ಉದಯ ಪೂಜಾರಿ ಬಳ್ಳಾಲ್ ಭಾಗ್ ಸ್ಥಾಪಕ ಅಧ್ಯಕ್ಷತೆಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿರುವೆರ್ ಕುಡ್ಲ (ರಿ) ಮಂಗಳೂರು ಇದರ ಅಂಗ ಸಂಸ್ಥೆಯಾದ ಬಿರುವೆರ್ ಕುಡ್ಲ (ರಿ) ಬೆಳ್ತಂಗಡಿ ಘಟಕ ದ 30ನೇ ಸೇವಾ ಯೋಜನೆ ಯನ್ನು ಬೆಳ್ತಂಗಡಿ ತಾಲೂಕಿನ ಮದ್ದಡ್ಕ ನಿವಾಸಿ ಸುರೇಶ್ ಮೈರಳಿಕೆ ಇವರ ಮನೆಗೆ ನೀಡಲಾಯಿತು.
ಸುರೇಶ್ (44ವರ್ಷ) ಇವರು ಆಟೋ ಚಾಲಕರಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿರುವ ಬಡತನದ ಕುಟುಂಬ. ಇತ್ತೀಚಿಗೆ ಸುರೇಶ್ ರವರಿಗೆ ಮೆದುಳಿನ ರಕ್ತ ಸ್ರಾವ
ಸಂಭವಿಸಿದ್ದು, ಕೊರೊನಾ ಮಹಾಮಾರಿಯ ಲಾಕ್ ಡೌನ್ ನಿಂದ ತತ್ತರಿಸಿರುವ ಈ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಯೂ ಸುರೇಶ್ ಇವರ ಕುಟುಂಬಕ್ಕೆ ದೊಡ್ಡ ಹೊಡೆತವಾಗಿದೆ.ಸುರೇಶ್ ಇವರ ಕುಟುಂಬವೂ ಸಹೃದಯಿ ದಾನಿಗಳ ನೀರಿಕ್ಷೆಯಲ್ಲಿರುವುದನ್ನು ಮನಗಂಡ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕವು ತುರ್ತಾಗಿ
ಬ್ರಹ್ಮಶ್ರೀ ಸೇವಾ ನಿಧಿಯಿಂದ 30ನೇ ಯೋಜನೆಯಾಗಿ ₹10,000/- ದ ಚೆಕ್ ನ್ನು ಸ್ಥಳೀಯರಾದ ಶ್ರೀಮತಿ ಪದ್ಮರವೀಂದ್ರ ಪೂಜಾರಿ ಇವರ ಮುಖಾಂತರ ನೀಡಲಾಯಿತು.
ಈ ಸಂದರ್ಭದಲ್ಲಿ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ರಾಜೇಶ್ ಕೋಟ್ಯಾನ್, ಕೋಶಾಧಿಕಾರಿ ಹರ್ಷ ಕೋಟ್ಯಾನ್, ಸಂಚಾಲಕರಾದ ವಿನಯ್ ಗುರಿಪಲ್ಲ,ಉಪಸ್ಥಿತರಿದ್ದರು. ಹಾಗೂ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕ ದ 31ನೇ ಸೇವಾ ಯೋಜನೆಯಾಗಿ ಕೊರೊನಾದ ಎರಡನೇ ಅಲೆಯಲ್ಲಿ ಕಷ್ಟದಲ್ಲಿರುವ ಆಯ್ದ ಮನೆಗಳಿಗೆ ಪುಂಜಾಲಕಟ್ಟೆ,ಕಿಲ್ಲೂರು, ಉಜಿರೆ,ಪರಿಸರದ ಮನೆಗಳಿಗೆ ತೆರಳಿ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ನೀಡಲಾಯಿತು.
ಸಂಚಾಲಕರಾದ ಮಧುಕರ್ ಪುಂಜಾಲಕಟ್ಟೆ,ಪ್ರಸಾದ್ ಕಿಲ್ಲೂರು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.