ಆದರಣೀಯ ಕ್ಷಣಗಳನ್ನು ಮತ್ತೊಮ್ಮೆ ಮರಳಿಸಿ ವಿದೇಶದ ಮಣ್ಣಲ್ಲೂ ಬಿಲ್ಲವರನ್ನು ಒಗ್ಗೂಡಿಸಿಕೊಂಡು ಒಂದು ಪಂದ್ಯಾಟ ನಡೆಸುವುದು ಕಷ್ಟ ಎಂಬ ಸನ್ನಿವೇಶದಲ್ಲಿ ಮಾಡಿಯೇ ಸಿದ್ಧ ಎಂಬ ಸ್ಪಷ್ಟ ನಿಲುವಿನೊಂದಿಗೆ ಎಲ್ಲರಿಗೂ ಇಷ್ಟವಾಗಿಸಿದ ಕ್ರಿಕೆಟ್ ಪಂದ್ಯಾಟ ಮಾಡಿ ಸೈ ಎನಿಸಿಕೊಂಡ ಖ್ಯಾತಿ ಬಿಲ್ಲವ ಸಂಘ ಪುಣೆಯದ್ದು. ಉದ್ಯೋಗ ನಿಮಿತ್ತ ವಿವಿಧ ಕಡೆಗಳಲ್ಲಿದ್ದ ಬಿಲ್ಲವರನ್ನು ಒಗ್ಗೂಡಿಸಿ ”ವಲ್ಡ್೯ ಬಿಲ್ಲವ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್” ಆಯೋಜನೆಯು ಅವಿರತ ಶ್ರಮದ ಫಲವಾಗಿದೆ.
ಇದರ ಜೊತೆಗೆ ಆರ್ಥಿಕವಾಗಿ ಹಿಂದುಳಿದ ಬಿಲ್ಲವ ಸಮಾಜದ ಬಾಂಧವರಿಗೆ “ದೇಯಿ ಸಂಜೀವಿನಿ” ಯೋಜನೆಯ ಮೂಲಕ ಆರ್ಥಿಕ ಸಬಲೀಕರಣ ಮಾಡುವ ಗಟ್ಟಿತನದ ಯೋಜನೆಯು ಶ್ಲಾಘನೀಯ.
ಬಿಲ್ಲವ ಸಮಾಜಕ್ಕಾಗಿ ಪಂದ್ಯಾಟದ ಜೊತೆಗೆ ಆರ್ಥಿಕ ಯೋಜನೆಯನ್ನು ರೂಪಿಸಿದ ರುವಾರಿ ವಿಶ್ವನಾಥ ಪೂಜಾರಿ ಕಡ್ತಲ. ಬಿಲ್ಲವ ಸಮಾಜದ ಮುಖಂಡನಾಗಿರುವ ಇವರ ಸುಮನಸ್ಸಿನ ಸದ್ವಿಚಾರದ ಚಿಂತನೆಗೆ ಸರ್ವ ಬಿಲ್ಲವರ ಪರವಾಗಿ ಹಾಗೂ ಬಿಲ್ಲವ ಸಮಾಜದ ವಿಚಾರಗಳನ್ನು ಲೋಕಕ್ಕೆ ತಿಳಿಯ ಪಡಿಸುವ ವೆಬ್ ತಾಣ ಬಿಲ್ಲವ ವಾರಿಯಸ್೯ ತಂಡದ ಪರವಾಗಿ ಹೃತ್ಪೂರ್ವಕ ಅಭಿಮಾನದ ಅಭಿನಂದನೆಗಳು.