TOP STORIES:

ಮಹಿಳಾ ಯಕ್ಷಗಾನ ಕಲಾವಿದೆಯ ಮೇಘ ಶ್ರೀ ಕಜೆ


ಯಕ್ಷಗಾನ ರಂಗದ ಅಭಿಜ್ಞಾ ಮೇಘ ಶ್ರೀ ಕಜೆ

ನಮ್ಮ ನಾಡಿನ ಗಂಡುಕಲೆ ಯಕ್ಷಗಾನ.ಹಿಮ್ಮೇಳದಲ್ಲಿ ಭಾಗವತರ ಭಾಗವತಿಕೆಗೆ ಮುಮ್ಮೇಳದ ಕಲಾವಿದರು ಭಾರೀ ವೇಷಧರಿಸಿ ನಾಟ್ಯ ಹಾಗೂ ಮಾತುಗಾರಿಕೆಯೊಂದಿಗೆ ಅಭಿನಯಿಸುವ ಅಬ್ಬರದ ಕಲೆ ಇದಾಗಿದೆ. ತಲೆತಲಾಂತರಗಳಿಂದ ಪುರುಷರೇ ಈ ಕಲೆಯನ್ನು ಹರಸಿಕೊಂಡು ಬಂದಿರುವರು.ಆದರೆ ಈಗ ಕಾಲ ಬದಲಾಗಿದೆ ಸ್ತ್ರೀಯರು ಸಹ ಎಲ್ಲಾ ಕ್ಷೇತ್ರದಲ್ಲಿ ಮುಂದುವರಿದು ಇಂದು ಯಕ್ಷಗಾನದಲ್ಲೂ ಅನನ್ಯ ಪ್ರತಿಭೆಯಾಗಿ ಹೊರಹೊಮ್ಮಿತ್ತಿರುವರು.
ಅಂತಹ ಅನನ್ಯ ಯಕ್ಷಗಾನ ಪ್ರತಿಭೆಯಲ್ಲಿ ನಾವಿಂದು ಓರ್ವ ಮಹಿಳಾ ಯಕ್ಷಗಾನ ಕಲಾವಿದೆಯ ಬಗ್ಗೆ ತಿಳಿಯೋಣ.

ಮೇಘ ಶ್ರೀ ಕಜೆ ಮೂಲತಃ ದಕ್ಷಿಣಕನ್ನಡ ಜಿಲ್ಲೆಯ, ಮಂಗಳೂರು ತಾಲೂಕಿನ, ಕಿನ್ಯ ಗ್ರಾಮದವರು. ನಾರಾಯಣ ಕಜೆ ಪುಷ್ಪಾವತಿ ದಂಪತಿಗಳ ಸುಪುತ್ರಿ. ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ M.COM. ಸ್ನಾತಕೋತ್ತರ ಪದವಿ ವ್ಯಾಸಂಗ ಮುಗಿಸಿ ಪ್ರಸ್ತುತ ವೃತ್ತಿ ಜೀವನವನ್ನು ಆರಂಭಿಸಲಿರುವರು.

ಓರ್ವ ಮಹಿಳಾ ಯಕ್ಷಗಾನ ಕಲಾವಿದೆಯಾಗಿ ತನ್ನ ಚತುರತೆಯಿಂದ ರಂಗದಲ್ಲಿ ತನ್ನದೇ ಆದ ಹೊಸ ಛಾಪನ್ನು ಮೂಡಿಸಿರುವರು. ತಂದೆ ನಾರಾಯಣ ಕಜೆ ಇವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದು ಇವರಿಂದಲೇ ಮೇಘನಾರವರು ಯಕ್ಷಗಾನ ಕಲೆಗೆ ಪ್ರಭಾವಿತರಾಗಿರುವರು.ತಂದೆಯೇ ತನ್ನ ಮೊದಲ ಗುರು ಎನ್ನುತ್ತಾರೆ ಇವರು.ಇವರ ತಂದೆಯು ‘ಕೇಶವ ಶಿಶು ಮಂದಿರ ಕಿನ್ಯ’ ಇದರ ವ್ಯವಸ್ಥಾಪಕರಾಗಿ ಸೇವಾ ಕಾರ್ಯ ಮಾಡುತ್ತಿದ್ದಾರೆ. ತಂದೆಯ ಪ್ರೇರೇಪಣೆಯಿಂದ ಮುಂದುವರಿದ ಇವರು ಹಂತಹಂತವಾಗಿ ಯಕ್ಷಗಾನದಲ್ಲಿ ಚಿಗುರೆಲೆಯಂತೆ ಬೆಳೆದರು.ತನ್ನ ಮೂರನೇ ವಯಸ್ಸಿನಿಂದಲೇ ಬೆಂಗಳೂರು ಹಿಂದೂ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ‘ಕಿನ್ಯ ಕೇಶವ ಶಿಶು ಮಂದಿರ’ದಲ್ಲಿ ನಡೆಯತ್ತಿರುವ ಭಾರತೀಯ ಸನಾತನ ಧರ್ಮಕ್ಕೆ ಸಂಬಂಧಪಟ್ಟ ಧ್ಯಾನ, ಶ್ಲೋಕ, ಭಜನೆ, ಯೋಗ, ಸಂಸ್ಕೃತ ಮೊದಲಾದ ಸಂಸ್ಕಾರ ಭರಿತ ಶಿಕ್ಷಣದ ಕಲಿಕೆ‌ ಹಾಗೂ ಚಿಂತನಾಪರ ವಿಷಯಗಳ ಸೆಳತದ ಮುನ್ನೋಟವೇ ಮೇಘ ಶ್ರೀ ಕಜೆ.
ಸೂರ್ಯನಾರಾಯಣ ಪದಕಣ್ಣಾಯ‌ ಬಾಯಾರು ಇವರು ‘ಕೇಶವ ಶಿಶು ಮಂದಿರ ಕಿನ್ಯ’ದಲ್ಲಿ ನಡೆಸುತ್ತಿದ್ದ ಯಕ್ಷಗಾನ ತರಬೇತಿಗೆ ಮೇಘ ಶ್ರೀ ಯವರು ಆರನೇ ತರಗತಿಯಲ್ಲಿರುವಾಗಲೇ ಸೇರಿಕೊಂಡರು.ಮುಂದೆ ಗುರುಗಳ ಸುಭೀಕ್ಷೆಯಿಂದ ಸತ್ಯಭಾಮೆ ಪಾತ್ರದ ಮುಖಾಂತರ ರಂಗ ಪ್ರವೇಶಿಸಿದರು.ನಂತರ ತನ್ನ ಪ್ರೌಢ ಶಿಕ್ಷಣಾವಸ್ಥೆಯಲ್ಲಿ ಶ್ರೀ ರವಿ ಅಲೆವೂರಾಯ ವರ್ಕಾಡಿ ಹಾಗೂ ದಯಾನಂದ ಪಿಲಿಕೂರು ಇವರಿಂದ ಹೆಜ್ಜೆಗಾರಿಕೆ ಯನ್ನು ಕಲಿತರು.ಮುಂದೆ ಯಕ್ಷಗಾನ ರಂಗದಲ್ಲಿ ಬೆಳೆಯುತ್ತಾ ಪದವಿ ವ್ಯಾಸಂಗವನ್ನು ಶಾರದ ವಿದ್ಯಾ ಸಂಸ್ಥೆಯಲ್ಲಿ ಮಾಡುವ ಸಂದರ್ಭದಲ್ಲಿ ಅಷ್ಟಾವಧಾನಿ ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರದ್ವಜ್ ರವರು ಇವರ ಪ್ರತಿಭೆಯನ್ನು ಗಮನಿಸಿ ಹೆಚ್ಚಿನ ಪ್ರೋತ್ಸಾಹವನ್ನು ನೀಡಿ ಇವರ ಇನ್ನಷ್ಟು ಬೆಳವಣಿಗೆಗೆ “ಯಕ್ಷಶಾರದೆ” ಎಂಬ ತಂಡದಲ್ಲಿ ಅವಕಾಶ ನೀಡಿ ಇಂದು ಆ ತಂಡದಲ್ಲಿ ಕಲಿಯುತ್ತಾ,ಬೆಳೆಯುತ್ತಾ ಹಲವಾರು ಪಾತ್ರಗಳನ್ನು ಅಭಿನಯಿಸಿರುತ್ತಾರೆ. ನಂತರ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯಲ್ಲಿ ವ್ಯಾಸಂಗ ಮಾಡುವಾಗ ಶ್ರೀ ದೀವಿತ್ .ಎಸ್.ಕೋಟ್ಯಾನ್ ಇವರಿಂದ ಯಕ್ಷಗಾನದ ಹೆಚ್ಚಿನ ಅಧ್ಯಯನವನ್ನು ಪಡೆದು ಯಕ್ಷಮಂಗಳ ತಂಡದ ಸದಸ್ಯತ್ವವನ್ನು ಪಡೆದಿರುತ್ತಾರೆ. ಪ್ರಸ್ತುತ ಕಟೀಲು ಮೇಳದ ಕಲಾವಿದರಾದ ಅಶ್ವತ್ ಮಂಜನಾಡಿಯವರು ನಡೆಸುತ್ತಿರುವ ಊರಿನ ಯಕ್ಷಗಾನ ಸಂಘದಲ್ಲಿ ಹೆಚ್ಚಿನ ಹೆಜ್ಜೆಗಾರಿಕೆಯನ್ನು ಪಡೆಯುತ್ತಿದ್ದಾರೆ.ಹಾಗೂ ಹೆಚ್ಚಿನ ನಾಟ್ಯ,ಅರ್ಥಗಾರಿಕೆಯನ್ನು ಬೊಟ್ಟಕೆರೆ ಪುರುಷೋತ್ತಮ ಪೂಂಜ ಹಾಗೂ ಶೇಖರ್ ಶೆಟ್ಟಿಗಾರ್ ಇವರಿಂದ ಪಡೆಯುತ್ತಿರುವರು.

ದಿನ ಕಳೆದಂತೆ ಯುವ ಪ್ರತಿಭೆಯ ಕಲಾ ಸೀಮೆಯು ಹೆಚ್ಚುತ್ತಾ ಹೋಯಿತು.ರಂಗದಲ್ಲಿ ಪರಿಣಿತಳಾಗಿ ಅವಕಾಶ ದೊರೆತಂತೆ ಅಭಿನಯಿಸಿ ಇಂದು ಮುನ್ನೂರಕ್ಕೂ ಹೆಚ್ಚು ವೇದಿಕೆಗಳಲ್ಲಿ ಪ್ರದರ್ಶನ ನೀಡಿರುವರು. ಇವರು ಕೌಶಿಕೆ, ಶ್ರೀದೇವಿ, ಸತ್ಯಭಾಮೆ, ಕೃಷ್ಣ, ವಿಷ್ಣು, ಮನ್ಮಥ, ರತಿ, ದೇವೇಂದ್ರ, ಶ್ವೇತ ಕುಮಾರ, ಮೇಘಮುಖಿ, ಪದ್ಮಾವತಿ, ಹನುಮಂತ, ತ್ರೈಲೋಕ ಸುಂದರಿ, ಲಕ್ಷ್ಮಿ, ಜಾಂಬವಂತ, ಭ್ರಮರಕುಂತಳೆ, ಮೋಹಿನಿ, ಮಾಯ ಶೂರ್ಪನಕಿ, ಮಾಯ ಪೂತನಿ, ಬಲರಾಮ, ರೇಣುಕೆ, ಸುಗ್ರೀವ, ಅಭಿಮನ್ಯು, ವನದೇವಿ, ಗುಣಸುಂದರಿ, ಚಿತ್ರಾಂಗದೆ ,ಮಾಯ ತಾಟಕಿ ಪಾತ್ರಗಳಲ್ಲಿ ಅಭಿನಯಿಸಿದ ಅನುಭವ ಇವರದ್ದು.ಪುಂಡುವೇಷ ಸ್ತ್ರೀ ವೇಷಗಳಲ್ಲಿಯೂ ತನ್ನ ಅದ್ಭುತ ಆಕರ್ಷಕ ನಟನೆ,ನೃತ್ಯ ಅಭಿನಯದ ಮುಖಾಂತರ ಜನರ ಮನಸ್ಸನ್ನು ಗೆದ್ದಿರುವರು.ತ್ರಿಭಾಷೆಗಳಾದ ಕನ್ನಡ, ತುಳು, ಹಿಂದಿಯಲ್ಲಿ ಯಕ್ಷಗಾನವನ್ನು ಮಾಡಿದ ಹೆಗ್ಗಳಿಕೆ ಇವರದ್ದು.ತನ್ನ ನೆಲೆ ಬಿಟ್ಟು ದೂರದ ಮೈಸೂರು,ಮುಂಬೈನಂತಹ ಊರಿನಲ್ಲಿ ತನ್ನ ಯಕ್ಷಗಾನ ಕಲೆಯನ್ನು ಪ್ರದರ್ಶಿಸಿ ಯಕ್ಷಗಾನದ ಕಂಪನ್ನು ಸೂಸಿರುವರು.

ತನ್ನ ವೈಚಾರಿಕ ದೃಷ್ಟಿಕೋನದಿಂದ ಚಿಂತನಾಪರ ವ್ಯಕ್ತಿತ್ವ ಹೊಂದಿದ ಇವರು ಎಲ್ಲಾ ಕ್ಷೇತ್ರದಲ್ಲಿಯೂ ಆಸಕ್ತಿ ತೋರಿ ತನ್ನ ಜೀವನದ ಬೇರನ್ನು ಇಂದೇ ಬಲಿಷ್ಠ ಮಾಡಿರುವರು. ಯಕ್ಷಗಾನ ಮಾತ್ರವಲ್ಲದೆ ನೃತ್ಯ, ನಾಟಕ, ಸಂಗೀತ, ಅಭಿನಯಗೀತೆ, ಲೇಖನ, ಭಾಷಣ, ಪ್ರಬಂಧ ರಚನೆ, ಕ್ರೀಡೆ, ನಿರೂಪಣೆ, ಪಠ್ಯದಲ್ಲಿ ವಿಶೇಷ ಅಧ್ಯಯನ, ಏಕಪಾತ್ರಾಭಿನಯ ಹೀಗೆ ಸಾಂಸ್ಕೃತಿಕ ಕಲೆಗಳಲ್ಲಿ ಸೈ ಎನಿಸಿಕೊಂಡು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.ಕಲಿಯುತ್ತಿರುವಾಗಲೆ ಜಿಲ್ಲಾ ಮಟ್ಟದ ‘ಪ್ರತಿಭಾಕಾರಂಜಿ’ ಸ್ಪರ್ಧೆಗಳಲ್ಲಿ ಯಕ್ಷಗಾನ ಹಾಗೂ ನೃತ್ಯದಲ್ಲಿ ಭಾಗವಹಿಸಿ ಬಹುಮಾನ ಗಿಟ್ಟಿಸಿಕೊಂಡಿರುವ ಚತುರೆ. ಪದವಿಪೂರ್ವ ಶಿಕ್ಷಣದ ಸಂದರ್ಭದಲ್ಲಿ ಕಾಲೇಜಿನ ಅತಿ ಪ್ರತಿಭಾನ್ವಿತೆ ಎಂಬ ಬಿರುದನ್ನು ಪಡೆದಿರುತ್ತಾರೆ. ಜಿಲ್ಲಾ ಮಟ್ಟದ ಕಬಡ್ಡಿ ಹಾಗೂ ಹ್ಯಾಂಡ್ ಬಾಲ್ ನಲ್ಲೂ ಭಾಗವಹಿಸಿ ಕ್ರೀಡಾ ಕ್ಷೇತ್ರದಲ್ಲೂ ಸಾಧನೆಯನ್ನು ಮಾಡಿರುವ ಅಪ್ರತಿಮ ಪ್ರತಿಭೆ ಮೇಘ ಶ್ರೀ ಕಜೆ.

ಕಲಿಯುತ್ತಾ ಬೆಳೆಯುವ ಈ ಪ್ರತಿಭೆಯು ತಾನು ಓರ್ವ ಸಣ್ಣ ಕಲಿಕಾರ್ತಿ ಎನ್ನುತ್ತಾರೆ.ಗ್ರಾಮದ ಅಧಿದೇವತೆ ತಲಪಾಡಿ ಶ್ರೀ ದುರ್ಗಾ ಪರಮೇಶ್ವರಿ ಅಮ್ಮ ನವರ ಅನುಗ್ರಹ ಹಾಗೂ ಪ್ರತಿಭೆಯನ್ನು ಪ್ರೋತ್ಸಾಹಿಸಿದ ತನ್ನ ಅಣ್ಣಂದಿರು, ಹಿರಣ್ಮಯ ಹಿರಿಯಡ್ಕ,ಮಧ್ವರಾಜ್ ಅಡಿಗ, ಮನೆಯವರು, ಕುಟುಂಬಸ್ಥರು, ಗುರುಗಳು, ಸ್ನೇಹಿತರು ಹಾಗೂ ಸಂಘದ ಎಲ್ಲಾ ಕಾರ್ಯಕರ್ತರಿಗೆ ಇವರು ಚಿರರುಣಿಯಾಗಿರುತ್ತಾರೆ.

ಕೊರೋನಾ ಸಂದರ್ಭದಲ್ಲಿಯೂ ಇವರದ್ದು ಬಿಡದ ಯಕ್ಷಗಾನದ-ಪ್ರೇಮ. ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಆಯೋಜಿಸಿದ್ದ ” ದಿತ್ತ. ಧಿಮಿ.. ಗೆಜ್ಜೆಯ- ಹೆಜ್ಜೆ ” ಯಕ್ಷ ವಿಡಿಯೋ ಸ್ಪರ್ಧೆ- 2020, ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಯಾಗಿ, ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿರುವುದು ಯಕ್ಷಗಾನದ ಮೇಲಿನ ಪ್ರೇಮವನ್ನು ಬಿಂಬಿಸುತ್ತದೆ.ಅದೇನೆ ಆಗಲಿ ಯಕ್ಷಗಾನದ ಹರಿವು ಇವರ ರಕ್ತದ ಕಣಕಣದಲ್ಲಿ ಸೇರಿಕೊಂಡಿದೆ ಎಂಬುದಕ್ಕೆ ಈ ಪುರಸ್ಕಾರ ಸತ್ಯ‌ ಸಾಕ್ಷಿಯಾಗಿದೆ.

ಯಕ್ಷಗಾನದ ಅಭಿಜ್ಞಾ ಮೇಘ ಶ್ರೀ ಕಜೆ ಇವರನ್ನು ಹಲವಾರು ಸಂಘ ಸಂಸ್ಥೆಗಳು ಗುರುತಿಸಿ ಕದ್ರಿ ಕದಳಿ, ಕುಂಪಲ, ಸರಯೂ ಬಾಲ ಯಕ್ಷವೃಂದ, ಮಂಜನಾಡಿ, ಶಿವರಂಜಿನಿ ಮಕ್ಕಳ ಮೇಳ ಬೆಟ್ಟಂಪಾಡಿ, ಕೊಣಾಜೆ ಹೀಗೆ ಹಲವಾರು ಸಂಸ್ಥೆಗಳು ಯಕ್ಷಗಾನ ಪಾತ್ರಾಭಿನಯಿಸಲು ಆಹ್ವಾನಿಸಿರುವರು. ರಂಗದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಇವರ ಕಾರ್ಯದಕ್ಷತೆಯನ್ನು ಮೆಚ್ಚಿದ ಕಲಾಪ್ರೇಮಿಗಳಿಂದ ತನ್ನದೇ ಆದ ಸಣ್ಣ ಅಭಿಮಾನಿ ಬಳಗವನ್ನು ಈ ಮೂಲಕ ಸೃಷ್ಟಿಸಿದ್ದಾರೆ.

ನಿಮ್ಮ ದಿವ್ಯ ಪ್ರತಿಭೆಯು ಇನ್ನಷ್ಟು ಉತ್ತುಂಗಕ್ಕೇರಲಿ.ಯಕ್ಷಗಾನದಲ್ಲಿ ಪ್ರಜ್ವಲಿಸುವ ಓರ್ವ ಅತ್ಯುತ್ತಮ ಯಕ್ಷಗಾನ ಕಲಾವಿದೆಯಾಗಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ನೀವು ಮೆರೆಯಬೇಕೆಂಬುದೇ ನಮ್ಮ ಆಶಯವಾಗಿದೆ.ಈ ನಿಟ್ಟಿನಲ್ಲಿ ಆ ದೇವರ ಆಶೀರ್ವಾದ ನೀವಿಡುವ ಪ್ರತೀ ಹೆಜ್ಜೆಯಲ್ಲೂ ಸದಾ ನಿಮ್ಮ ಮೇಲಿರಲಿ.

billavaswarriors.com

ಬರಹ- ತೃಪ್ತಿ.ಜಿ.ಕುಂಪಲ.


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »