TOP STORIES:

ಪಣಂಬೂರು-ಕುಳಾಯಿ ಘಟಕ ನೊಂದವರ ಬಾಳಿಗೆ ಆಶಾ ಕಿರಣ


ಬಡತನ ಶಾಪವಲ್ಲ, ಆದರೆ ಅದನ್ನು ಸವಲಾಗಿ ಸ್ವೀಕರಿಸಬೇಕು ಎನ್ನುತ್ತಾರೆ. ಇಲ್ಲೊಬ್ಬಳು ಅಂತಹ ಮಹಾತಾಯಿ ತನ್ನಮಗುವನ್ನು ಕಳೆದ 14 ವರ್ಷಗಳಿಂದ ಕಷ್ಟಪಟ್ಟು ಸಾಕುತ್ತಿದ್ದಾರೆ.  ಹೌದು ಮಿತ್ರರೇ ಇದಕ್ಕೆ ಸಾಕ್ಷಿ ಸುರತ್ಕಲ್ ಇಡ್ಯಾ ಗ್ರಾಮದ ಜನತಾಕಾಲೋನಿ ನಿವಾಸಿ ಉಮೇಶ್ ಮತ್ತು ಮೀರಾ ದಂಪತಿಗಳು. ಇವರಿಗೆ ಇಬ್ಬರು ಮಕ್ಕಳು. ಪವನ್ ಹುಟ್ಟಿನಿಂದಲೇ ಅಂಗವಿಕಲ. ಇದೀಗ ಅವನಿಗೆ 14 ವರ್ಷ ಪ್ರಾಯ. ಶರೀರದಲ್ಲಿ ಬಲವಿಲ್ಲದೆ ತಾಯಿಯನ್ನೇ ಆಶ್ರಯಿಸಿದ್ದು .ತಂದೆ ಹೃದಯ ಸಂಬಂದಿಸಿದಕಾಯಿಲೆಯಿಂದ ಬಳಲು ತ್ತಿದ್ದರೂ ಜೀವನೋಪಾಯಕ್ಕೆ ಹೋಟೆಲ್ ನಲ್ಲಿ  ಕೆಲಸ ಮಾಡುತ್ತಿದ್ದಾರೆ. ಇವರ ಕಷ್ಟದ ದಿನಗಳಲ್ಲಿ ಸದಾಭಾಗಿಯಾಗುತ್ತಾ.. ಯುವವಾಹಿನಿ ಪಣಂಬೂರುಕುಳಾಯಿ ಘಟಕ ಗುರುತಿಸಿ ಘಟಕದ ಮಾಜಿ ಅಧ್ಯಕ್ಷರಾದ ಸಂಜೀವ ಸುವರ್ಣರವರ ಮುಂದಾಳತ್ವದಲ್ಲಿ, ಘಟಕದ ಸದಸ್ಯರುಗಳಿಂದ, ಹಾಗೂ ಕೊಡುಗೈ ದಾನಿಗಳ ನೆರವಿನಿಂದ  ಅಂಗವಿಕಲನಾಗಿರುವ ಪವನ್ ಗೆಎರಡು ಕಾಲುಗಳಿಗೆ ಬಲ ಬರಲು 32,500/- ಬೆಲೆಯ ” Ankle boot ” ಮಾಡಿಸಿ ಕೊಡಲಾಯಿತು. ಅಲ್ಲದೆ ಹೆಣ್ಣು ಮಗಳವಿದ್ಯಾಭ್ಯಾಸಕ್ಕೆ ನೆರ ವಾಗಲೆಂದು,ನಮ್ಮ ಘಟಕದ ಸದಸ್ಯರಾದ   ಶಶಾಂಕ್ ಕೋಟ್ಸ್ಯೆಯ್ಯಾಡಿ, ಮಂಗಳೂರಿನ ಮಾಲಕರಾದಶ್ರೀ ಬಾಲಕೃಷ್ಣ N.ರವರ ನೆರವಿನೊಂದಿಗೆ  5000/-ರೂಪಾಯಿಯನ್ನು ದಿನಾಂಕ 13.7.2021ರಂದು ಘಟಕದ ಅಧ್ಯಕ್ಷರಾದ ಹರೀಶ್  ಪೂಜಾರಿ ಯವರು ಹಸ್ತಾoತರಿಸಿದರು. ಇದೇ  ಬಡ ಕುಟುಂಬಕ್ಕೆ  ನಮ್ಮ ಘಟಕವು ಮಾಜಿ ಅಧ್ಯಕ್ಷರಾದ ಸಂಜೀವ ಸುವರ್ಣರವರನೇತೃತ್ವದಲ್ಲಿ 2014-15 ರಲ್ಲಿ ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗಿತ್ತು. ಕಾರ್ಯಕ್ರಮದಲ್ಲಿ ಘಟಕದಅಧ್ಯಕ್ಷರಾದ ಹರೀಶ್ ಪೂಜಾರಿ, ನಿಕಟ ಪೂರ್ವ ಅಧ್ಯಕ್ಷರಾದ ಸುರೇಶ್ ಪೂಜಾರಿ, ಮಾಜಿ ಅಧ್ಯಕ್ಷರಾದ ಸಂಜೀವಸುವರ್ಣ,ಸದಾನಂದ ಪೂಜಾರಿ ಕುಳಾಯಿ.. ಮತ್ತಿತರರು ಉಪಸ್ಥಿತರಿದ್ದರು.


Related Posts

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »