗೆ ಸಹಾಯ ಮಾಡಿದ ಘಟನೆಗಳು ನೂರಾರು ಇದೆ.
ಬಿರುವೆರ್ ಕುಡ್ಲ ಬಜಪೆ ಘಟಕ ಎಲ್ಲರಿಗೂ ಗೊತ್ತಿರುವ ವಿಷಯ ಅವರು ಮಾಡುವ ಸೇವಾ ಯೋಜನೆಗಳು ಇಡೀ ಸಮಾಜಕ್ಕೆ ಗೊತ್ತಿರುವಂತಹ ವಿಷಯ, ಬಿರುವೆರ್ ಕುಡ್ಲ ಬಜಪೆ ಘಟಕ ಉಪಾಧ್ಯಕ್ಷರಾಗಿ ಕಳೆದ ನಾಲ್ಕು ವರ್ಷಗಳಿಂದ ಘಟಕದ ಸಮಾಜಕ್ಕೆ ಸೇವೆಗಳು ಯಶಸ್ವಿಯಾಗಿ ನಡೆಯಲು ಇವರು ಕೂಡ ಕಾರಣಿಭೂತರು. ಘಟಕದ ಪ್ರತಿಯೊಂದು ಹೆಜ್ಜೆಲ್ಲೂ ಮಾರ್ಗದರ್ಶನ ನೀಡುತ್ತಾ, ಘಟಕದ ಸ್ಪಂದನ ತಂಡಕ್ಕೆ ಧನವನ್ನು ಕೂಡಿಕರಿಸುವುದರಲ್ಲಿ ಇವರ ಪರಿಶ್ರಮ ಅಪಾರ. ಕೇಸರಿ ಆಟೋ ಚಾಲಕರ ಸಂಘ ಬಜತಪೆ ಇದರ ಒಂದು ಯಶಸ್ವಿ ಪದಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಹಿರಿಯರಲ್ಲಿ ಹಿರಿಯರಂತೆ…. ಕಿರಿಯದಲ್ಲಿ ಕಿರಿಯರಂತೆ ಅತಿ ಮುಗ್ಧತೆಯಿಂದ ಇರುವ ಇವರ ವ್ಯಕ್ತಿತ್ವ ನಮಗೆಲ್ಲ ಆದರ್ಶವಾಗಿದೆ. ಅನಾರೋಗ್ಯದಲ್ಲಿರುವವರಿಗೆ, ಬಾಣಂತಿಯರಿಗೆ, ಹಿರಿಯರಿಗೆ ಮತ್ತು ಅಪಘಾತವಾದವರಿಗೆ ತಡ ರಾತ್ರಿ ನೋಡದೆ ತಕ್ಷಣವೇ ಸ್ಪಂದಿಸುವ ವ್ಯಕ್ತಿ ನಮ್ಮ ದಿನೇಶಣ್ಣ. ಬ್ರಹ್ಮಶ್ರೀ ನಾರಾಯಣ ಗುರುಗಳ ಅಪ್ಪಟ ಭಕ್ತ ಹಾಗೂ ಅತಿ ಶ್ರದ್ಧೆಯ ಅನುಯಾಯಿಯಾಗಿದ್ದಾರೆ. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಮಾತಿನಂತೆ ನಡೆಯುತ್ತಿರುವ ಇವರು ತನ್ನ ಸಣ್ಣ ಕುಟುಂಬ ಜೊತೆಗೆ ಸುಖಿ ಜೀವನವನ್ನು ನಡೆಸುತ್ತಿದ್ದಾರೆ. ಇವರ ವೃತ್ತಿ ಹಾಗೂ ಇವರ ಸಮಾಜ ಬಗ್ಗೆ ಸೇವೆಗಳಿಗೆ ಆ ಭಗವಂತ ಇನ್ನಷ್ಟು ಆಶೀರ್ವಾದ ನೀಡಲಿ ಎಂದು ನಾವು ಪ್ರಾರ್ಥಿಸುತ್