TOP STORIES:

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು.

ಅಂದು ನಾಡು ನುಡಿ ಕಲೆ ಮತ್ತು. ಸಂಸ್ಕ್ರತಿಗಳ ನವಿರುತನಕ್ಕೆ ಹಾಗು ಸಂಘಟನ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಕೊಡುಗೆಯನ್ನು ಪರಿಗಣಿಸಿ “ನವ ಕರ್ನಾಟಕ ರತ್ನ “ ಪ್ರಶಸ್ತಿ ಗೌರವ ಪುರಸ್ಕಾರವನ್ನು ಸತೀಶ್ ಕುಮಾರ್ ಬಜಾಲ್ ಗೆ ಪ್ರಾಧಾನ ಮಾಡಲಿದ್ದಾರೆ.

ಸೌದಿ ಅರೇಬಿಯಾದ ದಮ್ಮಮ್ ನಲ್ಲಿ 24*7 ಲಭ್ಯವಾಗುವ , ಆಶಕ್ತರ ಪಾಲಿಗೆ ಆಸರೆಯಾಗುವ ಏಕೈಕ ವ್ಯಕ್ತಿ -ಸದಾ ಸಮಾಜ ಸೇವೆಗೆ ತನ್ನನ್ನು ತಾನು ತೊಡಗಿಸಿಕೊಂಡಿರುವವರು. ಅರಬ್ ರಾಷ್ಟ್ರ ಗಳಲ್ಲಿ ತೊಂದರೆಗೆ ಸಿಲುಕಿದ ಅನಿವಾಸಿ ಭಾರತೀಯರಿಗೆ ಮಿಡಿಯುವ ಹೃದಯ , ಅನಾರೋಗ್ಯ ಪೀಡಿತ ಅಸಹಾಕರಿಗೆ ಚಿಕಿತ್ಸೆ ಗೆ ಸ್ಪಂದಿಸುವ , ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹಿಸಿ ಜಾತಿ ಮತ ಭೇದವಿಲ್ಲದೆ ಸ್ಪಂದಿಸುವ ಮೂಲಕ ಜನಮನ ಗೆದ್ದಿದಾರೆ .

ಇತ್ತೀಚೆಗೆ ಯುವಕ ಮಂಡಲದ ಮೂಲಕ ತನ್ನ ಹುಟ್ಟೂರಿಗೆ ಉಚಿತವಾಗಿ ಅಂಬುಲೆನ್ಸ್ ವ್ಯವಸ್ಥೆಯನ್ನು ಮಾಡುವಲ್ಲಿ ಮಹತ್ತರ ಪಾತ್ರವನ್ನು ವಹಿಸಿರುತ್ತೀರಿ.

ಸೌದಿ ಅರೇಬಿಯಾ ದಮ್ಮಾಮ್ ನಲ್ಲಿ ಇತಿಹಾಸ ಸ್ರಷ್ಠಿಸಿದ 17 ನೇ ವಿಶ್ವ ಕನ್ನಡ ಸಮ್ಮೇಳನ ವನ್ನು ಆಯೋಜಿಸಿ ನಮ್ಮ ಜಿಲ್ಲೆ ಹಾಗೂ ರಾಜ್ಯದ ಸಂಸ್ಕತಿಯನ್ನು , ಕಲೆಯನ್ನು ಪಸರಿಸಿದ ಹಾಗೂ ಅದರ ಸ್ವಾಗತ ಸಮಿತಿ ಅದ್ಯಕ್ಷರಾಗಿ ಯಶಸ್ವಿಗೊಳಿಸಿದ ಕೀರ್ತಿ ಅವರದ್ದು. ಅಂದು ಕಾರ್ಯಕ್ರಮದಲ್ಲಿ ಅವರನ್ನು “ವಿಶ್ವ ಮಾನ್ಯ” ಪ್ರಶಸ್ತಿ 2024 (Global Man 2024 Award ). ಪುರಸ್ಕಾರ ನೀಡಿ ವಿಶ್ವ ಕನ್ನಡ ಸಂಸ್ಕತಿ ಸಂಸ್ಥೆ ಯು , ಸಮ್ಮೇಳನದಲ್ಲಿ ಗೌರವಿಸಲಾಯಿತು .ಸೌದಿ ಅರೇಬಿಯಾದ ಇತಿಹಾಸದಲ್ಲಿ ಪ್ರಥಮ ಭಾರಿಗೆ ತುಳು ಚಲನಚಿತ್ರ ಬಿಡುಗಡೆ ಮತ್ತು ಪ್ರೀಮಿಯರ್ ಶೋ. ಮಾಡಿ ಚರಿತ್ರೆ ನಿರ್ಮಿಸಿದ್ದೀರಿ. ಸೌದಿ ಹವ್ಯಾಸಿ ಕಲಾವಿದರನ್ನು ಒಟ್ಟುಸೆೇರಿಸಿ ಬಹರೇನಲ್ಲಿ ಕನ್ನಡ ಸಂಘ ಬಹರೇನ್ ಇದರ ಸಹಕಾರದೋಂದಿಗೆ ಸಂಪೂರ್ಣ ದೇವಿ ಮಹಾತ್ಮೆ ,/ಅಸುರ ವಧೆ ಯಕ್ಷಗಾನ ಪ್ರದರ್ಶನ ಮಾಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದಲ್ಲದೆ ತಾನೂ ಕೈಟಪ ಪಾತ್ರ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಿರಿ. ಸೌದಿ ಅರೇಬಿಯಾದಲ್ಲಿ ಕನ್ನಡ, ತುಳು ಸಂಸ್ಕೃತಿಯನ್ನು ಉತ್ತೇಜಿಸುವುದರ ಮೂಲಕ ಜನಮನ ಗೆದ್ದಿರುತ್ತೀರಿ.

ಸಮಾಜ ಸೇವೆ ಹಾಗೂ ಸಾಂಸ್ಕೃತಿಕ ರಂಗಕ್ಕೆನಿೇಡಿದ ಸೇವೆಯನ್ನು ಗುರುತಿಸಿ 2024 ರ ಸಾಲಿನ 49 ನೇಯ ವಾರ್ಷಿಕ ‘ಆರ್ಯಭಟ ಅಂತರ್ ರಾಷ್ಟ್ರೀಯ ಪುರಸ್ಕಾರವನ್ನು ನೀಡಿ ಗೌರವಿಸಿದರು.

ಮಂಗಳೂರು ಅಸೋಸಿಯೇಶನ್ ಸೌದಿ ಅರೇಬಿಯಾ ( MASA) ಮಾಜಿ ಅಧ್ಯಕ್ಷರು. Kudla Adventure Cultural Foundation Dammam (KAD)- ಪ್ರದಾನ ಸ್ಥಾಪಕರು. ಅಧ್ಯಕ್ಷರು : ಕರಾವಳಿ ಮಾಣಿಕ್ಯ ಸೇವ ಸಂಸ್ಥೆ (Regd.) ಮಂಗಳೂರು. ಮಾಜಿ ಪ್ರಧಾನ ಕಾರ್ಯದರ್ಶಿ : ಹವ್ಯಾಸಿ ಕಲಾವಿದರು , ದಮ್ಮಾಮ್. ಹಾಗು ಹಲವು ಸಂಘ ಸಂಸ್ಥೆಗಳ ಮಾರ್ಗದರ್ಶಕರು.

ಸಮಾಜ ಸೇವೆ ಮತ್ತು ಕೋರೋನ ಸಮಯದಲ್ಲಿ ಮಾಡಿದ ಸೇವೆಗೆ ಬಿಲ್ಲವ ಅಸೋಸಿಯೇಷನ್ Saudi Arabia Riyad – ‘ಅಪದ್ಬಾಂದವ ‘ ಬಿರುದನ್ನು 2021 ರಂದು ನೀಡಿ ಗೌರವಿಸಿದೆ.

‘MASA MAN OF THE YEAR’ ( ವರ್ಷದ ವ್ಯಕ್ತಿ- 2019 ) ಪ್ರಶಸ್ತಿ, , Corona Warrior: (ಕೋರೊನ ವಾರಿಯರ್)2021 & 22 . ಪ್ರಶಸ್ತಿಯನ್ನು – ಮಂಗಳೂರು ಅಸೋಸಿಯೇಶನ್ ಸೌದಿ ಅರೇಬಿಯಾ. Regd. ದಮ್ಮಾಮ್ ನಿೇಡಿ ಗೌರವಿಸಿದೆ.

ಸತೀಶ್ ಅಂಚನ್ ಅವರು ಅಸಂಖ್ಯಾತ ಆರ್ಥಿಕ ಬಡ ಕುಟುಂಬಗಳಿಗೆ ಸಹಾಯ ಹಸ್ತ ನೀಡಿದವರು. ಚಂದ್ರಶೇಖರ ಕುಂದರ್ ಕೊಡಿಯಾಲ್ ಬೈಲ್ ಮತ್ತು ಶಾರದ ಅಂಚನ್ ದಂಪತಿಗಳ ಪುತ್ರನಾದ ಸತೀಶ್ ಅಂಚನ್ ಅವರು ಮೂಲತಃ ಪಕ್ಕಲಡ್ಕ ಬಜಾಲ್ ನ ಕಂಕನಾಡಿಯವರು. ಚಂದ್ರಶೇಖರ ಕುಂದರ್ ದಂಪತಿಗಳ ಮೂವರು ಗಂಡು ಮಕ್ಕಳಲ್ಲಿ ಸತೀಶ್  ಕುಮಾರ್ ಅಂಚನ್ ಕಿರಿಯಾವರಾಗಿದ್ದು ಕೇವಲ ಮೂರು ವರ್ಷದವರಾಗಿದ್ದಾಗ ತಮ್ಮ ತಾಯಿಯನ್ನು ಕಳೆದುಕೊಂಡರು. ನಂತರ ಸತೀಶ್ ಅವರು ಅಜ್ಜಿ ಮತ್ತು ಚಿಕ್ಕಪ್ಪ ರಾಘವ ಅಂಚನ್ ಅವರ ಆರೈಕೆಯಲ್ಲಿ ಬೆಳೆದರು.

ಸತೀಶ್ ಅಂಚನ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಜಾಲ್‌ನ ಸೈಂಟ್ ಜೋಸೆಫ್ ಹೈಯರ್ ಪ್ರೈಮರಿ ಶಾಲೆಯಲ್ಲಿ ಪೂರ್ಣಗೊಳಿಸಿ ಮಾಧ್ಯಮಿಕ ಶಿಕ್ಷಣವನ್ನು ರೊಸಾರಿಯೊ ಹೈಸ್ಕೂಲ್‌ ನಲ್ಲಿ ಮಾಡಿದರು. ಬಳಿಕ ಪಿಯುಸಿ ಶಿಕ್ಷಣವನ್ನು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಮತ್ತು ಪದವಿಯನ್ನು ಸೈಂಟ್ ಅಲೋಶಿಯಸ್ ಈವಿನಿಂಗ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ.


Related Posts

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »