ಗುರುಬೆಳದಿಂಗಳು ಕುದ್ರೋಳಿ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 167ನೇ ಜನ್ಮದಿನಾಚರಣೆ ಅಂಗವಾಗಿ ಮಹಾಮಾತೆ ದೇಯಿ ಬೈದೆತಿಯ ಸಂಕಲ್ಪದಂತೆ ಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ತತ್ವದಂತೆ ಚರ್ಚ್, ದರ್ಗಾ, ಬಸದಿ, ದೈವಸ್ಥಾನ, ದೇವಸ್ಥಾನ, ಗುರುದ್ವಾರ, ಗರೋಡಿಗಳಲ್ಲಿ ಅಳಿವಿನಂಚಿನಲ್ಲಿರುವ ಔಷಧೀಯ ಸಸ್ಯಗಳನ್ನು ನೆಡುವ ಯೋಜನೆಗೆ ಶ್ರೀ ಗೆಜ್ಜೆಗಿರಿ ನಂದನಬಿತ್ತ್‌ಲ್ ಕ್ಷೇತ್ರದಲ್ಲಿ ಶುಕ್ರವಾರ ಅದ್ದೂರಿ ಚಾಲನೆ ದೊರಕಿತು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ, ಗುರುಪೂಜೆ ನೆರವೇರಿತು. ಗುರು ಬೆಳದಿಂಗಳು ಸಂಸ್ಥೆ ಅಧ್ಯಕ್ಷ ಪದ್ಮರಾಜ್ ಆರ್., ಕುದ್ರೋಳಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉದ್ಯಮಿ ಶೈಲೇಂದ್ರ ಸುವರ್ಣ, ಅನುಷ್ಕಾ ಬಿಲ್ಡರ್ಸ್‌ನ ಕಿಶೋರ್ ದಂಡೆಕೇರಿ, ಗುರು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಎಂ.ಜಯಾನಂದ, ಯುವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರಾದ ಜಯರಾಮ ಕಾರಂದೂರು, ಅಶೋಕ್ ಕುಮಾರ್, ಡೆಕೊರೇಟರ್ ರೋಹಿದಾಸ್, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ನಮ್ಮ ಕುಡ್ಲ ಚಾನೆಲ್ ನಿರ್ದೇಶಕ ಲೀಲಾಕ್ಷ ಕರ್ಕೇರ, ಉರ್ವ ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾದ ಬಿ.ಪಿ ಹರೀಶ್, ಕುದ್ರೋಳಿ ದೇವಳದ ಮ್ಯಾನೇಜರ್ ವಿನೀತ್ ಕುಮಾರ್, ರಾಮಚಂದ್ರ, ಶೋಭಾ ಮೊದಲಾದವರಿದ್ದರು.
ಶ್ರೀಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲು ,ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ ಕಾರ್ಯದರ್ಶಿ, ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಕೆ.ಬಿ ರಾಜರಾಮ್, ಪ್ರಮುಖರಾದ ಶ್ರೀಕರ್ ಪ್ರಭು, ರಘುನಾಥ್ ಮಾಬೆನ್ ಉಡುಪಿ, ಚಂದ್ರಕಾಂತ್ ಶಾಂತಿವನ, ಪ್ರವೀಣ್ ನೆಟ್ಟಾರ್, ರಾಮಚಂದ್ರ ಪೂಜಾರಿ ದೇರೆಬೈಲ್, ಹರೀಶ್ ಪೂಜಾರಿ ಮಂಗಳೂರು, ಪ್ರವೀಣ್ ಅಂಚನ್ ಅರ್ಕುಳ, ರಾಜೇಶ್ ಸುವರ್ಣ, ಜನಾರ್ದನ ಪೂಜಾರಿ ಪಡುಮಲೆ ಚಂದ್ರಶೇಖರ್ ಸಾಲಿಯಾನ್ ಕಲ್ಲಡ್ಕ ಸದಾನಂದ ಪೂಜಾರಿ ಬರಿಮಾರ್, ಸುರೇಶ್ ಪೂಜಾರಿ ಪಣಂಬೂರು, ಸದಾನಂದ ಕುಳಾಯಿ, ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಶನ್‌ನ ಚಂದ್ರಶೇಖರ ಪೂಜಾರಿ ಮೊದಲಾದವರಿದ್ದರು.