ಬಿರುವೆರ್ ಕುಡ್ಲ (ರಿ) ಬೆಳ್ತಂಗಡಿ ಘಟಕ
‘ಬ್ರಹ್ಮಶ್ರೀ ‘ ಸೇವಾಯೋಜನೆ
ಲಾಕ್ಡೌನ್ ಸಮಯದಲ್ಲಿ ಘಟಕದ ವಿಶೇಷ ಸೇವಾ ಯೋಜನೆ
ಉದಯ ಪೂಜಾರಿ ಬಳ್ಳಾಲ್ಭಾಗ್ ಸ್ಥಾಪಕಾಧ್ಯಾಕ್ಷತೆಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಬಿರುವೆರ್ ಕುಡ್ಲ (ರಿ.) ಮಂಗಳೂರುಇದರ ಅಂಗಸಂಸ್ಥೆಯಾದ ಬಿರುವೆರ್ ಕುಡ್ಲ (ರಿ)ಬೆಳ್ತಂಗಡಿ ಘಟಕದ 33ನೇ ಬ್ರಹ್ಮಶ್ರೀ ಸೇವಾ ಯೋಜನೆಯನ್ನು ಪ್ರತಿಭಾನ್ವಿತೆಕುಮಾರಿ ಚೈತ್ರ ಗಾಣಿಗ ಕಲ್ಲಡ್ಕ ಇವರಿಗೆ ನೀಡಲಾಯಿತು.
ಚೈತ್ರ ಗಾಣಿಗ ಇವರ ತಂದೆಯ ಸುಮಾರು 7ವರುಷಗಳ ಹಿಂದೆ ಅಕಾಲಿಕ ಮರಣ ನಂತರ ಎರಡು ಹೆಣ್ಣು ಮಕ್ಕಳಿರುವ ಕುಟುಂಬವುಕಷ್ಟದಿಂದ ಕೂಡಿತ್ತು. ಮನೆಯ ಆಧಾರಸ್ಥಂಬವಾದ ಚೈತ್ರ ಗಾಣಿಗ ಕಲ್ಲಡ್ಕ ಇವರು ತನ್ನ ಮಧುರ ಕಂಠದಿಂದ ಹಾಡಿನ ಮೂಲಕಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಜೀವನಸಾಗಿಸುತ್ತಿದ್ದರು. ಇತ್ತೀಚಿಗೆ ಕೋರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಇವರ ಕುಟುಂಬನಿರ್ವಹಣೆಯ ಕಷ್ಟವನ್ನು ಅರಿತ
ಗಾಯಕರಾದ ಪ್ರಸಾದ್ ಸಾಲ್ಯಾನ್ ಕಟ್ಟತ್ತಿಲ ಇವರು ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕ್ಕೆ ತಿಳಿಸಿರುತ್ತಾರೆ.ತಕ್ಷಣ ಕಾರ್ಯಪ್ರವೃತರಾದಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕವೂ ಸರ್ವ ಸದಸ್ಯರೆಲ್ಲರ ಒಟ್ಟು ಸಹಕಾರದಿಂದ ಹೊಲಿಗೆ ಯಂತ್ರ ವನ್ನು ನೀಡಲಾಯಿತು ಈಸಂದರ್ಭದಲ್ಲಿ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ರಾಜೇಶ್ ಕೋಟ್ಯಾನ್, ಕೋಶಾಧಿಕಾರಿ ಹರ್ಷಕೋಟ್ಯಾನ್‌ಮದ್ದಡ್ಕ,ಸಂಚಾಲಕರಾದ ವಿನಯ್ ಗುರಿಪಲ್ಲ,ಉಜಿರೆ ವಲಯ ಸಂಚಾಲರಾದ ಸುಧೀರ್ ಪೆರ್ಲ,ಯೂಪ್ಲಸ್ ವಾಹಿನಿಯದಿನೇಶ್ ಕೋಟ್ಯಾನ್ ಹಾಗೂ ಗಾಯಕರಾದ ಪ್ರಸಾದ್ ಸಾಲ್ಯಾನ್ ಕಟ್ಟತ್ತಿಲ ಉಪಸ್ಥಿತರಿದ್ದರು.