TOP STORIES:

ದೆಹಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ : ಮೈ ಭಾರತ್ ನ ಯುವ ರಾಯಭಾರಿಯಾಗಿ ಶ್ರೀಕಾಂತ್ ಪೂಜಾರಿ‌ ಆಯ್ಕೆ


ಈ ಬಾರಿ ದೆಹಲಿಯಲ್ಲಿ ನಡೆಯುವ ಸ್ವಾತಂತ್ರೋತ್ಸವ ಕಾರ್ಯಕ್ರಮ ದಲ್ಲಿ ಮೈ ಭಾರತ್ ನವದೆಹಲಿಯ ಮೈ ಭಾರತ್ ನ ಯುವ ರಾಯಭಾರಿಯಾಗಿ ಪಾಲ್ಗೊಳ್ಳಲು ದಕ್ಷಿಣ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಶ್ರೀಕಾಂತ್ ಪೂಜಾರಿ ಬಿರಾವು ಕರ್ನಾಟಕದಿಂದ ಆಯ್ಕೆಯಾಗಿ ಪ್ರತಿನಿದಿಸಲಿದ್ದಾರೆ.

ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ , ಮೈ ಭಾರತ್ (ನೆಹರು ಯುವ ಕೇಂದ್ರ) ನವದೆಹಲಿ ಇದರ ವತಿಯಿಂದ ದೇಶದ ಪ್ರತಿ ರಾಜ್ಯದಿಂದ 15 ವರ್ಷ ದಿಂದ 28 ವರ್ಷ ವಯೋಮಿತಿ ವರೆಗಿನ ಯುವಜನರನ್ನು ನೇಮಕ ಮಾಡುತ್ತಿದ್ದು, ಕರ್ನಾಟಕ ರಾಜ್ಯ ದಿಂದ ಈ ಬಾರಿ ಶ್ರೀಕಾಂತ್ ಬಿರಾವು ವಿಶೇಷ ಯುವ ರಾಯಭಾರಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ನೆಹರು ಯುವ ಕೇಂದ್ರ ಮಂಗಳೂರಿನ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಹಾಗೂ ಆಡಳಿತಾಧಿಕಾರಿ ಜಗದೀಶ್ ಪ್ರಕಟಣೆ ನೀಡಿದ್ದಾರೆ.

ಶ್ರೀಕಾಂತ್ ಬಿರಾವು ರವರು ಹಲವಾರು ವರ್ಷಗಳಿಂದ ಯುವ ಜನರ ಸಬಲೀಕರಣಕ್ಕೆ ತೊಡಗಿಸಿಕೊಂಡಿದ್ದು ಯುವ ತರಬೇತುದಾರರಾಗಿ ರಾಜ್ಯಾದ್ಯಂತ ಒಟ್ಟು 500 ಮಿಕ್ಕಿ ಅಧಿಕ ಕಾರ್ಯಕ್ರಮಗಳನ್ನು ಅಯೋಜಿಸಿದ್ದು ಸುಮಾರು ತೊಂಬತ್ತು ಸಾವಿರ ಯುವಜನರಿಗೆ ಜೀವನ ಕೌಶಲ್ಯ, ವೃತ್ತಿ ಮಾರ್ಗದರ್ಶನ, ನಾಯಕತ್ವ ತರಬೇತಿ, ಉದ್ಯಮಶೀಲತಾ ತರಬೇತಿ ಇನ್ನಿತರ ವಿಷಯಗಳ ಕುರಿತಾಗಿ ಶಾಲಾ ಕಾಲೇಜು, ಯುವಕ ಯುವತಿ ಮಂಡಲ ಮುಂತಾದವರಿಗೆ ತರಬೇತಿ ನೀಡಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 13 ಉದ್ಯೋಗ ಮೇಳವನ್ನು ಅಯೋಜಿಸಿ ಹಲವಾರು ಯುವಜನರಿಗೆ ಉದ್ಯೋಗಕ್ಕೆ ನೇರವಾಗಿದ್ದಾರೆ.ಈಗಿನ ಸಾಮಾಜಿಕ ಪಿಡುಗುಗಳಾದ ಸಾಮಾಜಿಕ ಜಾಲತಾಣ,ಮಾದಕ ವ್ಯಸನ,ಇದರ ಕುರಿತಾಗಿ ಹಳ್ಳಿ ಹಳ್ಳಿಗಳಿಗೆ ತೆರಳಿ ಕಾರ್ಯಕ್ರಮ ವನ್ನು ಅಯೋಜಿಸಿ ಜಾಗೃತಿ ಮೂಡಿಸುತ್ತಿದ್ದಾರೆ.

ಭಾರತ ಸರಕಾರ ಮತ್ತು ರಾಜ್ಯ ಸರಕಾರದ ಹಲವಾರು ಯುವಜನ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಸಂಘಿಟಿಸಿರುತ್ತಾರೆ.ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ದೆಹಲಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಯೂತ್ ಚಾಂಪಿಯನ್ ‌ಆಗಿ ಭಾಗವಹಿಸಿದ ಇವರು ಕರ್ನಾಟಕ ಮತ್ತು ಕೇರಳದ ಕಾರ್ಯಕ್ರಮಗಳ ತೀರ್ಪುಗಾರ ರಾಗಿದ್ದಾರೆ.ಅಂತರಾಷ್ಟ್ರೀಯ ಸಂಸ್ಥೆಗಳಾದ ಯುನೈಟೆಡ್‌ ನೇಷನ್ಸ್ ಡೆವಲಪ್ಮೆಂಟ್ ‌ಪ್ರೋಗ್ರಾಮ್ ಇದರ ಜೀವನ ಕೌಶಲ್ಯ ಮತ್ತು ಉದ್ಯಮಶೀಲತಾ ತರಬೇತುದಾರರಾಗಿರುತ್ತಾರೆ.

ಯುನೈಟೆಡ್ ನೇಷನ್ಸ್ ಇಂಟರ್ನ್ಯಾಷನಲ್ ಚಿಲ್ಡ್ರನ್ ಫಂಡ್ ಇದರ ವೃತ್ತಿ ಮಾರ್ಗದರ್ಶನ ತರಬೇತುದಾರರಾಗಿದ್ದಾರೆ.ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಬೆಂಗಳೂರು ಇದರ ಜೀವನ ಕೌಶಲ್ಯ ತರಬೇತುದಾರರಾಗಿದ್ದಾರೆ. ಹಲವಾರು ಸಾಹಿತ್ಯ ಸಮ್ಮೇಳನ ,ಕವಿಗೊಷ್ಠಿಗಳಲ್ಲಿ ಭಾಗವಹಿಸಿದ ಇವರು ಉತ್ತಮ ಬರಹಗಾರರು ಇವರ ಲೇಖನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಇವರ ಯುವಜನ ಸಂಬಂಧಿಸಿದ ಸಾಧನೆಗೆ ಕರ್ನಾಟಕ ಸರಕಾರದಿಂದ ರಾಜ್ಯ ಅತ್ಯುತ್ತಮ ಜೀವನ ಕೌಶಲ್ಯ ಸುಗಮಕಾರ ಪ್ರಶಸ್ತಿ,ರಾಜ್ಯ ಯುವಜನ ಒಕ್ಕೂಟದಿಂದ ಸ್ವಾಮಿ ವಿವೇಕಾನಂದ ರಾಜ್ಯ ಸದ್ಬವನಾ ಪ್ರಶಸ್ತಿ, ಮಾಮ್ ಇನ್ಸ್ ಫೈರ್ ಆವಾರ್ಡ್,ರಾಜ್ಯ ಸಾಧನಶ್ರೀ ಪ್ರಶಸ್ತಿ, ಸಾಹಿತ್ಯ ಸರಸ್ಪತಿ ಬಿರುದು ಲಭಿಸಿದೆ.ತನ್ನ ಪ್ರಾಥಮಿಕ ಶಿಕ್ಷಣವನ್ನು ದ.ಕ.ಜಿ.ಪ ಹಿ ಪ್ರಾ ಶಾಲೆ ರಾಗಿಕುಮೇರಿ ಬಪ್ಪಳಿಗೆ,ಫ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಸ.ಪ.ಪೂ ಕಾಲೇಜು ಕೊಂಬೆಟ್ಟು,ಪದವಿ ಶಿಕ್ಷಣ ವಿವೇಕಾನಂದ ಪದವಿ ಕಾಲೇಜು ಪುತ್ತೂರು, ಅರ್ಥಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಡೆದುಕೊಂಡಿದ್ದಾರೆ.ಆಗಸ್ಟ್ 15 ರಂದು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ವಿಶೇಷ ಯುವ ರಾಯಭಾರಿಯಾಗಿ ಭಾಗವಹಿಸಲಿದ್ದಾರೆ.


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »